fbpx
ಸಮಾಚಾರ

ಕೊಹ್ಲಿಯಲ್ಲ, ಧೋನಿಯಲ್ಲ: “ಈ ಆಟಗಾರನನ್ನು ಪಡೆಯಲು ಭಾರತ ಪುಣ್ಯ ಮಾಡಿರಬೇಕು” ಎಂದ ಇರ್ಫಾನ್ ಪಠಾಣ್- ಯಾರು ಆ ಆಟಗಾರ?

ವೆಸ್ಟ್​ ಇಂಡೀಸ್​ ಪ್ರವಾಸವನ್ನು ಅದ್ಭುತವಾಗಿ ಅಂತ್ಯಗೊಳಿಸಿರುವ ಟೀಂ ಇಂಡಿಯಾಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಏಕದಿನ, ಟಿ-20 ಹಾಗೂ ಟೆಸ್ಟ್ ಸರಣಿ ವಶ ಪಡಿಸಿಕೊಂಡ ಕೊಹ್ಲಿ ಪಡೆ ಈಗ ಮತ್ತಷ್ಟು ಬಲಿಷ್ಠವಾಗಿದೆ. ಅಲ್ಲದೆ ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್​ನಲ್ಲಿ 120 ಅಂಕದೊಂದಿಗೆ ಅಗ್ರ ಸ್ಥಾನಕ್ಕೇರಿದೆ. ಹೀಗಿರುವಾಗ ಟೀಂ ಇಂಡಿಯಾದ ಮಾಜಿ ವೇಗಿ ಇರ್ಫಾನ್ ಪಠಾಣ್ ಭಾರತದ ಯುವ ವೇಗಿಯೋರ್ವನನ್ನು ಕೊಂಡಾಡಿದ್ದಾರೆ.

 

 

ಭಾರತ ತಂಡಕ್ಕೆ ವೇಗಿ ಜಸ್ಪ್ರಿತ್‌ ಬುಮ್ರಾ ಅತ್ಯಂತ ಪ್ರಮುಖ ಆಟಗಾರ ಎಂಬುದನ್ನು ನಂಬಿರುವ ಮಾಜಿ ವೇಗಿ ಇರ್ಫಾನ್‌ ಪಠಾಣ್‌, ವೆಸ್ಟ್ ಇಂಡೀಸ್‌ ವಿರುದ್ಧದ ಅವರ ಹ್ಯಾಟ್ರಿಕ್‌ ವಿಕೆಟ್‌ ಸಾಧನೆ ಇದೇ ಕೊನೆಯಲ್ಲಾ ಎಂದು ಹೇಳಿದ್ದಾರೆ. “ಬುಮ್ರಾ ಭಾರತಕ್ಕಾಗಿ ಆಡದಿದ್ದಾಗ, ಅದು ಎಲ್ಲರಿಗಿಂತ ದೊಡ್ಡ ನಷ್ಟವಾಗಲಿದೆ. ಅವರು ತಂಡಕ್ಕೆ ಅಷ್ಟು ಪ್ರಮುಖ ಆಟಗಾರರಾಗಿದ್ದಾರೆ. ಆದ್ದರಿಂದ ಅಂತಹ ಆಟಗಾರರನ್ನು ಭಾರತ ತಂಡ ಹೊಂದಿರುವುದು ಅದೃಷ್ಟದ ಸಂಗತಿ ಎಂದು ಹೇಳಿದರು. ಮುಂಬರುವ ದಿನಗಳಲ್ಲಿ ಭಾರತ ಮೂರು ಸ್ವರೂಪದ ಆಟದಲ್ಲಿ ಅವರಂತಹ ಆಟಗಾರರನ್ನು ಹುಡುಕಬೇಕು” ಎಂದು ಪಠಾಣ್ ಹೇಳಿದ್ದಾರೆ.

ಬುಮ್ರಾ ವೆಸ್ಟ್ ಇಂಡೀಸ್ ವಿರುದ್ಧ ಎರಡು ಟೆಸ್ಟ್ ಸರಣಿಯಲ್ಲಿ 13 ವಿಕೆಟ್ಗಳನ್ನು ಕಬಳಿಸುವ ಮೂಲಕ ಪ್ರಮುಖ ಪಾತ್ರವಹಿಸಿದ್ದರು. ಕ್ರಿಕೆಟಿನ ಮೂರು ಸ್ವರೂಪದ ಆಟದಲ್ಲಿ ವಿಶ್ವದ ಅತ್ಯುತ್ತಮ ಆಟಗಾರ ಎಂದು ಪರಿಗಣಿಸಲ್ಪಟ್ಟಿರುವ ಬುಮ್ರಾ, ಇತ್ತೀಚಿಗೆ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಟೆಸ್ಟ್ ಸರಣಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೂರನೇ ಭಾರತೀಯ ಆಟಗಾರ ಎನ್ನುವ ಖ್ಯಾತಿಗೆ ಒಳಗಾಗಿದ್ದರು. ಇದಕ್ಕೂ ಮೊದಲು ಭಾರತ ತಂಡದ ಪರವಾಗಿ ಹರ್ಭಜನ್ ಸಿಂಗ್ ಹಾಗೂ ಇರ್ಫಾನ್ ಪಠಾಣ ಅವರು ಈ ಸಾಧನೆ ಮಾಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top