fbpx
ಸಮಾಚಾರ

ಕಾಲೇಜಿಗೆ ಹೋಗುವುದಾಗಿ ಹೇಳಿ ಪಾರ್ಕಿನೊಳಗೆ ವಿದ್ಯಾರ್ಥಿಗಳ ಮೋಜು ಮಸ್ತಿ

ಕಾಲೇಜಿಗೆ ಹೋಗುತ್ತೇನೆ ಎಂದು ಮನೆಯಿಂದ ಹೊರಡುವ ವಿದ್ಯಾರ್ಥಿಗಳು ಕಾಲೇಜಿಗೆ ಹೋಗುವ ಬದಲು ಪಾರ್ಕಿನಲ್ಲಿ ಮೋಜು ಮಾಡುತ್ತಿರುವ ದೃಶ್ಯ ಚಿಕ್ಕಬಳ್ಳಾಪುರದಲ್ಲಿ ಕಂಡು ಬಂದಿದೆ.

ಚಿಕ್ಕಬಳ್ಳಾಪುರ ನಗರ ಹೊರವಲಯದಲ್ಲಿರುವ ಸೂಲಾಲಪ್ಪನದಿನ್ನೆಯಲ್ಲಿರುವ ಅರಣ್ಯವನ್ನು ಮಾರ್ಪಡಿಸಿ ಸಾರ್ವಜನಿಕರ ಅನುಕೂಲಕ್ಕಾಗಿ ಅರಣ್ಯ ಇಲಾಖೆ ಟ್ರೀ ಪಾರ್ಕ್ ಮಾಡಿದೆ. ಈ ಪಾರ್ಕಿಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಕಲ್ಪಿಸಲಾಗಿದ್ದು ಕೆಲವು ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ.

ಇತ್ತೀಚೆಗೆ ಸಾರ್ವಜನಿಕರ ಬದಲು ಸುತ್ತಮುತ್ತಲಿರುವ ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಾಲೇಜಿಗೆ ಚಕ್ಕರ್ ಹೊಡೆದು ನೇರವಾಗಿ ಪಾರ್ಕ್ ಗೆ ಬಂದು ಅಸಭ್ಯವಾಗಿ ವರ್ತಿಸುತ್ತಾರೆ ಎಂಬ ದೂರು ಕೇಳಿಬರುತ್ತಿದೆ. ಇದನ್ನು ನೋಡಿ ಪಾರ್ಕಿಗೆ ಬರುವ ಸಾರ್ವಜನಿಕರು ಅಸಹ್ಯಪಡುವ ಸ್ಥಿತಿ ಬಂದಿದೆ.

ಪಾರ್ಕ್ ಸುತ್ತಮುತ್ತ ಸಾಕಷ್ಟು ಕಾಲೇಜುಗಳಿದ್ದು ಕಾಲೇಜಿಗೆ ಹೋಗುತ್ತೇನೆ ಎಂದು ಮನೆಯಿಂದ ಹೊರಡುವ ವಿದ್ಯಾರ್ಥಿಗಳು ಕಾಲೇಜಿಗೆ ಹೋಗುವ ಬದಲು ಕಾಲೇಜು ಬ್ಯಾಗ್ ಊಟದ ಬಾಕ್ಸ್ ಗಳ ಸಮೇತ ನೇರವಾಗಿ ತಮ್ಮ ಗರ್ಲ್ ಫ್ರೆಂಡ್ ಹಾಗೂ ಬಾಯ್ ಫ್ರೆಂಡ್‍ಗಳ ಜೊತೆ ಪಾರ್ಕಿಗೆ ಬರುತ್ತಿದ್ದಾರೆ. ವ್ಯಾಸಂಗ ಮಾಡುವ ಸಮಯದಲ್ಲಿ ವಿದ್ಯಾರ್ಥಿಗಳು ಎಲ್ಲವನ್ನು ಮರೆತು ಮೋಜುಮಸ್ತಿಯಲ್ಲಿ ತೊಡಗುತ್ತಿದ್ದಾರೆ.

ಇನ್ನು ಈ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾಗಿರುವ ಅರಣ್ಯ ಇಲಾಖೆ ಕಂಡು ಕಾಣದಂತೆ ಜಾಣ ಕುರುಡಾಗಿದೆ. ಅರಣ್ಯದಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಒದಗಿಸಿ ನಿರ್ಮಾಣ ಮಾಡಿರುವ ಪಾರ್ಕ್ ಈಗ ಯುವಕ ಯುವತಿಯುರಿಗೆ ಮೋಜು ಮಸ್ತಿ ಮಾಡುವ ತಾಣವಾಗಿ ಪರಿಮನಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top