fbpx
ಸಮಾಚಾರ

ಸಿದ್ದರಾಮಯ್ಯರಿಂದ ಕಪಾಳಕ್ಕೆ ಏಟು ತಿಂದ ರವಿ ಮಾಧ್ಯಮಗಳಿಗೆ ಕೊಟ್ಟ ಶಾಕಿಂಗ್ ಉತ್ತರ ಏನು?

ಸಿದ್ದರಾಮಯ್ಯ ಅವರು ನನ್ನ ತಂದೆ ಸಮಾನ. ಅವರು ಹೊಡೆದಿದ್ದು ನನಗೆ ಬೇಜಾರಾಗಿಲ್ಲ ಎಂದು ಮಾಜಿ ಸಿಎಂ ಸಿದ್ದುರಿಂದ ಕಪಾಳಕ್ಕೆ ಏಟು ತಿಂದಿದ್ದ ಕಾಂಗ್ರೆಸ್ ಬೆಂಬಲಿಗ ನಾಡನಹಳ್ಳಿ ರವಿ ಸ್ಪಷ್ಟನೆ ನೀಡಿದ್ದಾರೆ.

ನೆನ್ನೆ ಮೈಸೂರು ವಿಮಾನ ನಿಲ್ದಾಣದಲ್ಲಿ ಸಿದ್ದರಾಮಯ್ಯ ರವಿಗೆ ಕಪಾಳಮೋಕ್ಷ ಮಾಡಿದ್ದರು. ಈ ಘಟನೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಸ್ಪಷ್ಟನೆ ನೀಡಿದ ಕೈ ಮುಖಂಡ ರವಿ “ಸಿದ್ದರಾಮಯ್ಯರನ್ನು ಪ್ರತಿಭಟನೆಗೆ ಆಹ್ವಾನಿಸಲು ಬಂದಿದ್ದೆ. ನಾನು ಕೇಳಿದ್ದಕ್ಕೆ ಬರೋಲ್ಲ ನೀವೇ ಪ್ರತಿಭಟನೆ ಮಾಡಿ ಅಂದರು. ಆದರೆ ಮರಿಗೌಡರು ಸಿದ್ದರಾಮಯ್ಯ ಅವರಿಗೆ ಫೋನ್ ಮಾಡಿ ಕೊಡೋಕೆ ಹೇಳಿದ್ದರು. ಅದಕ್ಕೆ ಕೊಡೋಕೆ ಹೋದೆ. ಅದಕ್ಕೆ ತಮಾಷೆಗೆ ಅವರು ಕಪಾಳಕ್ಕೆ ಹೊಡೆದರು. ಇದರಲ್ಲಿ ಬೇರೆ ಯಾವುದೇ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ” ಎಂದು ಹೇಳಿದ್ದಾರೆ.

ಏನಿದು ಘಟನೆ:
ಮಾಧ್ಯಮಗಳ ಜೊತೆ ಮಾತನಾಡಿ ವಾಪಸ್ ಹೋಗುತ್ತಿದ್ದ ವೇಳೆ ಸಿದ್ದರಾಮಯ್ಯ ಅವರ ಬೆಂಬಲಿಗ ರವಿ ಯಾರಿಗೋ ಫೋನ್ ಮಾಡಿ ಮಾತನಾಡುವಂತೆ ಅವರಿಗೆ ಕೊಟ್ಟಿದ್ದಾರೆ. ಇದಕ್ಕೆ ಸಿಟ್ಟಿಗೆದ್ದ ಸಿದ್ದರಾಮಯ್ಯ ಅವರು ಮೊಬೈಲ್ ತಳ್ಳಿ, ಬೆಂಬಲಿಗನ ಕೆನ್ನೆಗೆ ಬಾರಿಸಿ, ನಡಿಯೋ ಎಂದು ಕರೆದೊಯ್ದಿದ್ದಾರೆ. ಕೈ ಮುಖಂಡರ ಸಮ್ಮುಖದಲ್ಲೇ, ವಿಮಾನ ನಿಲ್ದಾಣದ ಆವರಣದಲ್ಲೇ ಬೆಂಬಲಿಗನ ಕೆನ್ನೆಗೆ ಸಿದ್ದರಾಮಯ್ಯ ಹೊಡೆಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top