fbpx
ಸಮಾಚಾರ

ಭಾರತದಲ್ಲಿ ಕನ್ನಡ ಮತ್ತು ಕನ್ನಡಿಗರು ದ್ವಿತೀಯ ದರ್ಜೆ ಪ್ರಜೆಗಳಾಗಬೇಕೇ?

ಕಳೆದ 70 ವರ್ಷದ ಭಾರತ ಒಕ್ಕೂಟದ ಇತಿಹಾಸವನ್ನು ನೋಡಿದರೆ ಒಕ್ಕೂಟ ವ್ಯವಸ್ಥೆಯ concepts ಗಳನ್ನು dilute ಮಾಡುವಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರ ಬಹಳಾ ದೊಡ್ಡದಿದೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದಾಗ, ಕೇಂದ್ರ ಪಟ್ಟಿ ಮತ್ತು ಜಂಟಿ ಪಟ್ಟಿಗೆ ಸಾಕಷ್ಟು ಅಂಶಗಳನ್ನು ಒಂದೊಂದಾಗಿಯೇ ರಾಜ್ಯಪಟ್ಟಿಯಿಂದ ತೆಗೆದುಕೊಳ್ಳಲಾಗಿದ್ದು, 70 ವರ್ಷದಲ್ಲಿ ಒಂದೇ ಒಂದು ಅಂಶವೂ ರಾಜ್ಯ ಪಟ್ಟಿಗೆ ಬಂದಿರುವ ಉದಾಹರಣೆಯೇ ಇಲ್ಲವಾಗಿದೆ. ಹೀಗೆ ಮಾಡುವ ಮೂಲಕ ಒಕ್ಕೂಟ ವ್ಯವಸ್ಥೆಯ ಬುಡವನ್ನೇ ಕಾಂಗ್ರೆಸ್ ಪಕ್ಷ ಅಳ್ಳಾಡಿಸುವಲ್ಲಿ ಯಶಸ್ಸಿಯಾಗಿತ್ತು.

ಬೊಮ್ಮಾಯಿ ‌v/s Union Govt ಮತ್ತು ಕೇಶವಾನಂದ ಭಾರತೀ ಕೇಸಿನ ಸುಪ್ರೀಮ್ ಕೋರ್ಟಿನ ತೀರ್ಪಿನಲ್ಲಿ ಒಕ್ಕೂಟ ವ್ಯವಸ್ಥೆಯ ಬಗ್ಗೆ ಇರುವುದರಿಂದ atleast ಒಕ್ಕೂಟ ವ್ಯವಸ್ಥೆಯ ಬಗ್ಗೆ ಮಾತನಾಡುವ ಸ್ವತಂತ್ರವನ್ನಾದರೂ ಉಳಿಸಿಕೊಂಡಿದ್ದೇವೆ.. ಇಲ್ಲವಾಗಿದ್ದರೆ ಸಂವಿಧಾನದಿಂದ ಒಕ್ಕೂಟ ವ್ಯವಸ್ಥೆಯ ಆಶಯಗಳನ್ನು ಕಿತ್ತುಹಾಕಿ ಎಷ್ಟು ವರ್ಷಗಳಾಗಿರುತ್ತಿತ್ತೇನೋ.

ಇನ್ನು ಕಾಂಗ್ರೆಸ್ ನದ್ದು ದುರಾಡಳಿತ, ಅದನ್ನು ಸರಿಪಡಿಸುವುದಾಗಿ ಹೇಳಿಕೊಂಡು ಅಧಿಕಾರಕ್ಕೆ ಬಂದ ಬಿಜೆಪಿಯೂ ಒಕ್ಕೂಟ ವ್ಯವಸ್ಥೆಯ ಆಶಯಕ್ಕೆ ವಿರುದ್ದವಾಗಿ, ರಾಜ್ಯ ಸರಕಾರಗಳ ಅಧಿಕಾರ ಮೊಟಕುಗೊಳಿಸುವ ನಿಟ್ಟಿನಲ್ಲಿ ದೊಡ್ಡ ನಡೆಯನ್ನು ಇಡುತ್ತಾ ಸಾಗುತ್ತಿದೆ.

ಒಕ್ಕೂಟ ವ್ಯವಸ್ಥೆಯ ಆಶಯಗಳ ವಿರುದ್ದದ ಸರಕಾರದ ನಡೆಗಳನ್ನು, ಕೇಂದ್ರ ಸರಕಾರದ ಸಂಸ್ಥೆಗಳ ದುರ್ಬಳಕೆಯನ್ನು ಆಯಾ ಪಕ್ಷದ ನಾಯಕರು, ಕಾರ್ಯಕರ್ತರು ಕಾಲಕಾಲಕ್ಕೆ defend ಮಾಡಿಕೊಂಡೇ ಬಂದಿದ್ದಾರೆ. ಇದರ ಮಧ್ಯೆ, ನಮ್ಮ ರಾಜಕಾರಣಿಗಳು ತಮಗೆ ತೊಂದರೆಯಾದಾಗ ಮಾತ್ರ ಒಕ್ಕೂಟ ವ್ಯವಸ್ಥೆಯ ಬಗ್ಗೆ ಮಾತನಾಡುತ್ತಾರೆ.. ಇಲ್ಲವಾದರೆ, ಇವರಿಂದ ಒಕ್ಕೂಟ ವ್ಯವಸ್ಥೆಯ ಬಗ್ಗೆ ಕಿಂಚಿತ್ತೂ ಮಾತೇ ಇಲ್ಲ, ಮಾತನಾಡಬೇಕಾದ ಸಮಯದ ಮೌನ, ಮಾತನಾಡಬಾರದ ಸಮಯದ ಮಾತು ಅಧಿಕಾರದಲ್ಲಿರುವ ಪಕ್ಷವು ಒಕ್ಕೂಟ ವ್ಯವಸ್ಥೆಯ ಆಶಯಗಳನ್ನು ಅಸ್ತಿರಗಳಿಸಲು ಅನುಕೂಲ ಮಾಡಿಕೊಡುತ್ತಿದೆ.

ರಾಜಕಾರಣಿಗಳು, ಪಕ್ಷದ ಕಾರ್ಯಕರ್ತರು, ತೊಂದರೆಗೆ ಸಿಲುಕಿದಾಗ ಒಕ್ಕೂಟ ವ್ಯವಸ್ಥೆಯ ಬಗ್ಗೆ ಮಾತನಾಡೋದು Work ಆಗೊಲ್ಲ. ಜನರ ಬೆಂಬಲ ಸಿಗೊಲ್ಲ ಅನ್ನುವ ವಿಚಾರವನ್ನು ಅರ್ಥ ಮಾಡಿಕೊಳ್ಳೋದರಲ್ಲಿ ಎಡವಿದ್ದಾರೆ.. ತೊಂದರೆ ಸಿಲುಕಿದಾಗ ಒಕ್ಕೂಟ ವ್ಯವಸ್ತೆ ಬಗ್ಗೆ ಮಾತನಾಡೋದು, ತಪ್ಪು ಮಾಡಿದ್ದನ್ನು ಮುಚ್ಚಿ ಹಾಕಿಕೊಳ್ಳೋಕ್ಕೆ ಒಕ್ಕೂಟ ವ್ಯವಸ‌್ಥೆಯನ್ನು ತರ್ತಿದ್ದಾರೆ ಅನ್ನೋ ತರಹ project ಮಾಡಲು ಅನುಕೂಲವಾಗ್ತಿದೆ ಅಷ್ಟೆ..

ಕೊನೆಯದಾಗಿ, ಭಾರತದಲ್ಲಿ ಕನ್ನಡಿಗರ ಮತ್ತು ಕರ್ನಾಟಕದ ಏಳಗೆ ಭಾರತ ಸರಿಯಾದ ಒಕ್ಕೂಟ ವ್ಯವಸ್ಥೆ, ಅಧಿಕಾರ ವಿಕೇಂದ್ರೀಕರಣದ ಕಡೆಗೆ ಸಾಗಿದಾಗ ಮಾತ್ರ… over powered ಕೇಂದ್ರ ಸರಕಾರದಿಂದ ಕರ್ನಾಟಕ-ಕನ್ನಡಿಗರಿಗೆ ಲಾಭಕ್ಕಿಂತ ನಷ್ಟವೇ ಜಾಸ್ತಿ.. 70 ವರ್ಷದಲ್ಲಿ ಆಗಿದ್ದು ಆಯಿತು, ಕನ್ನಡ-ಕನ್ನಡಿಗ-ಕರ್ನಾಟಕ ಪರ ಮನಸ್ಸುಗಳು ಈಗಲಾದರೂ ಜಾಗೃತವಾಗಬೇಕಿದೆ. ನಾವೇ, ರಾಜಕಾರಣಿಗಳನ್ನು/ಸರಕಾರವನ್ನು ಕಾಲಕಾಲಕ್ಕೆ ಎಚ್ಚರಿಸುವ ಕೆಲಸ ಮಾಡಬೇಕಿದೆ. 70 ವರ್ಷದಿಂದ ಕೇಂದ್ರ ಸರಕಾರದ ಅಧಿಕಾರದ ಹಪಹಪಿ, ಅಧಿಕಾರದ ದುರ್ಬಳಕೆಯನ್ನು ತಡೆದು, ಸರಿಯಾದ ಒಕ್ಕೂಟ ವ್ಯವಸ್ಥೆಯ ಕಡೆಗೆ ಭಾರತವನ್ನು ಕೊಂಡೊಯ್ಯಬೇಕಿದೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top