fbpx
ಸಮಾಚಾರ

ಕೊನೆಯ ಕ್ಷಣದಲ್ಲಿ ಚಂದ್ರಯಾನ-2 ವಿಫಲ: ಇಸ್ರೋ ಶ್ರಮಕ್ಕೆ ಅಭಿನಂದನೆ.

ಇಡೀ ದೇಶ ಕುತೂಹಲದಿಂದ ನಿನ್ನೆ ರಾತ್ರಿ ‘ಚಂದ್ರಯಾನ 2’ ಕಣ್ತುಂಬಿಕೊಳ್ಳಲು ಕಾದು ಕುಳಿತಿತ್ತು. ಚಂದ್ರನ ಮೇಲೆ ಇಳಿಯಬೇಕಾಗಿದ್ದ ವಿಕ್ರಮ್ ಲ್ಯಾಂಡರ್ ಕೊನೇ ಕ್ಷಣದಲ್ಲಿ ಸಂವಹನ ಕಳೆದುಕೊಂಡಿತ್ತು. ಇದರಿಂದಾಗಿ ಇಸ್ರೋ ವಿಜ್ಞಾನಿಗಳು ಸೇರಿದಂತೆ ದೇಶದ ಜನರು ಕೂಡ ನಿರಾಸೆಗೊಳಗಾಗಿದ್ದಾರೆ.

 

 

ಇಸ್ರೋ ಸಾಧನೆಗೆ ದೇಶದೆಲ್ಲಡೆ ಮೆಚ್ಚುಗೆ ವ್ಯಕ್ತವಾಗಿದ್ದು, ಅಭಿನಂದನೆಯ ಮಹಾಪೂರವೇ ಹರಿದು ಬರುತ್ತಿದೆ. ಚಂದ್ರಯಾನದ ಅಂತಿಮ ಕ್ಷಣ ಕಣ್ತುಂಬಿಕೊಳ್ಳಲು ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು ಸಹ ವಿಜ್ಞಾನಿಗಳಿಗೆ ಧೈರ್ಯ ತುಂಬಿದ್ದಾರೆ. ಉಳಿದಂತೆ ಎಲ್ಲ ರಾಜಕೀಯ ನಾಯಕರು, ಗಣ್ಯರು ಸಹ ಇಸ್ರೋ ವಿಜ್ಞಾನಿಗಳ ಸಾಧನೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಸೂಚಿಸಿದ್ದಾರೆ.

 

 

ಇಸ್ರೋ ವಿಜ್ಞಾನಿಗಳ ಅವಿರತ ಪರಿಶ್ರಮಕ್ಕೆ ಇಡೀ ದೇಶ ಅಭಿನಂದನೆ ಸಲ್ಲಿಸಿದ್ದು, ಇಸ್ರೋ ಎಂದಿಗೂ ಭಾರತದ ಹೆಮ್ಮೆ ಎಂದು ಹೇಳಿದ್ದಾರೆ.ಚಂದ್ರಯಾನ-2 ಕೊನೆಯ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡಿರಬಹುದು. ಆದರೆ, ನಿಮ್ಮೊಂದಿಗೆ ಇಡೀ ರಾಷ್ಟ್ರವಿದೆ. ನಿಮ್ಮ ಸಾಧನೆ ಕಡಿಮೆಯೇನೂ ಇಲ್ಲ. ನಿಮ್ಮ ಕಾರ್ಯತತ್ವಕ್ಕೆ ನಮ್ಮ ಸಲಾಂ, ನೀವು ನಮ್ಮ ಹೃದಯ ಗೆದ್ದಿದ್ದೀರಿ ಎಂದು ಇಸ್ರೋ ಸಾಧನೆಗೆ ಬೆನ್ತಟ್ಟಿದ್ದಾರೆ.

 

 

ವಿಕ್ರಮ್ ಲ್ಯಾಂಡ್ ಆಗುವ ಪ್ರಕ್ರಿಯೆ ಸರಿಯಾಗಿ ಆರಂಭಗೊಂಡಿತ್ತು. ಚಂದ್ರನ ದಕ್ಷಿಣ ಧ್ರುವದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗುವ ಸೂಚನೆಯೂ ಲಭಿಸಿತು. ಆದರೆ ಲ್ಯಾಂಡರಿನಿಂದ ಪಥ ಬದಲಾದ ಕಾರಣ ಇಸ್ರೋ ಕೇಂದ್ರಕ್ಕೆ ಬರಬೇಕಾದ ಸಂದೇಶ ತಡವಾಗಿತ್ತು. ಚಂದ್ರನನ್ನು ತಲುಪಲು 2.1ಕಿಮೀ ದೂರ ಇದ್ದ ಸಂದರ್ಭದಲ್ಲಿ ಲ್ಯಾಂಡರಿನಿಂದ ಸಿಗ್ನಲ್ ಲಭಿಸಲಿಲ್ಲ. ಪರಿಣಾಮ ಇಸ್ರೋ ಅಧಿಕಾರಿಗಳ ಮುಖದಲ್ಲಿ ಆತಂಕ ಟೆನ್ಷನ್ ಕಂಡು ಬಂದಿತ್ತು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top