fbpx
ಸಮಾಚಾರ

‘ವಾರ್ಡ್ ನಂಬರ್ 11’ ಸೇರಿಕೊಂಡ ರಾಘಣ್ಣ.

ಬರೋಬ್ಬರಿ 15 ವರ್ಷಗಳ ಬಳಿಕ ಮತ್ತೆ ಸಿನಿಮಾಗಳ ಕಡೆ ಮರಳಿರುವ ರಾಘವೇಂದ್ರ ರಾಜ್‍ಕುಮಾರ್ ಒಂದರ ಹಿಂದೊಂದು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಅಮ್ಮನ ಮನೆ’, ‘ತ್ರಯಂಬಕಂ’, ನಂತರ ಸದ್ಯ ‘ಪೊಗರು’ ಹಾಗೂ ‘ಆಡಿಸಿದಾತ’ ಚಿತ್ರಗಳಲ್ಲಿ ನಟಿಸುತ್ತಿರುವ ರಾಘಣ್ಣ ಇದರ ಬೆನ್ನಲ್ಲೇ ಈಗ ‘ವಾರ್ಡ್ ನಂಬರ್ 11’ ವನ್ನು ಒಪ್ಪಿಕೊಂಡಿದ್ದಾರೆ. ನಿನ್ನೆಯ ಗೌರಿ ಗಣೇಶ ಹಬ್ಬದ ಸಂಭ್ರಮದಲ್ಲಿ ‘ವಾರ್ಡ್ ನಂಬರ್ 11’ ಟೈಟಲ್ ಲಾಂಚ್ ಆಗಿದೆ.

 

 

ಈ ಚಿತ್ರಕ್ಕೆ ಶ್ರೀಕಾಂತ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರಕ್ಕೆ ರಾಘವೇಂದ್ರ ರಾಜ್‌ಕುಮಾರ್ ಪುತ್ರ ವಿನಯ್ ರಾಜ್‌ಕುಮಾರ್ ಶುಭ ಹಾರೈಸಿದ್ದಾರೆ. ಈ ಸಿನೆಮಾಗೆ ಸುರೇಂದ್ರನಾಥ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ವಿ.ನಾಗೇಂದ್ರ ಪ್ರಸಾದ್, ಜಯಂತ್ ಕಾಯ್ಕಿಣಿ, ತಪಸ್ವಿ ಸಾಹಿತ್ಯ ನೀಡಿದ್ದಾರೆ.

ಹೊಸಬರ ತಂಡ ಹೊಸತರನಾದ ಕತೆಯೊಂದಿಗೆ ಸಿನಿಮಾ ಮಾಡಲು ಮುಂದೆ ಬಂದಿದ್ದು, ಸಂದೀಪ್​ ಶಿವಮೊಗ್ಗ ಹಾಗೂ ಗುರುರಾಜ್​ ಎ ಅವರು ನಿರ್ಮಿಸುತ್ತಿರುವ ಈ ಸಿನಿಮಾ ಮುಹೂರ್ತ ಇದೇ ವಾರದಲ್ಲಿ ನಡೆಯಲಿದೆಯಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top