fbpx
ಸಮಾಚಾರ

ಭಾರೀ ಪ್ರಮಾಣದ ದಂಡಕ್ಕೆ ರೋಸಿ ಹೋಗಿ ಬೈಕ್ ಗೆ ಬೆಂಕಿ ಹಚ್ಚಿದ ಸವಾರ!

ದೇಶದಲ್ಲಿ ಜಾರಿಗೆ ಬಂದಿರುವ ನೂತನ ಸಂಚಾರ ನಿಯಮಗಳಿಂದಾಗಿ ದಂಡ ಹಾಕಿಸಿಕೊಳ್ಳುವವರ ಸಂಖ್ಯೆ ಪ್ರತನಿತ್ಯ ಏರತೊಡಗಿದೆ. ನೂತನ ಸಂಚಾರಿ ನಿಯಮಗಳ ಅನ್ವಯ ಹೆಲ್ಮೆಟ್ ಇಲ್ಲದೆ ಗಾಡಿ ಚಲಾಯಿಸುವುದು, ಅಗತ್ಯ ದಾಖಲೆಗಳಲ್ಲಿದೇ ಇರುವುದು ಕೂಡ ಅಪರಾಧ. ಇಂತಹ ಪ್ರಕರಣಗಳಲ್ಲಿಗೆ ಟ್ರಾಫಿಕ್ ಪೊಲೀಸರು ದುಬಾರಿ ದಂಡ ವಿಧಿಸುತ್ತಿದ್ದಾರೆ. ಈ ಹಿಂದೆ 500 ರೂ ದಂಡ ವಿಧಿಸುತ್ತಿದ್ದ ಪ್ರಕರಣಗಳಿಗೆ ಇದೀಗ ಕನಿಷ್ಛ 2 ಸಾವಿರ ರೂ ದಂಡ ಹೇರಲಾಗುತ್ತಿದೆ. ನಿನ್ನೆ ದೇಶಾದ್ಯಂತ ಭಾರಿ ಮೊತ್ತದ ದಂಡ ವಸೂಲಾಗಿದೆ.

ಹೀಗೆ ನಿಯಮ ಉಲ್ಲಂಘಿಸಿದ ಬೈಕ್ ಸವಾರ ದಂಡ ಮೊತ್ತ ಕೇಳಿ ತನ್ನ ಬೈಕನ್ನೇ ಸುಟ್ಟ ಘಟನೆ ನಡೆದಿದೆ. ದೆಹಲಿಯ ಚಿರಾಗ್‌ ಬಳಿಯ ತ್ರಿವೇಣಿ ಕಾಂಪ್ಲೆಕ್ಸ್ ಹತ್ತಿರ ಟ್ರಾಫಿಕ್ ಪೊಲೀಸರು ಎಂದಿನಂತೆ ತಮ್ಮ ಕರ್ತವ್ಯದಲ್ಲಿ ತೊಡಗಿದ್ದರು. ತಪಾಸೆ ವೇಳೆ ಸರ್ವೋದಯ ಎನ್‌ಕ್ಲೇವ್ ನಿವಾಸಿ ರಾಕೇಶ್ ಮಧ್ಯದ ಕುಡಿದಿರುವುದು ಖಚಿತಗೊಂಡಿದೆ. ನೂತನ ನಿಯಮದ ಪ್ರಕಾರ ಕುಡಿದು ವಾಹನ ಚಲಾಯಿಸಿದರೆ ಬರೋಬ್ಬರಿ 10,000 ರೂಪಾಯಿ ದಂಡ. ಪೊಲೀಸರು ತಡಮಾಡದೇ 10,000 ರೂಪಾಯಿ ದಂಡದ ಚಲನ್ ನೀಡಿದ್ದಾರೆ.

ಪೊಲೀಸರು ತಡೆದು ನಿಲ್ಲಿಸಿದ್ದಕ್ಕಾಗಿ ಸಿಟ್ಟಿನಲ್ಲಿದ್ದ ರಾಕೇಶ್, ದಂಡದ ಮೊತ್ತ ಕೇಳಿ ಬೆಚ್ಚಿ ಬಿದ್ದಿದ್ದಾರೆ. ಮೊದಲೇ ಅಮಲಿನಲ್ಲಿದ್ದ ರಾಕೇಶ್ ತನ್ನ ಬೈಕನ್ನೇ ಬೆಂಕಿ ಹಚ್ಚಿ ಸುಟ್ಟಿದ್ದಾರೆ. ಕುಡಿದು ವಾಹನ ಚಲಾಯಿಸುವುದರ ಜೊತೆಗೆ ಆತ ಹಲವು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡು ಬಂದಿದೆ. ರೂ.25,000ಗಳ ದಂಡ ವಿಧಿಸಿ, ಆತನ ಬೈಕ್‌ ಅನ್ನು ವಶಕ್ಕೆ ಪಡೆಯುವ ವೇಳೆ ಮಾಳವಿಯಾ ನಗರದ ತ್ರಿವೇಣಿ ಕಾಂಪ್ಲೆಕ್ಸ್ ಬಳಿ ಬೈಕಿಗೆ ಬೆಂಕಿ ಹಚ್ಚಿದ್ದಾನೆ. ಪೊಲೀಸರು ಆತನನ್ನು ಬಂಧಿಸಿ ವೈದಕೀಯ ತಪಾಸಣೆಗೆ ಒಳಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top