fbpx
ಸಮಾಚಾರ

ಒಕ್ಕಲಿಗ ಹೆಣ್ಣು ಮಕ್ಕಳಿಗೆ ಅವಮಾನ ಆಗಿದೆ ಎಂದ ಭಾಮಾ ಹರೀಶ್ ಗೆ ನವೀನ್ ಸಜ್ಜು ಹೇಳಿದ್ದೇನು ಗೊತ್ತಾ?

ನವೀನ್ ಸಜ್ಜು ಹಾಡಿರುವ ‘ಬಡ್ಡಿ ಮಗನ್ ಲೈಫು’ ಸಿನೆಮಾದ ‘ಏನ್ ಚಂದನ ತಕಾ’ ಹಾಡು ಇತ್ತೀಚೆಗೆ ಬಿಡುಗಡೆಯಾಗಿತ್ತು. ಜೊತೆಗೆ 20 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿತ್ತು. ಹಳ್ಳಿ ಸೊಗಡಿನ ದಾಟಿಯಲ್ಲಿ ಮೂಡಿ ಬಂದಿರುವ ಈ ಹಾಡು ಸದ್ಯ ನೆಟ್ಟಿಗರ ಮನ ಗೆಲ್ಲುತ್ತಿದೆ. ಈ ನಡುವೆ ಈ ಹಾಡಿನ ಸುತ್ತ ವಿವಾದದ ಹುತ್ತ ಬೆಳುದುಕೊಂಡಿದೆ. ನಿರ್ಮಾಪಕ ಬಾಮಾ ಹರೀಶ್ ಅವರು, ನವೀನ್ ಸಜ್ಜು ಹಾಡಿರುವ ವಿರುದ್ಧ ಗಂಭೀರವಾದ ಆರೋಪವನ್ನು ಮಾಡಿದ್ದಾರೆ. ಜೊತೆಗೆ ನವೀನ್ ಸಜ್ಜು ಕ್ಷಮೆ ಕೇಳಬೇಕು ಎಂದು ಟ್ವೀಟ್ ಮಾಡುವ ಮೂಲಕ ಒತ್ತಾಯಿಸಿದ್ದಾರೆ.

 

 

‘ಈ ಹಾಡಿನ ಮೂಲಕ ಒಕ್ಕಲಿಗರ ಮನೆಯ ಹೆಣ್ಣುಮಕ್ಕಳ ತೇಜೋವಧೆ ಮಾಡಲಾಗಿದೆ. ಹಾಡಿನಿಂದ ಇಡೀ ಒಕ್ಕಲಿಗ ಸಮುದಾಯಕ್ಕೆ ಅಪಮಾನವಾಗಿದೆ. ಈ ಕೂಡಲೇ ಹಾಡನ್ನು ಸ್ಥಗಿತಗೊಳಿಸಿ, ಒಕ್ಕಲಿಗ ಸಮುದಾಯದ ಕ್ಷಮೆ ಕೋರಬೇಕು. ಕಲಾ ಜಗತ್ತಿನಲ್ಲಿ ಯಾವುದೇ ಧರ್ಮ, ಜಾತಿಗಳ ತೇಜೋವಧೆ ಆಗಬಾರದು. ಇಲ್ಲಿ ಕಲೆ ಮುಖ್ಯ’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಗೌರವ ಕಾರ್ಯದರ್ಶಿ ಭಾ.ಮ. ಹರೀಶ್‌ ಟ್ವೀಟ್‌ ಮಾಡಿದ್ದಾರೆ.

 


 

 

ಈ ಬಗ್ಗೆ ಪ್ರತಿಕ್ರಯೆ ನೀಡಿರುವ ನವೀನ್ ಸಜ್ಜು ” ನಾನೊಬ್ಬ ಗಾಯಕ, ಒಬ್ಬರು ಹಾಡಿದ್ದಾರೆ, ಇನ್ನೊಬ್ಬರು ಸಾಹಿತ್ಯ ಬರೆದಿದ್ದಾರೆ, ಮತ್ತೊಬ್ಬರು ಸಂಗೀತ ನಿರ್ದೇಶನ ಮಾಡಿದ್ದಾರೆ. ಹೆಣ್ಣು ಮಕ್ಕಳ ತೇಜೋವಧೆಯಾಗಿಲ್ಲ. ಇವರು ತಿಳಿದುಕೊಂಡಿರುವುದು ತಪ್ಪು. ಗೌಡ್ರು ಅಂದ್ರೆ ಕೇವಲ ಒಕ್ಕಲಿಗರಲ್ಲ. ಮೈಸೂರು ಭಾಗದಲ್ಲಿ ಕುರುಬ, ನಾಯ್ಕ್, ಲಿಂಗಾಯತ ಸೇರಿದಂತೆ ಇತರೆ ಸಮುದಾಯಗಳಲ್ಲೂ ಗೌಡ್ರು ಇರುತ್ತಾರೆ. ಗೌಡ ಅಂದರೆ ಮುಖ್ಯಸ್ಥ, ಯಜಮಾನ ಅಂತ ಅರ್ಥ.”

“ಸಿನೆಮಾದಲ್ಲಿ ಊರಿನ ಮುಖ್ಯಸ್ಥ, ಅಂದರೆ ಗೌಡನ ಮಗಳು ಬೇರೆಯೊಬ್ಬರ ಜೊತೆ ಓಡಿ ಹೋಗುತ್ತಾಳೆ. ಅವಳು ಓಡಿ ಹೋದ ಬಗ್ಗೆ ಊರಿನವರು ಮಾತಾಡಿಕೊಳ್ಳುವ ದೃಶ್ಯವಿದೆ. ಆ ಸಂದರ್ಭದಲ್ಲಿ ಈ ಹಾಡು ಬರುತ್ತದೆ. ಈ ಹಾಡನ್ನು ಎಲ್ಲರೂ ಇಷ್ಟಪಟ್ಟಿದ್ದಾರೆ, ವೈರಲ್ ಆಗಿದೆ. ಜನಗಳು ಬೈಯ್ತಾರೆ ಅಂದ್ರೆ ಅದು ನಮಗೆ ಬೇಕಿರಲಿಲ್ಲ. ಯಾರಿಗೂ ಅವಮಾನ ಮಾಡುವ ಉದ್ದೇಶ ನಮಗಿಲ್ಲ” ಅಂಥ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top