fbpx
ಸಮಾಚಾರ

5 ದಿನದಲ್ಲಿ ಪೊಲೀಸರು ಸಂಗ್ರಹಿಸಿದ ಒಟ್ಟು ದಂಡದ ಮೊತ್ತ ಎಷ್ಟು ಗೊತ್ತಾ?

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಮೋಟಾರು ಕಾಯ್ದೆ ವಾಹನ ಸವಾರರಿಗೆ ತಲೆನೋವಾಗಿ ಪರಿಣಮಿಸಿದೆ. ಸಂಚಾರಿ ನಿಯಮ ಪಾಲಿಸದಿದ್ದರೆ ಹತ್ತು ಪಟ್ಟು ಹೆಚ್ಚು ದಂಡ ಕಟ್ಟಬೇಕಾಗುತ್ತದೆ. ದೇಶಾದ್ಯಂತ ಈ ಹೊಸ ಟ್ರಾಫಿಕ್​ ರೂಲ್ಸ್​​ ಜಾರಿಯಾದಾಗಿಂದ ಹೆಚ್ಚೆಚ್ಚು ಪ್ರಕರಣಗಳು ದಾಖಲಾಗಿವೆ. ಅಂತೆಯೇ ದಂಡವೂ ಸಹ ಭಾರೀ ಮೊತ್ತದಲ್ಲಿ ಸಂಗ್ರಹವಾಗಿದೆ.

 

 

04-09-2019 ರ ರಾತ್ರಿಯಿಂದ 09-09-2019ರ ಬೆಳಿಗ್ಗೆ 10 ಗಂಟೆಯವರೆಗೆ ವಿವಿಧ 24 ದಂಡಗಳ 1968 ಪ್ರಕರಣಗಳನ್ನು ದಾಖಲಿಸಲಾಗಿದ್ದು ಒಟ್ಟು 72,49,900 ಲಕ್ಷ ರೂ. ಶುಲ್ಕ ಸಂಗ್ರಹಿಸಲಾಗಿದೆ ಎಂದು ನಗರ ಸಂಚಾರಿ ಜಂಟಿ ಆಯುಕ್ತರಾದ ಡಾ. ಬಿ.ಆರ್. ರವಿಕಾಂತೇಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂಬದಿಯ ಸವಾರ ಹೆಲ್ಮಟ್ ಹಾಕದ್ದಕ್ಕೆ ಅತಿ ಹೆಚ್ಚು ದಂಡ ಬಿದ್ದಿದ್ದು, ಬರೋಬ್ಬರಿ 2,645 ಪ್ರಕರಣಗಳು ದಾಖಲಾಗಿದ್ದು, ಸುಮಾರು 26,45,000 ದಂಡವನ್ನು ವಸೂಲಿ ಮಾಡಲಾಗಿದೆ. ಇದನ್ನು ಬಿಟ್ಟರೆ ಚಾಲನೆ ಮಾಡುವಾಗ ಹೆಲ್ಮಟ್ ಹಾಕದ 1,968 ಪ್ರಕರಣಗಳು ದಾಖಲಾಗಿದ್ದು 19,68,000 ದಂಡ ವಸೂಲಿ ಮಾಡಲಾಗಿದೆ.

ವಾಹನ ಚಾಲಿಸುವ ಮೊಬೈಲ್ ಬಳಕೆ ಮಾಡಿದ ಒಟ್ಟು 695 ಪ್ರಕರಣ ದಾಖಲಾಗಿದ್ದು, 13,90,000 ದಂಡ ವಸೂಲಿ ಮಾಡಲಾಗಿದೆ. ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸದಕ್ಕೆ 708 ಪ್ರಕರಣಗಳು ದಾಖಲಾಗಿದ್ದು, 7,08,000 ವಸೂಲಿ ಮಾಡಲಾಗಿದೆ. ಇದನ್ನು ಬಿಟ್ಟರೆ ಒನ್ ವೇಯಲ್ಲಿ ವಾಹನ ಚಾಲನೆ ಮಾಡಿದ 425 ಪ್ರಕರಣ ದಾಖಲಾಗಿದ್ದು, ಒಟ್ಟು 2,12,500 ದಂಡ ವಸೂಲಿ ಮಾಡಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top