fbpx
ಸಮಾಚಾರ

ಅಭಿಷೇಕ್ ಅಂಬರೀಶ್ ಹೊಸ ಲುಕ್​ ನೋಡಿ​ ನಿಖಿಲ್ ಮಾಡಿದ ಕಾಮೆಂಟ್ ಏನು ಗೊತ್ತಾ?

‘ಅಮರ್’​ ಸಿನಿಮಾದ ನಂತರ ಅಭಿಷೇಕ್​ ಅಂಬರೀಷ್ ಅವರಿಗೆ ಸಾಲು ಸಾಲು ಸಿನಿಮಾಗಳ ಆಫರ್​ ಸಿಗುತ್ತಿದೆ ಎಂಬ ಸುದ್ದಿ ಗಾಂಧಿನಗರದ ಗಲ್ಲಿಗಳಲ್ಲಿ ಗುಲ್ಲಾಗಿತ್ತು. ಆದರೆ ಅಭಿಷೇಕ್​ ಮಾಡಲಿರುವ ಹೊಸ ಸಿನಿಮಾಗಳ ಕುರಿತು ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. ಆದರೆ ಅಭಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೊಸ ಲುಕ್​ ಇರುವ ಚಿತ್ರವೊಂದನ್ನು ಹಂಚಿಕೊಳ್ಳುವ ಮೂಲಕ ಹೊಸ ಸಿನಿಮಾದ ಬಗ್ಗೆ ಸುಳಿವು ಕೊಟ್ಟಿದ್ದಾರೆ.

 

 

 

ಈಗ ಅವರು ತಮ್ಮ ಇನ್ಸ್ಟಾ ಖಾತೆಯಲ್ಲಿ ಖಡಕ್ ಲುಕ್ ನೀಡಿರುವ ಫೋಟೋವೊಂದನ್ನು ಹಾಕಿಕೊಂಡಿದ್ದಾರೆ. ಇದೇ ಇವರ ಮುಂದಿನ ಸಿನೆಮಾದ ಪಾತ್ರದ ಲುಕ್ ಇರಬಹುದಾ? ಎಂಬ ಸಂಶಯ ಕಾಡುತ್ತಿದೆ. ಸ್ವಾತಂತ್ರ್ಯ ಹೋರಾಟಗಾರರಂತೆ ಮೀಸೆ ಹಾಗೂ ಗಡ್ಡ ಬಿಟ್ಟಿರುವ ಲುಕ್ ನಲ್ಲಿ ಅಭಿಷೇಕ್ ಕಾಣಿಸಿಕೊಂಡಿದ್ದು, ಈ ಲುಕ್ ಬಗ್ಗೆ ಈಗ ಭಾರಿ ಚರ್ಚೆಯಾಗ್ತಿದೆ.

ಇದಕ್ಕೆ ನಿಖಿಲ್ ಕುಮಾರಸ್ವಾಮಿ ಲುಕ್ಕಿಂಗ್ ಶಾರ್ಪ್, ಮುಂದಿನ ಸಿನಿಮಾಗೆ ಶುಭವಾಗಲಿ ಅಂತಾ ಕಮೆಂಟ್ ಮಾಡಿದ್ದಾರೆ. ನಿಖಿಲ್​​ ಕಮೆಂಟ್​​ಗೆ ಅಭಿಷೇಕ್​​ ರಿಪ್ಲೈ ಮಾಡಿದ್ದು, ಧನ್ಯವಾದ ತಿಳಿಸಿಸುದರ ಜೊತೆಗೆ ಕುರುಕ್ಷೇತ್ರದಲ್ಲಿ ಅಭಿಮನ್ಯು ಪಾತ್ರವನ್ನು ಉತ್ತಮವಾಗಿ ನಿರ್ವಹಿಸಿದ್ದೀರಿ ಎಂದು ಅಭಿನಂದನೆ ತಿಳಿಸಿದ್ದಾರೆ. ಜೊತೆಗೆ ಆದಷ್ಟು ಬೇಗ ನಿಮ್ಮ ಮುಂದಿನ ಚಿತ್ರ ಬರಲಿ ಎಂದು ಶುಭಹಾರೈಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top