fbpx
ಸಮಾಚಾರ

ಪರಿಮಳ ಲಾಡ್ ವಿರುದ್ಧ ದೂರು ದಾಖಲು.

ಪರಿಮಳ ಲಾಡ್ಜ್’ ಟೀಸರ್ ಇತ್ತೀಚೆಗೆ ರಿಲೀಸ್ ಆಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಹವಾ ಎಬ್ಬಿಸಿದ್ದು ಗೊತ್ತೇ ಇದೆ. ಇದೀಗ ಪರಿಮಳ ಲಾಡ್ಜ್ ಚಿತ್ರತಂಡದ ವಿರುದ್ಧ ಕನ್ನಡ ಪರ ಸಂಘಟನೆಯೊಂದು ದೂರು ನೀಡಿದೆ.

ಈ ಚಿತ್ರದ ಟೀಸರ್ ನಲ್ಲಿ ಬಳಸಿದ ಅಶ್ಲೀಲ ಸಂಭಾಷಣೆ ತೆಗೆಯುವಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಾಗಿದೆ. ಚಿತ್ರದ ಟೀಸರಿನಲ್ಲಿ ಇರುವ ಅಶ್ಲೀಲ ಸಂಭಾಷಣೆ ತೆಗೆಯದೇ ಇದಲ್ಲಿ ಫಿಲ್ಮಂ ಚೇಂಬರ್ ಎದುರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದೆ.

ದೂರಿನಲ್ಲಿ ಏನಿದೆ?
ವಿಜಯಪ್ರಸಾದ್ ನಿರ್ದೇಶನದ ಲೂಸ್ ಮಾದ, ನೀನಾಸಂ ಸತೀಶ್ ಹಾಗೂ ಸುಮನ್ ರಂಗನಾಥ್ ನಟನೆಯ ಪರಿಮಳ ಲಾಡ್ಜ್ ಎಂಬ ಹೆಸರಿನ ಈ ಚಿತ್ರದ ನಾಯಕ ನಟರ ಮೇಲೆ ಹಾಗೂ ನಿರ್ದೇಶಕ, ನಿರ್ಮಾಪಕ ಅವರ ಮೇಲೆ ಕ್ರಮಕೈಗೊಳ್ಳಲು ಒತ್ತಾಯ ಮಾಡುತ್ತಿದ್ದೇವೆ. ಹಾಗೆ ಈ ಚಿತ್ರದಲ್ಲಿ ಇರುವ ಅಶ್ಲೀಲ ಸಂಭಾಷಣೆ ತೆಗಿಸಬೇಕು ಇಲ್ಲವಾದರೆ ನಾವು ಕೋರ್ಟ್ ಮೊರೆ ಹೋಗಬೇಕಾಗುತ್ತದೆ. ಅದನ್ನು ಮೀರಿ ಇವರು ಈ ಚಿತ್ರವನ್ನು ಬಿಡುಗಡೆ ಮಾಡಿದ ಪಕ್ಷದಲ್ಲಿ ವಾಣಿಜ್ಯ ಮಂಡಳಿ ಮುಂದೆ ಹಾಗೂ ಈ ಚಲನಚಿತ್ರ ಪ್ರದರ್ಶನ ಮಾಡಲು ಚಿತ್ರಮಂದಿರದ ಮುಂದೆ ಬೃಹತ್ ಪ್ರತಿಭಟನೆ ಮಾಡಲಾಗುತ್ತದೆ ಎಂದು ದೂರಿನಲ್ಲಿ ಉಲ್ಲೇಖಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top