fbpx
ಸಮಾಚಾರ

ದರ್ಶನ್ ‘ರಾಬರ್ಟ್‌’ ಚಿತ್ರಕ್ಕೆ ಶಿವಮೊಗ್ಗದ ಮಿಸ್‌ ಸೂಪರ್‌ನ್ಯಾಷನಲ್‌ ನಾಯಕಿಯಾಗಿ ಆಯ್ಕೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ‘ರಾಬರ್ಟ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ದರ್ಶನ್ ಸಿನಿಮಾ ಅಂದರೆ ಸಾಕು ಅವರಿಗೆ ನಾಯಕಿಯಾಗಿ ಯಾರು ಬರುತ್ತಾರೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿರುತ್ತಾರೆ. ಇದೀಗ ಅವರ ಕುತೂಹಲಕ್ಕೆ ತೆರೆಬಿದ್ದಿದ್ದು, ರಾಬರ್ಟ್ ಸಿನಿಮಾದಲ್ಲಿ ದರ್ಶನ್‍ಗೆ ಜೋಡಿಯಾಗಿ ಕನ್ನಡದ ಹುಡುಗಿ ಆಯ್ಕೆಯಾಗಿದ್ದಾಳೆ.

 

 

ಆಶಾ ಭಟ್​ ಎಂಬಾಕೆ ದರ್ಶನ್​ ಪಕ್ಕ ರಾಬರ್ಟ್​ ಸಿನಿಮಾದಲ್ಲಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಅದರಲ್ಲೂ ವಿಶೇಷತೆ ಎಂದರೆ ಆಶಾ ಭಟ್​ ನಮ್ಮ ಕರುನಾಡಿನ ಕನ್ನಡಿತಿಯಾಗಿರುವುದು. ಅದಕ್ಕೆ ತರುಣ್​ ಸುದೀರ್​ ನಮ್ಮ ಕನ್ನಡತಿ ಮಿಸ್​ ಸುಪ್ರನ್ಯಾಷನಲ್​ ಆಶಾ ಭಟ್​ ಅವರಿಗೆ ‘ರಾಬರ್ಟ್​’ ಕುಟುಂಬಕ್ಕೆ ಸ್ವಾಗತ ಎಂದು ಟ್ವೀಟ್​ ಮಾಡಿದ್ದಾರೆ.

ಆಶಾ ಭಟ್ ಯಾರು?
ಆಶಾ ಭಟ್ ಮೂಲತಃ ಕರ್ನಾಕಟದ ಭದ್ರಾವತಿಯವರಾಗಿದ್ದಾರೆ. 2014ರಲ್ಲಿ ಮಿಸ್‍ಸೂಪರ್ ಇಂಟರ್ ನ್ಯಾಷನಲ್ ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದು ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದರು. ಇವರು ಎಲೆಕ್ಟ್ರಾನಿಕ್ಸ್ ನಲ್ಲಿ ಎಂಜಿನಿಯರ್ ಪದವೀಧರೆಯಾಗಿದ್ದಾರೆ. ಮೊದಲಿಗೆ ಆಶಾ ಭಟ್ ರೂಪದರ್ಶಿಯಾಗಿ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು.

ಉಳಿದಂತೆ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ವಿರುದ್ಧ ಖ್ಯಾತ ಖಳ ನಟ ಜಗಪತಿ ಬಾಬು ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೆ ಜಗಪತಿ ಬಾಬು ಚಿತ್ರತಂಡ ಸೇರಿಕೊಂಡಿದ್ದಾರೆ. ಮೊದಲ ಹಂತದ ಚಿತ್ರೀಕರಣದಲ್ಲೆ ಬಾಗಿಯಾಗಿದ್ದಾರೆ ಜಗಪತಿ ಬಾಬು.

ಉಮಾಪತಿ ಫಿಲ್ಮ್ಸ್ ನಿರ್ಮಾಣದ “ರಾಬರ್ಟ್” ಚಿತ್ರಕ್ಕೆ ಚಂದ್ರಮೌಳಿ ಹಾಗೂ ಕೆ.ಎಲ್. ರಾಜಶೇಖರ್ ಸಂಬಾಷಣೆ ಬರೆಯಲಿದ್ದಾರೆ. ಸುಧಾಕರ್ ಜೈನ್ ಛಾಯಾಗ್ರಹಣ, ಮೋಹನ್ ಬಿ. ಕೆರೆ ಕಲಾ ನಿರ್ದೇಶನ, ಕೀಂ ಪ್ರಕಾಶ್ ಸಂಕಲನ ಈ ಚಿತ್ರಕ್ಕಿದ್ದು ಚಿತ್ರಕ್ಕೆ ಸಂಗೀತ ನಿರ್ದೇಶಕರನ್ನು ಇನ್ನೂ ಆಯ್ಕೆ ಮಾಡಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top