fbpx
ಸಮಾಚಾರ

ಅನಗದಿಕರಣ ಒಂದೇ ಕಾರಣವೇ ಆರ್ಥಿಕ ಕುಸಿತಕ್ಕೆ??

ನಮ್ಮ ದೇಶ ಈಗ ಆರ್ಥಿಕ ಕುಸಿತವನ್ನು ಅನುಭವಿಸುತ್ತಿದೆ, ಎಲ್ಲ ಮಾಧ್ಯಮದಲ್ಲಿ ಬರೀ ಇದರದೇ ಮಾತು. ಹೆಚ್ಚಾಗಿ ಎಲ್ಲಾ ವಿತ್ತ ಚಾಣಕ್ಷರು ಈಗಿನ ಪರಿಸ್ತಿಥಿಯ ಬಗ್ಗೆ ತಮ್ಮದೇ ಆದ ಪ್ರತಿಪಾದನೆಯನ್ನು ಮಂಡಿಸುತ್ತಿದ್ದಾರೆ. ಎರಡು ವರ್ಷ ಹಿಂದೆ ಮಾಡಿದ ಅನಗದಿಕರಣ ಕಾರಣ ಎಂದು ಕೆಲ ಜನ ಹೇಳಿದರೆ ಇನ್ನು ಕೆಲ ಜನ ಒಂದು ವರ್ಷ ಹಿಂದೆ ಮಾಡಿದ ಸರಕು ಮತ್ತು ಸೇವಾ ತೆರಿಗೆಯ ಪ್ರಭಾವ ಎನ್ನುವ ಉಪಪಾದನೆ. ಇದೆಲ್ಲ ವಿಷಯ ಇಟ್ಟುಕೊಂಡು ಒಂದು ಬಾರಿ ತಿಳಿದುಕೊಳ್ಳಲು ಹೊರಟಾಗ ಕೆಳ ಬರೆದ ವಿಷಯಗಳು ತಿಳಿಯಲು ಪ್ರಾರಂಭವಾದವು.

ನಮ್ಮ ದೇಶ ಹೆಚ್ಚಾಗಿ ಕೃಷಿ, ವಾಹನ ತಯಾರಿಕಾ ಘಟಕ ಹಾಗು ಸರ್ವಿಸ್ ಸೆಕ್ಟರ್‌ಗಳಮೇಲೆ ಅವಲಂಬಿತವಾಗಿದೆ. ಕೆಲ ಭಾಗ ರಿಯಲ್ ಎಸ್ಟೆÃಟ ಕೂಡ ತನ್ನದೇಆದ ಪ್ರಭಾವವನ್ನು ಬೀರುತ್ತದೆ. ಒಂದೊಂದು ಅವಲಂಬಿತ ಕ್ಷೆÃತ್ರಗಳನ್ನು ನೋಡುತ್ತ ಹೊರಟಾಗ ತಿಳಿದು ಬರುತ್ತವೆ ಅದರದೇ ಆದ ಪರಿಣಾಮಗಳ ವಿಷಯ. ಇದೆಲ್ಲದರ ಜೊತೆ ನಮ್ಮ ವಿಶೇಷಗ್ನö್ಯರು ಹೇಳುವ ಹಾಗೆ ಅನಗದಿಕರಣ ಹಾಗು ಸೇವಾ ಮತ್ತು ಸರಕು ತೆರಿಗೆಯ ಪರಿಣಾಮಗಳೂ ಕೂಡಿ ಬರುತ್ತವೆ.
ಕೃಷಿ ವಿಭಾಗ ಬಹುಪಟ್ಟು (೫೫%- ಊಳಬಹುದಾದ ನೆಲ) ಮಳೆಗಾಲದ ಮೇಲೆ ಅವಲಂಬಿಸುತ್ತದೆ, ಈ ಬಾರಿ ಪ್ರತಿ ವರ್ಷ ಬೀಳುವ ಮಳೆಗಿಂತ ೩೩% ಕಡಿಮೆ ಮಳೆ ಆಗಿದೆ. ಮುಂಗಾರು ಬೆಳೆಗಳು ಹೆಚ್ಚಾಗಿ ಜೂನ ಹಾಗು ಜುಲೈ ತಿಂಗಳಲ್ಲಿ ಬರುವ ಮಳೆಯ ಮೇಲೆ ಅವಲಂಬಿಸಿರುತ್ತವೆ, ಕಡಿಮೆ ಆದ ಮಳೆಯಿಂದ ಫಸಲುಗಳ ಇಳುವರಿಯಲ್ಲಿ ಇಳಿತಕಂಡು ಅದು ಕೂಡ ನಮ್ಮ ಆರ್ಥಿಕ ಕುಸಿತಕ್ಕೆ ಒಂದು ಬಲವಾದ ಕಾರಣವಾಗಿದೆ. ನಮ್ಮ ತಯಾರಿಕಾ ಘಟಕ ಕೃಷಿ ಉಪಕರಣಗಳ ಮೇಲೆ ೧.೩% ಅವಲಂಬಿಸಿದೆ. ಕಡಿಮೆ ಆದ ಮಳೆಇಂದ ಕ್ರಷಿ ಉಪಕರಣಗಳ ತಯ್ಯಾರಿಕೆ ಹಾಗು ವ್ಯಾಪಾರಕೂಡ ಕುಸಿತಗೊಂಡಿದೆ. ಕೃಷಿ ಉಪಕರಣಗಳ ವ್ಯಾಪಾರ ಹಾಗು ತಯ್ಯಾರಿಕೆ ಮುಂಬರುವ ಮಳೆಗಾಲದ ಮೇಲೆ ನಿಂತುಕೊಂಡಿದ್ದು, ಸರಿಯಾದ ಮಳೆ ಆದರೆ ನಮ್ಮ ಆರ್ಥಿಕ ಪರಿಸ್ತಿಥಿಯಲ್ಲಿ ಸ್ವಲ್ಪ ಏರು ಕಾಣಿಸಬಹುದು.

ಇನ್ನು ತಯಾರಿಕಾ ಘಟಕದ ಕಥೆ ಒಂದುಥರ ವಿಚಿತ್ರ. ನಮ್ಮ ದೇಶದ ತಯಾರಿಕಾ ಘಟಕ ಹೆಚ್ಚಾಗಿ ಅಟೊಮೋಟಿವ ಸೆಕ್ಟರ್ ಮೇಲೆ ಅವಲಂಬಿಸಿದೆ. ಪೂರ್ತಿ ತಯಾರಿಕಾ ಸಾಮರ್ಥದಲ್ಲಿ ವಾಹನ ತಯಾರಿಕೆ ೭% ಪಾಲು ತನ್ನದಾಗಿಸಿಕೊಂಡಿದೆ. ಕಾರು ತಯಾರಿಕೆಯಲ್ಲಿ ಬಲವಾದ ಕುಸಿತ ಕಂಡಿರುವುದಕ್ಕೆ ಕಾರಣಗಳು ಹಲವು ಅದರಲ್ಲಿ ಒಂದು ಕಾರಿನ ವಾಯುಮಾಲಿನ್ಯ ಪರಿಮಿತಿಯ ಮಾನದಂಡದಲ್ಲಿ ಸರ್ಕಾರ ಬದಲಾವಣೆಗಳನ್ನು ಒಡ್ಡಿದ್ದು. ಅದು ಬರುವ ವರ್ಷದಿಂದ ಚಾಲನೆಯಲ್ಲಿ ಬರಲಿದೆ, ನಮ್ಮಲ್ಲಿದ್ದ ಈಗಿನ ಬಿಸ್ ೪ ನಿಂದ ಬಿಸ್ ೬ ಗೆ ಬದಲಾವಣೆ ಗೊಳ್ಳಬೆಕಿದೆ. ಇನ್ನೊಂದು ವಿಷಯವೆಂದರೆ ಸರ್ಕಾರದ ಹೆಮ್ಮೆಯ ಎಲೆಕ್ಟಿçಕ್ ವಾಹನಗಳ ಚಾಲನೆಯ ಬಗ್ಗೆಯೂ ಮಾತುಗಳು ಅತೀ ಹೆಚ್ಚಾಗಿ ನಡೆಯುತ್ತಿವೆ. ಎಲೆಕ್ಟಿçಕ್ ಕಾರುಗಳು ಹೆಚ್ಚು ಬಳಕೆಯಲ್ಲಿ ಬಂದರೆ ಬೇರೆ ಕಾರುಗಳ ಬಿಕರಿ ಕಡಿಮೆ ಆಗುವ ಸಾದ್ಯತೆ ಇದೆ, ಅಂದರೆ ಮುಂಬರುವ ದಿನದಲ್ಲಿ ಬಿಸ್ ೬ ಕಾರುಗಳ ಮೇಲೆ ಹಣ ಹೂಡಬೇಕೊ ಅಥವಾ ಎಲೆಕ್ಟಿçಕ ಕಾರುಗಳ ತಯಾರಿಕೆಯ ಮೇಲೆ ಹಣಹೂಡಬೇಕೊ ತಿಳಿಯದ ಪರಿಸ್ತಿತಿ ಬಂದಿದೆ ದೊಡ್ಡ ದೊಡ್ಡ ಕಂಪನಿಗಳಮೇಲೆ. ಈ ತಿಳಿಯದ ಪರಿಸ್ತಿತಿಯಲ್ಲಿ ಕಂಪನಿಗಳು ಇದೆಲ್ಲಾ ಯೊಚನೆಗಳು ಸರಳವಾಗಿ ಸ್ಪಷ್ಟತೆ ಬಂದಾಗ ತಮ್ಮ ಹೂಡಿಕೆಯ ಕೆಲಸ ಪ್ರಾರಂಭ ಮಾಡುತ್ತಾರೆ ಅಲ್ಲಿಯ ವರೆಗೆ ಹುಡಿಕೆ ಇಲ್ಲದೆ ಇಂಥ ಕಂಪನಿಗಳ ಮೇಲೆ ಅವಲಂಬಿಸಿರುವ ಚಿಕ್ಕ ಚಿಕ್ಕ ಕಂಪನಿಗಳಿಗೆ ಕೆಲಸ ಕಡಿಮೆಯಾಗಿ ಕಂಪನಿಯ ಆರ್ಥಿಕತೆ ಕುಸಿದಿದೆ.

ಇನ್ನು ಕಡಿಮೆಯಾದ ಕಾರುಗಳ ಬಿಕರಿಗೆ ಜನರ ಬದಲಾಗುತ್ತಿರುವ ಯೊಚನೆಗಳು, ಜೀವನ ಶೈಲಿ ಹಾಗು ತಂತ್ರಜ್ನಾನದ ಬಲವಾದ ಪ್ರಭಾವವಿದೆ. ಹೆಚ್ಚಾಗಿ ಕಾರುಗಳ ಬಿಕರಿ ದೊಡ್ಡ ದೊಡ್ಡ ಶಹರಗಳಲ್ಲಿ ಆಗುತ್ತದೆ ಆದರೆ ಅಂತ ದೊಡ್ಡ ಶಹರಗಳಲ್ಲಿ ಈಗ ತಂತ್ರಜ್ನಾöನದ ಸಹಾಯದಿಂದ ನಿಂತು ನಿಂತಲ್ಲಿಯೇ ಬೆಕಾದಾಗ ಕೇಳಿದಾಗ ಬಂದು ನಿಲ್ಲುವ ಕ್ಯಾಬ ಸೆರ್ವಿಸ್‌ಗಳಿಂದ ಜನರಿಗೆ ಸ್ವಂತ ಕಾರು ಖರಿದಿಸಿ ಸಿಗುವ ಟ್ರಾಫಿಕ್ ಭೆದಿಸಿ ಅಡ್ಯಾಡುವ ಯುದ್ದ ಬೇಡ ಎನ್ನುವಹಾಗಿದೆ. ಹೆಚ್ಚು ಯುವಜನರು ಈಗ ಕಾರು ಬೇಕೆನಿಸಿದಾಗ ತಮ್ಮ ಮೊಬೈಲಿನಲ್ಲಿರುವ ಯಾಪ್ ತಗೆದು ಬೇಕಾದಂತ ಕಾರು ಬುಕ್ ಮಾಡಿ ತಮಗೆ ಬೇಕಾದ ಜಾಗಕ್ಕೆ ಯಾವ ಕಿರಿ ಕಿರಿ ಇಲ್ಲದೆ ತಲುಪುತ್ತಿದ್ದಾರೆ, ಅವರ ಪ್ರಕಾರ ಸಾಲ ಸುಲಿಗೆ ಮಾಡಿ ಅದಕ್ಕೆ ಬಡ್ಡಿ ಕಟ್ಟಿ ತೆಗೆದುಕೊಂಡ ಗಾಡಿಯ ಪೊಷಣೆಗೆ ಹಣ ಹಾಕಿ ಅದನ್ನು ೫ ವರ್ಷ ಉಪಯೊಗಿಸುವ ಹಣದಲ್ಲಿ ಅದೇ ೫ ವರ್ಷ ಅರಾಮಾಗಿ ಯಾವ ಚಿಂತೆಇಲ್ಲದೇ ಕಾರಿನಲ್ಲಿ ಓಡಾಟ ಅನುಭವಿಸುತ್ತಿದ್ದಾರೆ. ಈ ವಿಷಯದ ಕಾರಣ ಕಾರಿನ ಬಿಕರಿ ನಿಂತು ಆರ್ಥಿಕ ಕುಸಿತಕ್ಕೆ ತನ್ನದೇಯಾದ ಪಾಲನ್ನು ಕೊಡುತ್ತಿದೆ.

ಅನಗದಿಕರಣ – ನಮ್ಮ ಕೆಲ ವಿತ್ತ ಚಾಣಕ್ಯರ ಪ್ರಕಾರ ಇದೊಂದೇ ಕಾರಣ ಈಗಿನ ಕುಸಿತಕ್ಕೆ ಆದರೆ ಇದರ ಪಾಲು ಎಷ್ಟು ಎಂದು ಯೊಚಿಸಿದರೆ ಅಷ್ಟೊಂದು ನೇರವಾದ ಪ್ರಭಾವ ಕಂಡುಬರುವುದಿಲ್ಲಾ. ಅನಗದಿಕರಣದಿಂದ ಹೆಚ್ಚಾಗಿ ತೊಂದರೆಯಾಗಿದ್ದು ಕಳ್ಳ ಹಣ ಅಥವಾ ಕಪ್ಪು ಹಣದಿಂದ ನಡೆದ ವ್ಯಾಪಾರಗಳಲ್ಲಿ ಮಾತ್ರ. ಅನಗದಿಕರಣವಾದ ಮೇಲೆಇಂದ ರಿಯಲ್ ಎಸ್ಟೆÃಟ ಮಾತ್ರ ತುಂಬಾ ಕುಸಿತ ಕಂಡಿದೆ. ಹೆಚ್ಚಾಗಿ ಕಟ್ಟಡಗಳನ್ನು ಕಟ್ಟುತ್ತಿದ್ದ ಮದ್ಯಮವರ್ಗದ ಬಿಲ್ರ‍್ಗಳು ತಮ್ಮ ಎಲ್ಲಾ ಪ್ರೊಜೆಕ್ಟಗಳನ್ನು ಕೆಲದಿನದವರೆಗೆ ನಿಲ್ಲಿಸಿದ್ದರು. ದೊಡ್ಡ ದೊಡ್ಡ ಬಿಲ್ಡರಗಳ ಕೆಲಸಗಳು ಹಾಗೆಯೇ ಮುಂದೊರೆದಿದ್ದವು. ಹೂಡಿಕೆಗೆಂದು ಕರಿದಿಸುವವರಿಗೆ ಮನೆ ಖರಿದಿಸಲು ಹಣ ಇಲ್ಲದೇ ಮನೆಯ ವ್ಯಾಪಾರ ಕುಸಿತ ಕಂಡಿತ್ತು ನಂತರ ಆ ವ್ಯಾಪಾರ ಸಂಬಳದ ಹಣದಿಂದ ಅಥವಾ ಬಿಳಿ ಹಣದಿಂದ ಖರಿದಿಸುವ ಜನರಿಂದ ಮಾತ್ರ ನಡೆದಿದ್ದರಿಂದ ವ್ಯಾಪಾರ ಕುಸಿತಕಂಡಿತ್ತು. ಅನಗದಿಕರಣದಿಂದ ಇಂತ ಕಪ್ಪುಹಣದಿಂದ ನಡೆಯುವ ಬಹು ಘಟಕಗಳ ಮೇಲೆ ಪರಿಣಾಮ ಬಿದ್ದಿತ್ತು. ಇನ್ನು ಮನೆ ಖರಿದಿಯ ಮೇಲೆ ಕೂಡ ಈಗಿನ ಯುವ ಜನರ ಜೀವನ ಶೈಲಿ ಹಾಗು ಅವರ ಯುವ ಯೊಚನೆಯ ಪ್ರಬಾವ ಕಾರು ಖರಿದಿಸುವದರ ಮೇಲೆ ಬಿದ್ದ ಹಾಗೆ ಹಾಗು ಅವೇ ಕಾರಣಗಳಿಂದ ಮನೆ ವ್ಯಾಪಾರದಲ್ಲಿಯೂ ಕುಸಿತ ಕಾಣುತ್ತಿವೆ.

 

–ವಿಕಾಸ ಕುಲ್ಕರ್ಣಿ…

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top