fbpx
ಸಮಾಚಾರ

ಚಂದ್ರಯಾನ-2 ವೈಫಲ್ಯದ ಹಿಂದೆ ರಷ್ಯಾ ಕೈವಾಡ?

ಚಂದ್ರಯಾನ-2 ಯೋಜನೆ ವೈಫಲ್ಯದ ಹಿಂದೆ ರಷ್ಯಾ ಇದೆಯೇ? ಇಂಥದ್ದೊಂದು ಅನುಮಾವನ್ನು ಈಗ ಮಾಜಿ ಸಚಿವ ಯು.ಟಿ.ಖಾದರ್‌ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಚಂದ್ರಯಾನ ಕುರಿತು ಮಾತನಾಡಿದ ಅವರು, ಬಹುನಿರೀಕ್ಷಿತ ಚಂದ್ರಯಾನ- 2 ಕೊನೇ ಕ್ಷಣದಲ್ಲಿವಿಫಲವಾಗಿದ್ದರೂ ನಾವು ಹೊಸ ಮೈಲಿಗಲ್ಲುಸಾಧಿಸಿದ್ದೇವೆ. ಇದನ್ನು ವಿಜ್ಞಾನಿಗಳ ವೈಫಲ್ಯ ಎನ್ನದೆ, ಅವರ ಜತೆ ನಾವಿದ್ದೇವೆ ಎಂದು ಅವರಲ್ಲಿಆತ್ಮವಿಶ್ವಾಸ ತುಂಬುವ ಕೆಲಸ ಆಗಬೇಕಿದೆ ಎಂದು ಶಾಸಕ ಯು.ಟಿ.ಖಾದರ್‌ ಹೇಳಿದರು.

2007ರಲ್ಲಿಕೇಂದ್ರ ಸರಕಾರ ಈ ಯೋಜನೆಗೆ ಅನುಮೋದನೆ ಪಡೆದಿತ್ತು. ಆ ಸಮಯದಲ್ಲಿಯೇ ಯೋಜನೆ ಸಿದ್ಧಪಡಿಸಲು ಸಹಿ ಹಾಕಿದ್ದವು. ಭಾರತ ಆರ್ಬಿಟರ್‌ ಮತ್ತು ರೋವರ್‌ ಸಿದ್ಧಪಡಿಸುವ ಜವಾಬ್ದಾರಿ ಪಡೆದಿದ್ದರೆ ರಷ್ಯಾ ಲ್ಯಾಂಡರ್‌ ನೀಡುವುದಾಗಿ ಒಪ್ಪಂದದಲ್ಲಿ ತಿಳಿಸಿತ್ತು. 2009ರ ಆಗಸ್ಟ್‌ನಲ್ಲಿಯೋಜನೆ ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು. ”

ಸಮಯಕ್ಕೆ ಸರಿಯಾಗಿ ರಷ್ಯಾ ಲ್ಯಾಂಡರ್‌ ನೀಡಲು ವಿಫಲವಾದ ಕಾರಣ ಯೋಜನೆ 2013ಕ್ಕೆ ಮುಂದೂಡಲಾಯಿತು. 2016ರಲ್ಲಿ ಈ ಒಪ್ಪಂದ ಮುರಿಯಿತು. ಈ ಹಿನ್ನೆಲೆಯಲ್ಲಿ ಚಂದ್ರಯಾನ-2 ಯೋಜನೆ ವೈಫಲ್ಯಕ್ಕೆ ರಷ್ಯಾ ಏನಾದರೂ ಮಾಡಿರಬಹುದು. ಇಂಥ ದೇಶಕ್ಕೆ .7 ಸಾವಿರ ಕೋಟಿಗಳನ್ನು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ’ ಎಂದು ಖಾದರ್‌ ಟೀಕಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top