fbpx
ಸಮಾಚಾರ

ಕೊಹ್ಲಿ, ಧೋನಿಯಷ್ಟು ಶ್ರೀಮಂತನಲ್ಲದಿದ್ದರೂ ತನ್ನ ಸಂಭಾವನೆಯನ್ನು ಮೈದಾನದ ಸಿಬ್ಬಂದಿಗಳಿಗೆ ದಾನ ಮಾಡಿದ ಟೀಂ ಇಂಡಿಯಾ ಕ್ರಿಕೆಟಿಗ!

ಜಗತ್ತಿನ ಶ್ರೀಮಂತ ಕ್ರಿಕೆಟಿಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಶ್ರೀಮಂತ ಕ್ರಿಕೆಟಿಗ ಎಂಎಸ್ ಧೋನಿ ಕೋಟಿ ಕೋಟಿ ಹಣ ಸಂಪಾದಿಸುತ್ತಾರೆ. ಆದರೆ ಇಲ್ಲೊಬ್ಬ ಆಟಗಾರ ತನಗೆ ನೀಡುವ ಪಂದ್ಯದ ಸಂಭಾವನೆಯನ್ನೇ ಮೈದಾನದ ಸಿಬ್ಬಂದಿಗಳಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.

ಕೇರಳದ ಕ್ರಿಕೆಟಿಗ ಸಂಜು ಸ್ಯಾಮ್ಸನ್‌ ಅವರು ಶುಕ್ರವಾರ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ಎ ವಿರುದ್ಧದ ಏಕದಿನ ಸರಣಿ ಆಡಿರುವುದಕ್ಕೆ ಪಡೆದ ಸಂಭಾವನೆಯನ್ನು ಮೈದಾನ ಸಿಬ್ಬಂದಿಗಳಿಗೆ ದಾನ ಮಾಡಿದ್ದಾರೆ. ಗ್ರೀನ್ ಫೀಲ್ಡ್ ಮೈದಾನದ ಸಿಬ್ಬಂದಿಗಳಿಗೆ ತನಗೆ ಸಿಕ್ಕ 1.5 ಲಕ್ಷ ರುಪಾಯಿಯನ್ನು ನೀಡಿದ್ದಾರೆ.

ಐದು ಪಂದ್ಯಗಳ ಸರಣಿಯಲ್ಲಿ ಬಹುತೇಕ ಪಂದ್ಯಗಳಿಗೆ ಮಳೆ ಅಡಚಣೆ ಮಾಡಿದ್ದ ಕಾರಣ ಓವರ್‌ಗಳನ್ನು ಕಡಿಮೆ ಮಾಡಲಾಗಿತ್ತು. ಈ ನಡುವೆಯೂ ಮೈದಾನವನ್ನು ತೇವಮುಕ್ತ ಮಾಡಿ ಪಂದ್ಯ ನಡೆಸಲು ಅನುಕೂಲ ಮಾಡಿಕೊಟ್ಟ ಮೈದಾನ ಸಿಬ್ಬಂದಿಗಳ ಶ್ರಮಕ್ಕೆ ಮೆಚ್ಚಿದ ಸ್ಯಾಮ್ಸನ್‌ ಸಂಭಾವನೆಯನ್ನು ಅವರಿಗೆ ಕೊಟ್ಟಿದ್ದಾರೆ. ಸಂಜು ಅವರ ಉದಾರ ಮನಸ್ಸಿಗೆ ಹಲವರು ಶ್ಲಾಘಿಸಿದ್ದಾರೆ.

ಅಂದಹಾಗೆ ದಕ್ಷಿಣ ಆಫ್ರಿಕಾ ಎ ಮತ್ತು ಭಾರತ ಎ ತಂಡಗಳು ನಡುವೆ ಐದು ಪಂದ್ಯಗಳ ಅನಧಿಕೃತ ಏಕದಿನ ಸರಣಿ ನಡೆದಿದ್ದು ಭಾರತ 4-1 ಅಂತರದಿಂದ ಸರಣಿ ಕೈವಶ ಮಾಡಿಕೊಂಡಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top