fbpx
ಸಮಾಚಾರ

ಟ್ರಾಫಿಕ್ಸ್ ರೂಲ್ಸ್ ಉಲ್ಲಂಘನೆ- ಬೆಂಗಳೂರಿನ ಸವಾರನಿಗೆ ಬರೋಬ್ಬರಿ ₹ 17 ಸಾವಿರ ದಂಡ!

ಟ್ರಾಫಿಕ್ ನಿಯಮವನ್ನು ಪಾಲಿಸಲಿಲ್ಲ ಎನ್ನುವ ಕಾರಣಕ್ಕೆ ಸಿಲಿಕಾನ್​​ ಸಿಟಿಯಲ್ಲಿ ಬೈಕ್​​ ಸವಾರನೊಬ್ಬನಿಗೆ ಸಂಚಾರಿ ಪೊಲೀಸರು ಬರೋಬ್ಬರಿ 17 ಸಾವಿರ ರೂ ದಂಡವನ್ನು ಹಾಕಿದ್ದಾರೆ. ಮೋಟಾರು ವಾಹನ ಕಾಯ್ದೆ ಜಾರಿಯ ಆದೇಶ ಪ್ರತಿ ಸಿಕ್ಕ 24 ಗಂಟೆಯಲ್ಲಿ ಮೊದಲ ಬಾರಿಗೆ ಭಾರೀ ದಂಡ ವಿಧಿಸಲಾಗಿದೆ. ಸವಾರ ಆಕಾಶ್ ಹೆಲ್ಮೆಟ್ ಧರಿಸದೇ ಕುಡಿದು ವಾಹನ ಚಲಾಯಿಸಿದ್ದಾನೆ.

 

 

ಸವಾರ ಆಕಾಶ್ ಹೆಲ್ಮೆಟ್ ಧರಿಸದೇ ಕುಡಿದು ವಾಹನ ಚಲಾಯಿಸಿದ್ದಾನೆ. ಈ ವೇಳೆ ಕುಮಾರಸ್ವಾಮಿ ಲೇಔಟ್ ಸಂಚಾರಿ ಪೊಲೀಸರು ಆಕಾಶ್‍ನನ್ನು ತಡೆದು ಪರಿಶೀಲನೆ ನಡೆಸಿದ್ದು, ಡಿಎಲ್ ಕೂಡ ಇಲ್ಲದಿರುವುದರಿಂದ ದಂಡ ವಿಧಿಸಿದ್ದಾರೆ. ನಿಯಮಗಳ ಅನ್ವಯ ಕುಡಿದು ವಾಹನ ಚಲಾಯಿಸಿದ ಹಿನ್ನೆಲೆಯಲ್ಲಿ 10 ಸಾವಿರ, ಡಿಎಲ್ ಇಲ್ಲದಿದ್ದಕ್ಕೆ 5 ಸಾವಿರ ರೂ. ಹಾಗೂ ಹೆಲ್ಮೆಟ್ ಧರಿಸಿದ ಕಾರಣ ಇಬ್ಬರಿಗೆ ತಲಾ 1 ಸಾವಿರದಂತೆ 2 ಸಾವಿರ ಒಟ್ಟು 17ಸಾವಿರ ರೂ. ದಂಡ ಬಿಲ್ ನೀಡಿದ್ದಾರೆಂದು ಸಂಚಾರಿ ವಿಭಾಗದ ಜಂಟಿ ಆಯುಕ್ತ ರವಿಕಾಂತೇಗೌಡ ಹೇಳಿದ್ದಾರೆ.

ದಂಡ ಹೆಚ್ಚಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಬಳಿಕ ಅನುಷ್ಠಾನಗೊಳಿಸುವುದಾಗಿ ಮಂಗಳವಾರವಷ್ಟೇ ಹೇಳಿಕೆ ನೀಡಿದ್ದ ಪೊಲೀಸರು ಬುಧವಾರ ತಮ್ಮ ನಿಲುವು ಬದಲಿಸಿಕೊಂಡು ಸದ್ದಿಲ್ಲದೆ ಏಕಾಏಕಿ ಕಾರ್ಯಾಚರಣೆಗಿಳಿದಿದ್ದಾರೆ. ಇದಕ್ಕೆ ನಾಗರಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಹೊಸ ನಿಯಮದ ಬಗ್ಗೆ ಮಾಹಿತಿ ನೀಡುವಂತೆ ಕೋರಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top