fbpx
ಸಮಾಚಾರ

ಕಿಚ್ಚನ ಹೆಸರಿನಲ್ಲಿ ಗ್ರಂಥಾಲವನ್ನು ತೆರೆದ ಅಭಿಮಾನಿಗಳು- ಫ್ಯಾನ್ಸ್ ಕಾರ್ಯಕ್ಕೆ ಭಾರಿ ಮೆಚ್ಚುಗೆ.

ಕೇವಲ ಚಿತ್ರಗಳ ಮೂಲಕ ಮಾತ್ರವಲ್ಲದೆ ಅನೇಕ ಸಮಾಜಿಕ ಕೆಲಸಗಳ ಮೂಲಕವೂ ಗುರುತಿಸಿಕೊಂಡಿರುವವರು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್… ಕಿಚ್ಚ ಒಬ್ಬ ಒಳ್ಳೆ ನಟ ಮಾತ್ರವಲ್ಲದೆ ಬೇರೆಯವರ ಕಷ್ಟಕ್ಕೆ ಮರುಗುವ ಭಾವುಕ ಜೀವಿ ಎಂಬುದು ಎಲ್ಲರಿಗೂ ಗೊತ್ತಿರೋ ವಿಚಾರವೇ. ಅದೇರೀತಿ ‘ಯಥಾರಾಜ ತಥಾ ಪ್ರಜಾ’ ಎಂಬಂತೆ ಕಿಚ್ಚನಂತೆ ಅವರ ಆಭಿಮಾನಿಗಳೂ ಕೂಡ ಅಭಿಮಾನದ ಹೊರತಾಗಿ ಒಂದಿಲ್ಲೊಂದು ಒಳ್ಳೆಯ ಕೆಲಸಗಳಿಂದಲೇ ಆಗ್ಗಾಗ್ಗೆ ಗಮನಸೆಯುತ್ತಾ ಬಂದಿದ್ದಾರೆ. ಇದೀಗ ನಂತದ್ದೇ ಮತ್ತೊಂದು ಪ್ರಸಂಗ ಬೆಳಕಿಗೆ ಬಂದಿದ್ದು ಈ ಕೆಲಸಕ್ಕೆ ಎಲ್ಲೆಡೆ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ.

 

 

ಅಭಿಮಾನಿಗಳು ನೆಚ್ಚಿನ ನಟರ ಮೇಲಿನ ಅಭಿಮಾನವನ್ನು ಅನೇಕ ರೀತಿ ವ್ಯಕ್ತಪಡಿಸಿದ್ದಾರೆ. ಕೆಲವರು ಫೋಟೋ ಇಟ್ಟು ಪೂಜಿಸಿದರೆ ಇನ್ನು ಕೆಲವು ಅಭಿಮಾನಿಗಳು ಸುದೀಪ್ ಹೆಸರನ್ನು ಹಚ್ಚೆ ಹಾಕಿಸಿಕೊಂಡು ಸಂತಸ ಪಡುತ್ತಾರೆ. ಇದೀಗ ಅಭಿಮಾನಿ ಕಿಚ್ಚ ಸುದೀಪ್ ಹೆಸರಲ್ಲಿ ಗ್ರಾಂಥಾಲಯ ಕಟ್ಟಿಸಿದ್ದಾರೆ. ಬೊಂಬೇರಹಳ್ಳಿ ಎನ್ನುವ ಊರಲ್ಲಿ ಕಿಚ್ಚ ಸುದೀಪ್ ಗ್ರಂಥಾಲಯ ನಿರ್ಮಾಣ ಮಾಡಿ ಸುದೀಪ್ ಹುಟ್ಟುಹಬ್ಬದಂದು ಉದ್ಘಾಟನೆ ಮಾಡಿದ್ದಾರೆ.

ಈ ಬಗ್ಗೆ ಅಭಿಮಾನಿ ಬಸಯ್ಯ ಎಸ್ ನಾಗಯ್ಯನವರ್ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಗ್ರಂಥಾಲಯದ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿದ್ದಾರೆ. ಕಿಚ್ಚನ ಹೆಸರಿನ ಗ್ರಂಥಾಲಯ ನೋಡಿ ಸುದೀಪ್ ಕೂಡ ಸಂತಸ ವ್ಯಕ್ತಪಡಿಸಿದ್ದು ಇಮೋಜಿಯ ಮೂಲಕ ಧನ್ಯವಾದ ತಿಳಿಸಿದ್ದಾರೆ.

ತಮ್ಮ ಹೀರೋಗಳ ಸಿನಿಮಾ ಬಂದಾಗ ಕಟೌಟ್ ಕಟ್ಟಿ, ಹಾಲಿನ ಅಭಿಷೇಕ ಮಾಡಿ, ಪಟಾಕಿ ಸಿಡಿಸಿ ಸಂಭ್ರಮ ಪಡುವುದು ಮಾತ್ರವಲ್ಲ ಆಗಾಗ್ಗೆ ಒಳ್ಳೆಯ ಜೀವಪರ ಕೆಲಸಗನ್ನೂ ಮಾಡಬೇಕು ಎಂದು ತೋರಿಸಿಕೊಡುತ್ತಿರುವ ಸುದೀಪ್ ಅಭಿಮಾನಿಗಳ ಈ ಕಾರ್ಯಕ್ಕೆ ಎಂಥವರೂ ಮೆಚ್ಚಲೇಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top