fbpx
ಸಮಾಚಾರ

“ಆರ್ಥಿಕತೆ ಬಗ್ಗೆ ಮನಮೋಹನ್ ಸಿಂಗ್ ಹೇಳುವುದನ್ನು ಕೇಳಿ” ಪ್ರಧಾನಿ ಮೋದಿಗೆ ಶಿವಸೇನೆ ಸಲಹೆ.

ದೇಶದಲ್ಲಿ ವಿಪರೀತ ಆರ್ಥಿಕ ಹಿಂಜರಿತವಿದ್ದು ಸರ್ಕಾರ ಸರಿಯಾಗಿ ನಿಭಾಯಿಸುತ್ತಿಲ್ಲ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಮಾಜಿ ಪ್ರಧಾನಿಗಳು ವ್ಯಕ್ತಪಡಿಸಿದ ಆರಂಕವನ್ನು ಕೇಂದ್ರ ಸರ್ಕಾರ ತಳ್ಳಿಹಾಕಿತ್ತು. ಇದೀಗ ಬಿಜೆಪಿಯ ಮಿತ್ರಪಕ್ಷವಾದ ಶಿವಸೇನೆಯು ತನ್ನ “ಸಾಮ್ನಾ” ಪತ್ರಿಕೆಯ ಸಂಪಾದಕೀಯದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ ಬಿಜೆಪಿಗೆ ಚಾಟಿ ಬೀಸಿದೆ. ರಾಜಕೀಯ ಮಾಡುವುದನ್ನು ಬಿಟ್ಟು ಮನಮೋಹನ್ ಸಿಂಗ್ ಅವರ ಮಾತುಗಳಿಗೆ ಕಿವಿಗೊಡಿ ಎಂದು ಬಿಜೆಪಿಯ ಕಿವಿಹಿಂಡಿದೆ.

ಮನಮೋಹನ್ ಸಿಂಗ್ ಅವರು ದೇಶದ ಖ್ಯಾತ ಅರ್ಥಶಾಸ್ತ್ರಜ್ಞರು, ಅವರು ಹೇಳುವ ಮಾತುಗಳಲ್ಲಿ ಅರ್ಥವಿರುತ್ತದೆ, ಅವರ ಮಾತುಗಳನ್ನು ಅಲಕ್ಷ್ಯ ಮಾಡಿ ಕ್ಷುಲ್ಲಕ ರಾಜಕಾರಣದಲ್ಲಿ ತೊಡಗಬೇಡಿ ಎಂದು ತನ್ನ ಮುಖವಾಣಿ ಸಾಮ್ನಾದಲ್ಲಿ ಬರೆದುಕೊಂಡಿದೆ.

ಶಿವಸೇನೆ ತನ್ನ ಮುಖವಾಣಿಯಲ್ಲಿ, ”ಸದ್ಯ ದೇಶದ ಆರ್ಥಿಕ ಸ್ಥಿತಿ ಮಂದಗತಿಯಲ್ಲಿದೆ. ಕಾಶ್ಮೀರ ವಿವಾದ ಮತ್ತು ಆರ್ಥಿಕ ಕುಸಿತ ಎರಡು ಭಿನ್ನ ವಿಷಯ. ಮನಮೋಹನ್ ಸಿಂಗ್ ನಂತಹ ತಿಳುವಳಿಕೆಯುಳ್ಳ ವ್ಯಕ್ತಿಗಳು ಆರ್ಥಿಕ ಕುಸಿತ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ಆರ್ಥಿಕತೆಯನ್ನು ಮತ್ತೆ ಮೇಲಕ್ಕೆ ತರಲು ಅವರಂತಹ ತಜ್ಞರ ಅಭಿಪ್ರಾಯಗಳನ್ನು ಕೇಳಿ ಆ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಬೇಕು. ಮನಮೋಹನ್ ಸಿಂಗ್ ಅವರ ಸಲಹೆಗಳನ್ನು ಕೇಳುವುದರಲ್ಲಿ ದೇಶದ ಹಿತಾಸಕ್ತಿ ಅಡಗಿದೆ ಎಂದು ಹೇಳಿದೆ.

ಭಾರತದ ಹಣಕಾಸು ಮತ್ತು ಆರ್ಥಿಕತೆಯಲ್ಲಿ 35 ವರ್ಷಗಳಿಗೂ ಹೆಚ್ಚು ಕಾಲ ಮನಮೋಹನ್ ಸಿಂಗ್ ಅವರು ತೊಡಗಿದ್ದರಿಂದ ಅವರಿಗೆ ಈ ವಿಷಯದಲ್ಲಿ ಮಾತನಾಡುವ ಹಕ್ಕು ಇದೆ ಎಂದು ಕೂಡ ಶಿವಸೇನೆ ಹೇಳಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top