fbpx
ಸಮಾಚಾರ

ವೈರಲ್ ಸಿಂಗರ್ ರಾನು ಬಗ್ಗೆ ಲತಾ ಮಂಗೇಶ್ಕರ್ ಹೇಳಿಕೆಗೆ ಟ್ವಿಟ್ಟಿಗರ ಆಕ್ರೋಶ!

ರೈಲ್ವೆ ಸ್ಟೇಷನ್ ನಲ್ಲಿ ಹಾಡಿದ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ನಂತರ ಖ್ಯಾತಿಗಳಿಸಿದ ರಾನು ಮೊಂಡಲ್ ಬಗ್ಗೆ ಲತಾ ಮಂಗೇಶ್ಕರ್ ನೀಡಿರುವ ಹೇಳಿಕೆಗೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಟೀಕೆಗೆ ಒಳಗಾಗಿದೆ.

ರಾನು ಮೊಂಡಲ್ ಅವರ ಬಗ್ಗೆ ಮಾತನಾಡಿದ ಲತಾ ಮಂಗೇಶ್ಕರ್ ಅವರು, ನನ್ನ ಹೆಸರು ಹಾಗೂ ಕೆಲಸದಿಂದ ಯಾರಿಗಾದರೂ ಒಳ್ಳೆಯದ್ದು ಆಗಿದ್ದರೆ, ನಾನು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ಯಾರನ್ನಾದರೂ ಅನುಕರಿಸುವುದರಿಂದ ಯಶಸ್ಸು ಸಿಗುವುದಿಲ್ಲ. ನಾನು, ಕಿಶೋರ್, ರಫಿ, ಮುಕೇಶ್ ಅಥವಾ ಆಶಾ ಅವರು ಹಾಡಿದ ಹಾಡುಗಳನ್ನು ಹಾಡುವ ಮೂಲಕ ಜನರನ್ನು ಆಕರ್ಷಿಸಬಹುದು. ಆದರೆ ಇದು ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಹೇಳಿದ್ದಾರೆ.

 

 

ಆದರೆ ಲತಾ ಅವರ ಈ ರೀತಿಯ ಪ್ರತಿಕ್ರಿಯೆ ಜನರಿಗೆ ಇಷ್ಟವಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಇದಕ್ಕೆ ನಕಾರಾತ್ಮಕ ಕಮೆಂಟ್​ಗಳು ಸಿಗುತ್ತಿವೆ. ಸಾಕಷ್ಟು ಮಂದಿ ಲತಾ ಅವರ ಈ ನಡೆಯನ್ನು ಟೀಕಿಸಿ ಕಮೆಂಟ್​ ಮಾಡುತ್ತಿದ್ದಾರೆ. ಲತಾ ಮಂಗೇಶ್ಕರ್​ ಅವರು ವೃತ್ತಿ ಜೀವನದ ಯಶಸ್ಸಿನಲ್ಲಿರುವಾಗ ತುಂಬಾ ಜನ ಮಹಿಳಾ ಗಾಯಕಿಯರ ಜೀವನ ಹಾಳು ಮಾಡಿದ್ದರು. ಈಗ ಅವರು ಯಾರನ್ನಾದರೂ ಪ್ರೋತ್ಸಾಹಿಸಲು ಹೇಗೆ ಸಾಧ್ಯ ಎಂದು ಒಬ್ಬರು ಟ್ವೀಟ್​ ಮಾಡಿದ್ದಾರೆ.

‘ರಾನು ಮೊಂಡಲ್ ಒಬ್ಬ ಬಡ ಮಹಿಳೆ ತಮ್ಮ ಜೀವನಕ್ಕಾಗಿ ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಹಾಡಿದ್ದಾರೆ.ಈಗ ಅವರ ಧ್ವನಿಯನ್ನು ಸಾಮಾಜಿಕ ವಲಯದಲ್ಲಿ ಗುರುತಿಸಿದೆ. ಆದ್ದರಿಂದ ಅವರು ಈಗ ತಾರೆಯಾಗಿದ್ದಾರೆ.ಆದರೆ ಲತಾಜಿ ಅವರಿಗೆ ಹೆಚ್ಚು ಕೃತಜ್ಞತೆ, ಅಭಿನಂದನೆ ಮತ್ತು ಸಹಾಯ ಮಾಡುವ ಮೂಲಕ ಈ ಅನುಕರಣೆ ಕುರಿತ ಉಪನ್ಯಾಸವನ್ನು ತಪ್ಪಿಸಬಹುದಿತ್ತು ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top