fbpx
ಸಮಾಚಾರ

‘ನೀವು ಕನ್ಯತ್ವ ಕಳೆದುಕೊಂಡಿದ್ದು ಯಾವಾಗ?” ಎಂದು ಪ್ರಶ್ನಿಸಿದವನ ಚಳಿ ಬಿಡಿಸಿದ ನಟಿ ಇಲಿಯಾನ!

ನಟಿಯರ ಹಾವಭಾವ ಮತ್ತು ಅವರ ದಿನ ನಿತ್ಯದ ದಿನಚರಿಯನ್ನೇ ಟ್ರೋಲ್ ಮಾಡುವವರ ಹಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವಿಪರೀತಕ್ಕಿಟ್ಟುಕೊಂಡಿದೆ. ಅದರಲ್ಲಿಯೂ ಕೆಲ ಮಂದಿ ಎಗ್ಗುಸಿಗ್ಗಿಲ್ಲದೆ ಕೊಳಕು ಕಾಮೆಂಟ್ ಮಾಡೋ ಮೂಲಕ ನಟಿಯರನ್ನು ಮಾನಸಿಕ ಹಿಂಸೆಗೀಡು ಮಾಡೋದೂ ಇದೆ.. ಇದೀಗ ಬಹುಭಾಷಾ ನಟಿ ಇಲಿಯಾನ ಅವರು ವರ್ಜಿನಿಟಿ ಪ್ರಶ್ನೆ ಕೇಳಿದ ಕಿಡಿಗೇಡಿಗೆ ಖಡಕ್‌ ಉತ್ತರ ನೀಡಿ ಸುದ್ದಿಯಾಗಿದ್ದಾರೆ.

 

 

ನೀವು ವರ್ಜಿನಿಟಿ ಯಾವಾಗ ಕಳೆದುಕೊಂಡ್ರಿ ಎಂದು ಅಭಿಮಾನಿಯೊಬ್ಬ ಸೋಷಿಯಲ್‌ ಮೀಡಿಯಾದಲ್ಲಿಕೇಳಿದ ಪ್ರಶ್ನೆಗೆ ಬಾಲಿವುಡ್‌ ನಟಿ ಇಲಿಯಾನ ಡಿಕ್ರೂಜ್‌ ಖಡಕ್‌ ಉತ್ತರ ನೀಡಿದ್ದಾರೆ. ಈ ಪ್ರಶ್ನೆಯನ್ನು ನಿನ್ನ ತಾಯಿಯನ್ನು ಕೇಳು ಎಂದು ಹೇಳಿ ಅವರು ಆತನ ಬಾಯಿ ಮುಚ್ಚಿಸಿದ್ದಾರೆ. ಅಭಿಮಾನಿಯ ಅಸಂಬದ್ಧ ಪ್ರಶ್ನೆಗೆ ದಿಟ್ಟ ಉತ್ತರ ನೀಡಿದ ಇಲಿಯಾನರಿಗೆ ಸೋಷಿಯಲ್‌ ಮೀಡಿಯಾದಲ್ಲಿಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತೆಲುಗು, ಹಿಂದಿ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿರುವ ಇಲಿಯಾನ ಡಿಸೋಜಾ ಇನ್ಸ್ಟಾಗ್ರಾಮ್ ನಲ್ಲಿ ‘Ask me Anything’ ಎಂದು ಅಭಿಮಾನಿಗಳಲ್ಲಿ ಕೇಳಿದ್ದರು. ಆಗ ಅಭಿಮಾನಿಯೊಬ್ಬ ಅಶ್ಲೀಲವಾಗಿ ಪ್ರಶ್ನೆಯೊಂದನ್ನು ಕೇಳುತ್ತಾನೆ. ಅದಕ್ಕೆ ಇಲಿಯಾನ ಕೊಟ್ಟ ಉತ್ತರ ಮುಟ್ಟಿ ನೋಡುಕೊಳ್ಳುವಂತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top