fbpx
ಸಮಾಚಾರ

ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೇ ಸವಾಲು ಹಾಕಿದ ನಟಿ ಸೋನು ಗೌಡ!

ದೇಶದಲ್ಲಿ ಜಾರಿಗೆ ಬಂದಿರುವ ನೂತನ ಸಂಚಾರ ನಿಯಮಗಳಿಂದಾಗಿ ದಂಡ ಹಾಕಿಸಿಕೊಳ್ಳುವವರ ಸಂಖ್ಯೆ ಪ್ರತನಿತ್ಯ ಏರತೊಡಗಿದೆ. ನೂತನ ಸಂಚಾರಿ ನಿಯಮಗಳ ಅನ್ವಯ ಹೆಲ್ಮೆಟ್ ಇಲ್ಲದೆ ಗಾಡಿ ಚಲಾಯಿಸುವುದು, ಅಗತ್ಯ ದಾಖಲೆಗಳಲ್ಲಿದೇ ಇರುವುದು ಕೂಡ ಅಪರಾಧ. ಇಂತಹ ಪ್ರಕರಣಗಳಲ್ಲಿಗೆ ಟ್ರಾಫಿಕ್ ಪೊಲೀಸರು ದುಬಾರಿ ದಂಡ ವಿಧಿಸುತ್ತಿದ್ದಾರೆ. ಈ ಹಿಂದೆ 500 ರೂ ದಂಡ ವಿಧಿಸುತ್ತಿದ್ದ ಪ್ರಕರಣಗಳಿಗೆ ಇದೀಗ ಕನಿಷ್ಛ 2 ಸಾವಿರ ರೂ ದಂಡ ಹೇರಲಾಗುತ್ತಿದೆ. ನಿನ್ನೆ ದೇಶಾದ್ಯಂತ ಭಾರಿ ಮೊತ್ತದ ದಂಡ ವಸೂಲಾಗಿದೆ.

 

 

ಕೇಂದ್ರದ ಈ ನಿಯಮ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಯನ್ನು ಹುಟ್ಟು ಹಾಕಿದ್ದು ಮಾತ್ರವಲ್ಲದೆ ಸಾರ್ವಜನಿಕರು ಈ ನಿಯಮಗಳ ವಿರುದ್ಧ ಕಿಡಿಕಾರಿದ್ದಾರೆ. ಈ ನಡುವೆ ನಟಿ ಸೋನು ಗೌಡ ವಾಹನ ಚಾಲಕರಿಗೆ ಭಾರೀ ದಂಡ ವಿಧಿಸುತ್ತಿರುವ ಸರ್ಕಾರದ ಕ್ರಮ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಸವಾಲು ಹಾಕಿದ್ದಾರೆ.

“ದಂಡ ವಿಧಿಸುವ ಮುನ್ನ ನೀವು ಒಳ್ಳೆಯ ರಸ್ತೆಗಳನ್ನು ಕೊಟ್ಟಿದ್ದೀರಾ ಎಂದು ನೋಡಿಕೊಳ್ಳಿ. ಜನಸಾಮಾನ್ಯರು ಕಷ್ಟಪಟ್ಟು ದುಡಿದ ಹಣವನ್ನು ತೆಗೆದುಕೊಂಡು ಅವರನ್ನು ಕಷ್ಟಕ್ಕೆ ತಳ್ಳಬೇಡಿ. ರಸ್ತೆಗಳಲ್ಲಿ ಕಾಣಸಿಗುವ ಪ್ರತಿಯೊಂದು ಗುಂಡಿಗಳಿಗೆ ಸರ್ಕಾರಕ್ಕೆ ನಾವೆಷ್ಟು ಫೈನ್ ಹಾಕಬೇಕು? ಟ್ರಾಫಿಕ್ ರೂಲ್ಸ್ ಮಾಡುವ ಮುನ್ನ ಒಳ್ಳೆಯ ರಸ್ತೆಗಳನ್ನು ನೀಡಿ” ಈನ್ದು ಸೋನುಗೌಡ ಮುಖ್ಯಮಂತ್ರಿಗಳಿಗೆ ಸವಾಲು ಹಾಕಿದ್ದಾರೆ.

ಅಷ್ಟೇ ಅಲ್ಲದೆ ಬೈಕ್ ಸವಾರನೊಬ್ಬ ಬೀಳುತ್ತಿರುವ ಚಿತ್ರ ಹಾಕಿ ಕುಡಿದು ಚಾಲನೆ 10000 ರೂ, ಜಂಪಿಂಗ್ ಟ್ರಾಫಿಕ್ ಲೈಟ್ 5000 ರೂ., ಮೊಬೈಲ್ ಫೋನ್ ಬಳಕೆ 5000 ರೂ., ಸೀಟ್‌ಬೆಲ್ಟ್ ಧರಿಸದಿದ್ದರೆ 1000 ರೂ. ಹೀಗೆ ದಂಡದ ಪಟ್ಟಿಯನ್ನು ತಮ್ಮ ಟ್ವೀಟ್‌ನಲ್ಲಿ ಹಾಕಿದ್ದಾರೆ ಸೋನು ಗೌಡ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top