fbpx
ಸಮಾಚಾರ

ಇತಿಹಾಸದಲ್ಲೇ ಪ್ರಥಮ ಬಾರಿಗೆ ಟ್ವಿಟರ್ ಬ್ಲೂರೂಂಗೆ ಕನ್ನಡ ನಟರೊಬ್ಬರ ಪ್ರವೇಶ!

ಪ್ರತಿಷ್ಠಿತ ಟ್ವಿಟರ್ ಬ್ಲೂರೂಂಗೆ ಇದೆ ಮೊದಲ ಬಾರಿಗೆ ಕನ್ನಡ ನಟರೊಬ್ಬರ ಪ್ರವೇಶ ಆಗುತ್ತಿದೆ. ಹೌದು, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಬ್ಲೂರೂಂಗೆ ಆಗಮಿಸುತ್ತಿದ್ದು ಅಭಿಮಾನಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಲಿದ್ದಾರೆ. ಈ ಮೂಲಕ ಟ್ವಿಟರ್ ಬ್ಲೂರೂಂಗೆ ಎಂಟ್ರಿ ಕೊಟ್ಟ ಕನ್ನಡದ ಮೊದಲ ನಟ ಮತ್ತು ದಕ್ಷಿಣ ಭಾರತದ ಎರಡನೇ ನಟ ಎನಿಸಿಕೊಳ್ಳಲಿದ್ದಾರೆ. ಈ ಹಿಂದೆ ಸಾಹೂ ಚಿತ್ರದ ಪ್ರಚಾರಕ್ಕಾಗಿ ನಟ ಪ್ರಭಾಸ್ ಬ್ಲೂ ರೂಂ ಪ್ರವೇಶಿಸಿದ್ದರು.

 

 

 

 

 

ಇದೆ ವಾರ ಸುದೀಪ್ ಅವರ ಪೈಲ್ವಾನ್ ಚಿತ್ರ ಐದು ಭಾಷೆಗಳಲ್ಲಿ ತೆರೆಕಾಣುತ್ತಿದೆ. ಈ ಹಿನ್ನಲೆಯಲ್ಲಿ ’ಪೈಲ್ವಾನ್’ ಪಾತ್ರಗಳ ಬಗ್ಗೆ, ಕಥೆ ಬಗ್ಗೆ ಏನೆಲ್ಲಾ ವಿಶೇಷತೆಗಳಿವೆ ಎಂಬ ಕುತೂಹಲ ಸಹಜವಾದದ್ದು. ಇವೆಲ್ಲದರ ಬಗ್ಗೆ ಸ್ವತಃ ಸುದೀಪ್ ಅವರೇ ಉತ್ತರಿಸಲಿದ್ದಾರೆ. ಇಂದು ಸಂಜೆ ಸುದೀಪ್ ಅವ್ರು ಟ್ವಿಟರ್ ಇಂಡಿಯಾ ಅಧಿಕೃತ ಸಂದರ್ಶನದಲ್ಲಿ ಲೈವ್ ಬರಲಿದ್ದಾರೆ. ಅಭಿಮಾನಿಗಳ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.

 

 

ಪೈಲ್ವಾನ್ ಕೇವಲ ಕನ್ನಡದಲ್ಲಿ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗದಲ್ಲಿ ತುಂಬಾನೇ ಸೌಂಡ್ ಮಾಡುತ್ತಿದೆ. ಇದೇ ಸೆಪ್ಟೆಂಬರ್ 12ರಂದು ತೆರೆಯ ಮೇಲೆ ಪೈಲ್ವಾನ್ ಅಬ್ಬರಿಸಲು ಸಿದ್ಧಗೊಂಡಿದೆ. ಚಿತ್ರದ ಹಾಡುಗಳು, ಟ್ರೈಲರ್ ಅಭಿಮಾನಿಗಳನ್ನು ಮೋಡಿ ಮಾಡುವಲ್ಲಿ ಯಶಸ್ವಿಯಾಗಿವೆ. ಬಾಲಿವುಡ್ ನಟ, ಕುಡ್ಲದ ಸುನೀಲ್ ಶೆಟ್ಟಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಆಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top