fbpx
ಸಮಾಚಾರ

ಸಂತ್ರಸ್ತರ ನೆರವಿಗಾಗಿ ಕೋಟ್ಯಾಧಿಪತಿಯಲ್ಲಿ ಪ್ರತಾಪ್ ಸಿಂಹ ಮತ್ತು ತೇಜಸ್ವಿ ಸೂರ್ಯ ಗೆದ್ದ ಹಣವೆಷ್ಟು ಗೊತ್ತಾ?

ಕನ್ನಡದ ಕೋಟ್ಯಧಿಪತಿ ಕನ್ನಡ ಕಿರುತೆರೆ ಲೋಕದ ಖ್ಯಾತ ರಿಯಾಲಿಟಿ ಶೋ ಕೋಟ್ಯಧಿಪತಿಯಲ್ಲಿ ಬಿಜೆಪಿಯ ಯಂಗ್ ಲೀಡರ್ಸ್ ಇಬ್ಬರು ಕಾಣಿಸಿಕೊಂಡಿದ್ದರು. ಮೈಸೂರಿನ ಸಂಸದ ಪ್ರತಾಪ್ ಸಿಂಹ ಮತ್ತು ಬೆಂಗಳೂರಿನ ಎಂಪಿ ತೇಜಸ್ವಿ ಸೂರ್ಯ ಭಾಗಿಯಾಗಿದ್ದರು. ಈ ಶನಿವಾರ ಮತ್ತು ಬಾನುವಾರ ಪ್ರಸಾರವಾದ ಕೋಟ್ಯಧಿಪತಿ ಕಾರ್ಯಕ್ರಮದ ಹಾಟ್ ಸೀಟಿನಲ್ಲಿ ಈ ಇಬ್ಬರು ಯಂಗ್ ಲೀಡರ್ಸ್ ಕುಳಿತುಕೊಂಡು ಪ್ರಶ್ನೆಗಳಿಗೆ ಉತ್ತರಿಸಿದರು.

ನೆರೆ ಸಂತ್ರಸ್ಥರಿಗೆ ನೆರವಾಗುವ ಉದ್ದೇಶದಿಂದ ಬಂದಿದ್ದ ಇಬ್ಬರು ಸಂಸದರು ಮನರಂಜನೆ ಕಾರ್ಯಕ್ರಮದಲ್ಲಿ ಕುಳಿತು ಗೆದ್ದಿದ್ದು 12 ಲಕ್ಷ ರೂ. ಅಷ್ಟಕ್ಕು ಇಬ್ಬರು ಗೆದ್ದಿರುವ 12,50,00 ಹಣದಿಂದ ಏನು ಮಾಡಲು ಸಾಧ್ಯವಾಗುತ್ತೆ. ಈ ಹಣ ದಿಂದ ಎಷ್ಟು ಜನರ ಬದುಕು ರೂಪಿಸಲು ಸಾಧ್ಯವಾಗುತ್ತೆ. ಇಷ್ಟೆಲ್ಲ ಪ್ರಚಾರ ಗಿಟ್ಟಿಸಿಕೊಂಡು ಬಂದಿರುವ 12.5ಲಕ್ಷ ನೆರೆಪರಿಹಾರಕ್ಕೆ ಸಾಕಾಗುತ್ತಾ ಎನ್ನುವ ಪ್ರಶ್ನೆಗಳನ್ನು ಮಾಡುತ್ತಿದ್ದಾರೆ ವೀಕ್ಷಕರು

ನೆರೆ ಪರಿಹಾರ ನೀಡಲು ಕೋಟ್ಯಧಿಪತಿ ಆಡಿರುವ ಯುವ ಸಂಸದರ ನಡೆಗೆ ಕೆಲವು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೇ ಇನ್ನೂ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಏಕೆಂದರೆ ಕಾರ್ಯಕ್ರಮದಲ್ಲಿ ಗೆಲ್ಲುವ ದುಡ್ಡಿನಲ್ಲಿ ಸಂತ್ರಸ್ತರಿಗೆ ಹೇಳಿಕೊಳ್ಳುವಂತ ಸಹಾಯವನ್ನು ಮಾಡಲು ಆಗುವುದಿಲ್ಲ,. ಬದಲಾಗಿ ಕೇಂದ್ರದಲ್ಲಿ ತಮ್ಮದೇ ಪಕ್ಷದ ಅಧಿಕಾರದಲ್ಲಿ ಇರುವುದರಿಂದ ಕೇಂದ್ರದ ಬಳಿ ಮನವಿ ಮಾಡಿಕೊಂಡು ಕೋಟ್ಯಂತರ ರೂ ಪರಿಹಾರ ತರಬಹುದು, ಹಾಗೆ ಪರಿಹಾರ ತಂದರೆ ಸಂತ್ರಸ್ತರ ಕಣ್ಣೀರಿನಾದರೂ ಒರೆಸಬಹುದು. ಅದು ಬಿಟ್ಟು ಟಿವಿ ಚಾನೆಲ್ ನಲ್ಲಿ ಆಡಿ ಟೈಮ್ ಪಾಸ್ ಮಾಡುತ್ತಿದ್ದಾರೆ ಎಂಬುದು ನೆಟ್ಟಿಗರ ವಾದವಾಗಿದೆ.

“ನೆರೆಯಲ್ಲಿ ಕೊಚ್ಚಿಹೋಗಿರೋದು ಅಂದಾಜು 35,000 ಕೋಟಿಯಷ್ಟು. ಕೇಂದ್ರ ಸರಕಾರದ ಬಳಿ ಲಾಬಿ ಮಾಡಿ 5/6 ಸಾವಿರ ಕೋಟಿ ತುರ್ತು ಪರಿಹಾರ ತರೋದ್ ಬಿಟ್ಟು ಇಲ್ಲಿ ಆಟ ಆಡ್ತಾರಂತೆ. ಜನಗಳ ಕಷ್ಟಕ್ಕೆ ಸ್ಪಂದಿಸಿ ದೆಲ್ಲಿಯಲ್ಲಿ ಮೋದಿ ಜೊತೆ ಮಾತಾಡಿ ಕನ್ನಡಿಗರ ಕಷ್ಟಕ್ಕೆ ಸ್ಪಂದಿಸೋದು ಬಿಟ್ಟು ಜನಗಳಿಗೆ ಆಟ ಆಡಿ ಮನೋರಂಜನೆ ಕೊಡೋಕೆ ಬರ್ತಿದ್ದಾರೆ, ಜನಕ್ಕೆ ಬೇಕಿರೋದು ಸ್ಪಂದನೆ ಮನೋರಂಜನೆ ಅಲ್ಲ. ಇವರು ಗೆಲ್ಲೋ ದುಡ್ಡಲ್ಲಿ ಸಂತ್ರಸ್ತರಿಗೆ ಒಂದು ಮನೆ ಸಹ ಕಟ್ಟಿಕೊಡಲು ಸಾಧ್ಯವಿಲ್ಲ” ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top