fbpx
ಸಮಾಚಾರ

ರಾಜಕಾರಣಿಯಾದರು ರಾಘವೇಂದ್ರ ರಾಜ್ ಕುಮಾರ್

ಚಿತ್ರನಟ ರಾಘವೇಂದ್ರ ರಾಜ್‍ಕುಮಾರ್ ರಾಜಕೀಯಕ್ಕೆ ಬರುತ್ತಿದ್ದಾರಾ ಎಂದು ಗಾಬರಿಯಾಗಬೇಡಿ. ರಾಘಣ್ಣ ರಾಜಕಾರಣಿಯಾಗುತ್ತಿರುವುದು ಸತ್ಯ, ಆದರೆ ನಿಜ ಜೀವನದಲ್ಲಿ ಅಲ್ಲ ಬದಲಾಗಿ ಸಿನಿಮಾವೊಂದರಲ್ಲಿ. ಹೌದು, ಬರೋಬ್ಬರಿ 15 ವರ್ಷಗಳ ಬಳಿಕ ಮತ್ತೆ ಸಿನಿಮಾಗಳ ಕಡೆ ಮರಳಿರುವ ರಾಘವೇಂದ್ರ ರಾಜ್‍ಕುಮಾರ್ ಒಂದರ ಹಿಂದೊಂದು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಅಮ್ಮನ ಮನೆ’, ‘ತ್ರಯಂಬಕಂ’, ನಂತರ ಸದ್ಯ ‘ಪೊಗರು’ ಹಾಗೂ ‘ಆಡಿಸಿದಾತ’ ಚಿತ್ರಗಳಲ್ಲಿ ನಟಿಸುತ್ತಿರುವ ರಾಘಣ್ಣ ಇದರ ಬೆನ್ನಲ್ಲೇ ಈಗ ‘ವಾರ್ಡ್ ನಂಬರ್ 11’ ವನ್ನು ಒಪ್ಪಿಕೊಂಡಿದ್ದಾರೆ. ನಿನ್ನೆಯ ಗೌರಿ ಗಣೇಶ ಹಬ್ಬದ ಸಂಭ್ರಮದಲ್ಲಿ ‘ವಾರ್ಡ್ ನಂಬರ್ 11’ ಟೈಟಲ್ ಲಾಂಚ್ ಆಗಿದೆ.

ಈ ನಡುವೆ ರಾಘಣ್ಣ ಅವರು ಶ್ರೀಕಾಂತ್ ನಿರ್ದೇಶಿಸುತ್ತಿರೋ ವಾರ್ಡ್ ನಂ11 ಪೊಲಿಟಿಕಲ್ ಥ್ರಿಲ್ಲರ್‌ ಚಿತ್ರವೊಂದರಲ್ಲಿ ರಾಜಕಾರಣಿಯಾಗಿ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಇನ್ನು ಚಿತ್ರದಲ್ಲಿ ರಾಘಣ್ಣರ ಪಾತ್ರ ತುಂಬಾ ಕುತೂಹಲಕಾರಿಯಾಗಿರಲಿದೆಯಂತೆ. ಈ ಚಿತ್ರಕ್ಕೆ ರಾಘವೇಂದ್ರ ರಾಜ್‌ಕುಮಾರ್ ಪುತ್ರ ವಿನಯ್ ರಾಜ್‌ಕುಮಾರ್ ಶುಭ ಹಾರೈಸಿದ್ದಾರೆ.

ಈ ಸಿನೆಮಾಗೆ ಸುರೇಂದ್ರನಾಥ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ವಿ.ನಾಗೇಂದ್ರ ಪ್ರಸಾದ್, ಜಯಂತ್ ಕಾಯ್ಕಿಣಿ, ತಪಸ್ವಿ ಸಾಹಿತ್ಯ ನೀಡಿದ್ದಾರೆ. ಹೊಸಬರ ತಂಡ ಹೊಸತರನಾದ ಕತೆಯೊಂದಿಗೆ ಸಿನಿಮಾ ಮಾಡಲು ಮುಂದೆ ಬಂದಿದ್ದು, ಸಂದೀಪ್​ ಶಿವಮೊಗ್ಗ ಹಾಗೂ ಗುರುರಾಜ್​ ಎ ಅವರು ನಿರ್ಮಿಸುತ್ತಿರುವ ಈ ಸಿನಿಮಾ ಮುಹೂರ್ತ ಇದೇ ವಾರದಲ್ಲಿ ನಡೆಯಲಿದೆಯಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top