fbpx
ಸಮಾಚಾರ

“ದಪ್ಪ ಆಗಿದ್ದಾರೆ” ಎಂದು ಅಣಕಿಸಿದವರಿಗೆ ನಿತ್ಯಾ ಮೆನನ್ ಖಡಕ್ ಉತ್ತರ

ನಿತ್ಯಾ ಮೆನನ್ ಅವರನ್ನು ದಪ್ಪ ಆಗಿದ್ದೀರಾ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಇದಕ್ಕೆ ಖಡಕ್ ಉತ್ತರ ನೀಡಿದ ನಿತ್ಯಾ ಮೆನನ್ ನನ್ನನ್ನು ದಪ್ಪ ಎಂದು ಟ್ರೋಲ್ ಮಾಡುತ್ತಿರುವವರು ಅಜ್ಞಾನಿಗಳು ಎಂದು ಕಿಡಿಕಾರಿದ್ದಾರೆ.

ಇತ್ತೀಚೆಗೆ ನಿತ್ಯಾ ಮೆನನ್ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದರು. ಈ ವೇಳೆ ಅವರನ್ನು ಟ್ರೋಲ್‍ಗಳ ಬಗ್ಗೆ ಪ್ರಶ್ನಿಸಲಾಯಿತು. ಆಗ ಅವರು, ಜನರು ಅಜ್ಞಾನಿಗಳು ಎಂದು ನಾನು ಭಾವಿಸುತ್ತೇನೆ. ಏಕೆಂದರೆ ನೀವು ತೂಕದ ಸಮಸ್ಯೆಗಳನ್ನು ಹೊಂದಿದ್ದರೆ, ನೀವು ಸೋಮಾರಿ ಆಗಿದ್ದೀರಿ ಮತ್ತು ತುಂಬಾ ತಿನ್ನುತ್ತೀರಿ ಎಂದುಕೊಳ್ಳುತ್ತಾರೆ. ಇದು ಅಜ್ಞಾನ. ಸೋಮಾರಿ ಆಗುವುದರಿಂದ ಅಥವಾ ತಿನ್ನುವುದರಿಂದ ಯಾರು ತೂಕ ಹೆಚ್ಚಿಸಿಕೊಳ್ಳುವುದಿಲ್ಲ. ಸಿನಿಮಾ ಕಲಾವಿದರು ಸೋಮಾರಿಗಳಾಗಿರುವುದಿಲ್ಲ ನನ್ನನ್ನು ನಂಬಿರಿ ಎಂದು ಹೇಳಿದ್ದಾರೆ.

”ಕೆಲವು ಹಾರ್ಮೋನ್ ಸಮಸ್ಯೆಗಳಿಂದಲೂ ತೂಕ ಹೆಚ್ಚಿಸಿಕೊಳ್ಳುತ್ತಾರೆ. ನಾವು ಸುಮ್ಮನೆ ಕೂತು ಎಂಜಾಯ್ ಮಾಡ್ತಿಲ್ಲ. ಇದು ಸಹಜವಾಗಿ ನಮಗೆ ಬೇಸರ ಉಂಟು ಮಾಡುತ್ತೆ. ಜನರು ಈ ಬಗ್ಗೆ ಅರಿವು ಹೊಂದಬೇಕು. ಟ್ರೋಲ್‍ಗಳು ನೋಡಿದರೆ ನನಗೆ ನೋವಾಗುತ್ತದೆ ಅಲ್ಲದೆ ಬೇಸರ ಕೂಡ ಆಗುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top