fbpx
ಸಮಾಚಾರ

“ಅಂಗಡಿಯಲ್ಲಿ ಸಿಗೋ ಔಷದಿ ಎಲ್ಲವೂ ಅಸಲಿಯಲ್ಲ” ಸಚಿವ ನಾಗೇಶ್ ಹೇಳಿಕೆ ವೈರಲ್!

ಮನೆ ಮನೆಗೆ ಮದ್ಯ ಪೂರೈಕೆ ಮಾಡುವ ಯೋಜನೆ ಕನಸು ಕಂಡಿದ್ದ ಸಚಿವ ನಾಗೇಶ್ ನೆನ್ನೆಯ ಸುದ್ದಿಗೋಷ್ಠಿಯ ವೇಳೆ ಹೇಳಿದ ಮತ್ತೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. “ಅಂಗಡಿಯಲ್ಲಿ ಸಿಗೋ ಅಔಷದಿ ಯಾವುದೂ ಅಸಲಿಯಲ್ಲ.” ಎಂದು ಹೇಳಿಕೆ ನೀಡಿರುವ ನಾಗೇಶ್ ಅವರು ಸಾರ್ವಜನಿಕರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.

ವಿಡಿಯೋ ನೋಡಿ👇👇👇

 

 

ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ” ಮನೆ ಬಾಗಿಲಿಗೆ ಮದ್ಯ ಪೂರೈಕೆ ಮಾಡಲು ಚಿಂತನೆ ಮಾಡಲಾಗಿದೆ. ಕೆಲವು ಕಡೆ ಮದ್ಯದ ಅಂಗಡಿ ದೂರ ಇರುತ್ತೆ. ಕೆಲವು ಕಡೆ ಮದ್ಯದ ಅಂಗಡಿಗಳೇ ಇರಲ್ಲ. ಇಂಥಾ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಯೋಚನೆ ಮಾಡಲಾಗಿದ್ದು, ಮನೆ ಬಾಗಿಲಿಗೆ ಮದ್ಯ ಪೂರೈಸೋ ಚಿಂತನೆ ಕೂಡ ಇಲಾಖೆ ಮುಂದಿದೆ” ಎಂದರು .

ಈ ವೇಳೆ ಸಮಸ್ಯೆಯೊಂದರ ವಿಚಾರವಾಗಿ ಎಡ್ಡಾ ಪ್ರಶ್ನೆಗೆ ಉತ್ತರಿಸಿದ ನಾಗೇಶ್ ಅವರು “ಮೆಡಿಕಲ್ ಸ್ಟೋರ್ ನಲ್ಲಿ ಸಿಗೋ ಎಲ್ಲಾ ಔಷಧಿಗಳು ಕೂಡ ಅಸಲಿಯಲ್ಲ, ಒಂದು 40% ಔಷಧಿಗಳು ಬೋಗಸ್ ಇವೆ. ಅದೇ ರೀತಿ ಸಮಸ್ಯೆಗಳು ಕೂಡ” ಎಂದುಹೇಳಿದ್ದಾರೆ.

ಹೀಗೆ ಹೇಳಿರುವ ಅವರ ಹೇಳಿಕೆ ವೈರಲ್ ಆಗಿದೆ.. ಅಷ್ಟೇ ಅಲ್ಲದೆ ಸರ್ಕಾರದ ಔಷದಿಗಳ ಮೇಲೆ ಸಚಿವರಿಗೆಯೇ ನಂಬಿಕೆ ಇರದಿದ್ದರೆ ಸಾರ್ವಜನಿಕರುಈ ಹೇಗೆ ಅದನ್ನು ಉಪಯೋಗಿಸಬೇಕು? ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಾದವರೇ ಈ ರೀತಿ ಉಡಾಫೆ ಮಾತುಗಳನ್ನು ಆಡುತ್ತಿದ್ದಾರೆ ಎಂದು ನೆಟ್ಟಿಗರು ಗರಂ ಆಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top