fbpx
ಸಮಾಚಾರ

“ವಿಧಾನಸೌಧದಲ್ಲಿ ಬ್ಲೂಫಿಲಂ ನೋಡಿದ್ದು ದೇಶದ್ರೋಹವೇನಲ್ಲ” ಬ್ಲೂ ಬಾಯ್ ‘ಸವದಿ’ ಪರ ಮಾಧುಸ್ವಾಮಿ ಬ್ಯಾಟಿಂಗ್

ವಿಧಾನಸಭೆಯಲ್ಲಿ ಅಶ್ಲೀಲ ಚಿತ್ರ ವೀಕ್ಷಿಸುವುದು ದೇಶ ವಿರೋಧಿ ಚಟುವಟಿಕೆ ಅಲ್ಲ ಎಂದು ಹೇಳುವ ಮೂಲಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ವಿವಾದ ಸೃಷ್ಟಿಸಿದ್ದಾರೆ.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ವಿಧಾನಸೌಧದಲ್ಲಿ ವಿಡಿಯೋ ನೋಡಿದ್ದು ದೇಶದ್ರೋಹದ ಕೆಲಸವಲ್ಲ. ಅದೊಂದು ಆಕಸ್ಮಿಕ ಘಟನೆ. ಆದರೂ ಅದು ತಪ್ಪು. ಅದನ್ನೇ ಇಟ್ಟುಕೊಂಡು ಡಿಸಿಎಂ ಪದವಿ ಕೊಟ್ಟಿದ್ದು ತಪ್ಪು ಎನ್ನುವಂತಿಲ್ಲ. ಮಹಾರಾಷ್ಟ್ರದ ಚುನಾವಣೆಯಲ್ಲಿ ಲಕ್ಷ್ಮಣ್ ಸವದಿ ಅವರು ಪ್ರಮುಖ ಪಾತ್ರ ವಹಿಸಿದ್ರು. ಹಾಗಾಗಿ ಅವರಿಗೆ ಡಿಸಿಎಂ ಪದವಿ ಕೊಟ್ಟಿದ್ದಾರೆ” ಎಂದು ಕಾನೂನು ಸಚಿವ ಜೆಸಿ ಮಾಧುಸ್ವಾಮಿ ಹೇಳಿದ್ದಾರೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಸೋತು ಮನೆ ಸೇರಿದ್ದ ಬ್ಲೂ ಬಾಯ್​ ಲಕ್ಷ್ಮಣ ಸವದಿಯನ್ನು ಬಿಜೆಪಿ ಸರ್ಕಾರ ಸಚಿವ ಸಂಪುಟದಲ್ಲಿ ಸೇರಿಸಿಕೊಂಡಿದ್ದಲ್ಲದೇ ಡಿಸಿಎಂ ಪಟ್ಟ ಕೂಡ ನೀಡಿರೋದೆ ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಹಿಂದಿನ ಬಿಎಸ್​ವೈ ಸರ್ಕಾರದ ಅವಧಿಯಲ್ಲಿ ಲಕ್ಷ್ಮಣ ಸವದಿ ಮತ್ತು ಸಿಸಿ ಪಾಟೀಲ್ ಇಬ್ಬರೂ ವಿಧಾನಸೌಧದ ಅಧಿವೇಶನದ ವೇಳೆ ಅಶ್ಲೀಲ ವಿಡಿಯೋಗಳನ್ನ ನೋಡುತ್ತಿದ್ದುದು ದೊಡ್ಡ ಸುದ್ದಿಯಾಗಿ ಪ್ರಕರಣ ಕೂಡ ದಾಖಲಾಗಿತ್ತು. ಈಗ ಸವದಿ ಅವರು ಡಿಸಿಎಂ ಆದ ಬಳಿಕ ಸಿದ್ದರಾಮಯ್ಯ ಮತ್ತಿತರ ಕಾಂಗ್ರೆಸ್ ಮುಖಂಡರು ಲಕ್ಷ್ಮಣ ಸವದಿಯನ್ನು ಇದೇ ವಿಚಾರವಾಗಿ ಕಾಲೆಳೆಯುತ್ತಿರುವುದಕ್ಕೆ ಮಾಧುಸ್ವಾಮಿ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಈ ಮದ್ಯೆ ಸಚಿವ ಮಾಧುಸ್ವಾಮಿ ಸವದಿ ಪರ ಬ್ಯಾಟಿಂಗ್ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top