fbpx
ಸಮಾಚಾರ

ಡಿಕೆ ಶಿವಕುಮಾರ್ ಮಾಡಿರುವ ಮೋಸವನ್ನ ಎಳೆ ಎಳೆಯಾಗಿ ಬಿಚ್ಚಿಟ್ಟ ರವಿ ಬೆಳಗೆರೆ!

ದೆಹಲಿ ನಿವಾಸದಲ್ಲಿ ಅಕ್ರಮ ಹಣ ದೊರೆತ ಪ್ರಕರಣ ಸಂಬಂಧ ವಿಚಾರಣೆ ನಡೆಸಲು ಸೆ. 13ರ ವರೆಗೆ ಡಿಕೆ ಶಿವಕುಮಾರ್​ ಅವರನ್ನು ಕೋರ್ಟ್​ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿದೆ. ದೆಹಲಿ ನಿವಾಸದಲ್ಲಿ 8.5 ಕೋಟಿ ರೂಪಾಯಿ ದೊರೆತ ಪ್ರಕರಣ ಸಂಬಂಧ ಡಿಕೆಶಿ ಅವರನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಈ ನಡುವೆ ಡಿಕೆಶಿ ಬಂಧನ ರಾಜಕೀಯ ಪ್ರೇರಿತ, ದ್ವೇಷದ ರಾಜಕಾರಣ ಎಂದು ಕೆಲವರು ದೂರುತ್ತಿದ್ದರೇ ಇನ್ನೂ ಕೆಲವರು ಇದೆಲ್ಲವನ್ನು ಅಲ್ಲಗೆಳೆಯುತ್ತಿದ್ದಾರೆ. ಇದೀಗ ಡಿಕೆಶಿ ಬಂಧನದ ಬಗ್ಗೆ ಹಿರಿಯ ಪತ್ರಕರ್ತ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್ಲಿ ಮಾತನಾಡದಿರುವ ಮಾತನಾಡಿರುವ ರವಿ ಬೆಳಗೆರೆ ವಿಸ್ತೃತ ಮಾಹಿತಿ ನೀಡಿದ್ದಾರೆ.

👇👇👇:ವಿಡಿಯೋ ನೋಡಿ:👇👇👇

 

 

“ಅಂದು ಮಾಡಿದ ಪಾಪಕ್ಕೆ ಡಿಕೆಶಿ ಇಂದು ಶಿಕ್ಷೆ ಮಾಡುತ್ತಿದ್ದಾರೆ. ಡಿಕೆ ಶಿವಕುಮಾರ್ ಅವರಿಗೆ ಅಷ್ಟೊಂದು ಹಣ ಎಲ್ಲಿಂದಾ ಬಂತು? ಅವರು ಅಕ್ರಮವಾಗಿ ಆಸ್ತಿ ಗಳಿಸಿದ್ದಾರೆ. ಡಿಕೆಶಿ ಮನೆಯಲ್ಲಿ ಕೋಟ್ಯಂತರ ರೂ ನಗದು ಸಿಗುತ್ತೆ ಅಂದ್ರೆ ಸಾಮಾನ್ಯ ಜನರ ಮನೆಯಲ್ಲಿ ಏಕೆ ಸಿಗುವುದಿಲ್ಲ? ದೇಶದಲ್ಲಿ ಕಾನೂನಿಗಿಂತ ದೊಡ್ಡವರು ಯಾರು ಇಲ್ಲ ಎಲ್ಲರೂ ಕಾನೂನಿನ ಮುಂದೆ ತಲೆ ಬಾಗಲೇಬೇಕು.

“ನಾನು ಯಾರ ಬಳಿಯೂ ಒಂದು ರೂ ಹಣ ತಿಂದಿಲ್ಲ, ಕಾನೂನಿನ ಚೌಕಟ್ಟಿನ ಒಳಗೆ ಸಂಪಾದಿಸಿದ್ದೇನೆ” ಎಂದು ಡಿಕೆಶಿ ಹೇಳುತ್ತಾರೆ. ಹಾಗಿದ್ದರೆ ನೀವು ಏಕೆ ವಿಚಾರಣೆಯನ್ನು ಎದುರಿಸಲು ಹಿಂದೇಟು ಹಾಕುತ್ತೀರಿ.. ನಿಮ್ಮ ಆಸ್ತಿಯನ್ನು ನೀವೇನಾದರೂ ನ್ಯಾಯವಾಗಿ ಸಂಪಾದಿಸಿದ್ದೇ ಆಗಿದ್ದರೇ ವಿಚಾರಣೆ ಎದುರಿಸಿ ಗೆದ್ದು ಬನ್ನಿ.  ನೀವು ಸಂಪಾದಿಸಿದ್ದೇ ಆದರೆ ನೀವು ಟ್ಯಾಕ್ಸ್ ಕಟ್ಟಬೇಕು, ಟ್ಯಾಕ್ಸ್ ಅನ್ನು ಯಾಕೆ ಉಳಿಸಿಕೊಳ್ಳುತ್ತೀರಿ.  ನಿಮ್ಮ ಬಳಿ ಎಲ್ಲೆಲ್ಲಿ ಎಷ್ಟೆಷ್ಟು ಫ್ಲಾಟ್ ಗಳಿವೆ, ಎಷ್ಟು ಆಸ್ತಿ ಇದೆ ಎಂಬುದು ಎಲ್ಲರಿಗೂ ಗೊತ್ತು. ಅವೆಲ್ಲವೂ ನೀವು ನಿಯತ್ತಾಗಿ ಸಂಪಾದಿಸಿದ್ದಾ?” ಎಂಬಿತ್ಯಾದಿ ಪ್ರಶ್ನೆಗಳನ್ನು ರವಿ ಬೆಳಗೆರೆ ಹಾಕಿದ್ದಾರೆ.

ಮೋದಿ ಮಾಡಿದ್ದು ಸರಿ:
ಇನ್ನು ಇದೆ ವಿಚಾರವಾಗಿ ಪ್ರಧಾನಿ ಮೋದಿಯನ್ನು ಶ್ಲಾಘನೆ ಮಾಡಿರುವ ರವಿ ಬೆಳಗೆರೆ “ಡಿಕೆ ಶಿವಕುಮಾರ್ , ಚಿದಂಬರಂ ರಂತಹ ಭ್ರಷ್ಟ ರಾಜಕಾರಣಿಗಳನ್ನ ಕೇಂದ್ರ ಸರ್ಕಾರ ಬಂದಿರುವುದು ಸರಿ. ಇಂಥವರಿಗೆಲ್ಲಾ ಸರಿಯಾಗಿ ಬುದ್ದಿ ಕಲಿಸಬೇಕು… ದೇಶವನ್ನು ಲೂಟಿ ಮಾಡಿದ ಎಲ್ಲಾ ರಾಜಕಾರಣಿಗಳಿಗೂ ಇದೆ ರೀತಿಯ ಶಿಕ್ಷೆಗಳನ್ನು ನೀಡಬೇಕು ಎಂದು ರವಿ ಬೆಳಗೆರೆ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top