fbpx
ಸಮಾಚಾರ

ಕೇಂದ್ರದಿಂದ ನೆರೆ ಪರಿಹಾರ ತರುವ ಬದಲು ಟಿವಿ ಕಾರ್ಯಕ್ರಮದಲ್ಲಿ ಕೂತ ಯುವ ಸಂಸದರಿಗೆ ನೆಟ್ಟಿಗರಿಂದ ತರಾಟೆ..

ಕನ್ನಡದ ಕೋಟ್ಯಧಿಪತಿ ಕನ್ನಡ ಕಿರುತೆರೆ ಲೋಕದ ಖ್ಯಾತ ರಿಯಾಲಿಟಿ ಶೋ ಕೋಟ್ಯಧಿಪತಿಯಲ್ಲಿ ಬಿಜೆಪಿಯ ಯಂಗ್ ಲೀಡರ್ಸ್ ಇಬ್ಬರು ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಮೈಸೂರಿನ ಸಂಸದ ಪ್ರತಾಪ್ ಸಿಂಹ ಮತ್ತು ಬೆಂಗಳೂರಿನ ಎಂಪಿ ತೇಜಸ್ವಿ ಸೂರ್ಯ ಭಾಗಿಯಾಗಿದ್ದಾರೆ. ಈ ವಾರ ಅಂದ್ರೆ ಶನಿವಾರ ಮತ್ತು ಬಾನುವಾರ ಪ್ರಸಾರವಾಗುವ ಕೋಟ್ಯಧಿಪತಿ ಕಾರ್ಯಕ್ರಮದ ಹಾಟ್ ಸೀಟಿನಲ್ಲಿ ಈ ಇಬ್ಬರು ಯಂಗ್ ಲೀಡರ್ಸ್ ಕುಳಿತುಕೊಂಡಿದ್ದಾರೆ.

 

 

ಈ ಇಬ್ಬರು ಸಂಸದರು ನೆರೆ ಸಂತ್ರಸ್ಥರಿಗೆ ನೆರವಾಗುವ ಉದ್ದೇಶದಿಂದ ಸ್ಪರ್ಧೆ ಮಾಡುತ್ತಿದ್ದು, ಇವರು ಗೆದ್ದ ಹಣ ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಂದಾಯವಾಗುತ್ತದೆ. ಮೊದಲ ಬಾರಿಗೆ ಕಿರುತೆರೆಯಲ್ಲಿ ಇಬ್ಬರು ರಾಜಕಾರಣಿಗಳು ಕಾಣಿಸಿಕೊಳ್ಳುತ್ತಿರುವು ವಿಶೇಷ. ಜೊತೆಗೆ ತೇಜಸ್ವಿ ಮತ್ತು ಪ್ರತಾಪ್ ಸಿಂಹ ತಮ್ಮ ಕೆಲಸಗಳ ಬಗ್ಗೆ ಒಂದಿಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ನೆರೆ ಪರಿಹಾರ ನೀಡಲು ಕೋಟ್ಯಧಿಪತಿ ಆಡಿರುವ ಯುವ ಸಂಸದರ ನಡೆಗೆ ಕೆಲವು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೇ ಇನ್ನೂ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಏಕೆಂದರೆ ಕಾರ್ಯಕ್ರಮದಲ್ಲಿ ಗೆಲ್ಲುವ ದುಡ್ಡಿನಲ್ಲಿ ಸಂತ್ರಸ್ತರಿಗೆ ಹೇಳಿಕೊಳ್ಳುವಂತ ಸಹಾಯವನ್ನು ಮಾಡಲು ಆಗುವುದಿಲ್ಲ,. ಬದಲಾಗಿ ಕೇಂದ್ರದಲ್ಲಿ ತಮ್ಮದೇ ಪಕ್ಷದ ಅಧಿಕಾರದಲ್ಲಿ ಇರುವುದರಿಂದ ಕೇಂದ್ರದ ಬಳಿ ಮನವಿ ಮಾಡಿಕೊಂಡು ಕೋಟ್ಯಂತರ ರೂ ಪರಿಹಾರ ತರಬಹುದು, ಹಾಗೆ ಪರಿಹಾರ ತಂದರೆ ಸಂತ್ರಸ್ತರ ಕಣ್ಣೀರಿನಾದರೂ ಒರೆಸಬಹುದು. ಅದು ಬಿಟ್ಟು ಟಿವಿ ಚಾನೆಲ್ ನಲ್ಲಿ ಆಡಿ ಟೈಮ್ ಪಾಸ್ ಮಾಡುತ್ತಿದ್ದಾರೆ ಎಂಬುದು ನೆಟ್ಟಿಗರ ವಾದವಾಗಿದೆ.

“ನೆರೆಯಲ್ಲಿ ಕೊಚ್ಚಿಹೋಗಿರೋದು ಅಂದಾಜು 35,000 ಕೋಟಿಯಷ್ಟು. ಕೇಂದ್ರ ಸರಕಾರದ ಬಳಿ ಲಾಬಿ ಮಾಡಿ 5/6 ಸಾವಿರ ಕೋಟಿ ತುರ್ತು ಪರಿಹಾರ ತರೋದ್ ಬಿಟ್ಟು ಇಲ್ಲಿ ಆಟ ಆಡ್ತಾರಂತೆ. ಜನಗಳ ಕಷ್ಟಕ್ಕೆ ಸ್ಪಂದಿಸಿ ದೆಲ್ಲಿಯಲ್ಲಿ ಮೋದಿ ಜೊತೆ ಮಾತಾಡಿ ಕನ್ನಡಿಗರ ಕಷ್ಟಕ್ಕೆ ಸ್ಪಂದಿಸೋದು ಬಿಟ್ಟು ಜನಗಳಿಗೆ ಆಟ ಆಡಿ ಮನೋರಂಜನೆ ಕೊಡೋಕೆ ಬರ್ತಿದ್ದಾರೆ, ಜನಕ್ಕೆ ಬೇಕಿರೋದು ಸ್ಪಂದನೆ ಮನೋರಂಜನೆ ಅಲ್ಲ. ಇವರು ಗೆಲ್ಲೋ ದುಡ್ಡಲ್ಲಿ ಸಂತ್ರಸ್ತರಿಗೆ ಒಂದು ಮನೆ ಸಹ ಕಟ್ಟಿಕೊಡಲು ಸಾಧ್ಯವಿಲ್ಲ” ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top