fbpx
ಸಮಾಚಾರ

ನಟ ರಮೇಶ್ ಅರವಿಂದ್‌ಗೆ ಡಾ.ವಿಷ್ಣುವರ್ಧನ ರಾಷ್ಟ್ರೀಯ ಪ್ರಶಸ್ತಿ

ಈ ಬಾರಿಯ ಡಾ. ವಿಷ್ಣುವರ್ಧನ್‌ ರಾಷ್ಟ್ರ ಪ್ರಶಸ್ತಿಗೆ ನಟ ಹಾಗೂ ನಿರ್ದೇಶಕ ರಮೇಶ್‌ ಅರವಿಂದ್‌ ಆಯ್ಕೆಯಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಸಾಹಸ ಸಿಂಹ ವಿಷ್ಣುವರ್ಧನ್‌ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತ ಬಂದಿದ್ದು, 2019ನೇ ಸಾಲಿನ ಪ್ರಶಸ್ತಿಯನ್ನು ರಮೇಶ್‌ ಅರವಿಂದ್‌ ಅವರಿಗೆ ನೀಡಲು ಆಯ್ಕೆ ಸಮಿತಿ ನಿರ್ಧರಿಸಿದೆ.

 

 

ಡಾ.ವಿಷ್ಣುವರ್ಧನ 69ನೇ ಜನ್ಮದಿನದ ಪ್ರಯುಕ್ತ ಸೆಪ್ಟೆಂಬರ್ 18 ರಿಂದ 20 ರ ತನಕ ಮೂರು ದಿನಗಳ ಕಾಲ ನಡೆಯಲಿರುವ ಡಾ.ವಿಷ್ಣುವರ್ಧನ ನಾಟಕೋತ್ಸವದ ಉದ್ಘಾಟನಾ ದಿನವಾದ ಸೆಪ್ಟೆಂಬರ್ 18 ರಂದು ಸಂಜೆ 4.30ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭ ನೆರವೇರಲಿದೆ.

ಸದರಿ ಪ್ರಶಸ್ತಿಯು ಅಭಿನಂದನಾ ಪತ್ರ, ಪ್ರಶಸ್ತಿ ಫಲಕ, ಫಲ- ಪುಷ್ಪಗಳ ಸಹಿತ 25 ಸಾವಿರ ರು. ನಗದನ್ನು ಒಳಗೊಂಡಿದೆ ಎಂದು ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ ತಿಳಿಸಿದ್ದಾರೆ.

ಈ ಹಿಂದೆ 2017ನೇ ಇಸವಿಯಲ್ಲಿ ಮೊದಲಿಗೆ ಈ ಪ್ರಶಸ್ತಿಯನ್ನು ಹಿರಿಯ ಕಲಾವಿದರಾದ ಎಸ್.ಶಿವರಾಮ್‌ಗೆ ಮತ್ತು 2018 ನೇ ಇಸವಿಯಲ್ಲಿ ಬಹು ಭಾಷಾ ನಟಿ ವಿನಯಾಪ್ರಕಾಶ್‌ಗೆ ಪ್ರಶಸ್ತಿಯನ್ನು ನೀಡಲಾಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top