fbpx
ಸಮಾಚಾರ

ನಟ ತಿಲಕ್ ಫೇಸ್​ಬುಕ್ ಖಾತೆಯಲ್ಲಿ ರಾರಾಜಿಸುತ್ತಿರುವ ಅಶ್ಲೀಲ ಫೋಟೋ, ವಿಡಿಯೋಗಳು: ಕಾರಣವೇನು?

ಸಿನಿಮಾ ಮತ್ತು ಸೀರಿಯಲ್ ನಟ ನಟಿಯರ ಪಾಲಿಗೆ ಫೇಸ್ ಬುಕ್‌ನಂಥಾ ಸಾಮಾಜಿಕ ಜಾಲ ತಾಣಗಳು ಕಂಟಕವಾಗುತ್ತಿವೆಯಾ? ಇತ್ತೀಚೆಗೆ ನಡೆಯುತ್ತಿರೋ ವಿದ್ಯಮಾನಗಳನ್ನು ಗಮನಿಸುತ್ತಿದ್ದರೆ ಈ ಪ್ರಶ್ನೆಗೆ ಹೌದು ಎಂಬ ಉತ್ತರವೇ ಪಕ್ಕಾ ಆಗುವಂತಿದೆ. ಈ ಹಿಂದೆ ಶ್ರುತಿ ಹರಿಹರನ್, ಮೇಘನಾ ಗಾವ್ಕರ್ ಫೇಕ್ ಫೇಸ್ ಬುಕ್ ಅಕೌಂಟು ಕ್ರಿಯೇಟ್ ಮಾಡಿದ್ದ ಕಿಡಿಗೇಡಿಗಳು ಕೊಡಬಾರದ ಕಾಟ ಕೊಟ್ಟಿದ್ದರು. ಈಗ ನಟ ತಿಲಕ್ ಅವರ ಖಾತೆಯನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ.,

ಸೆಪ್ಟೆಂಬರ್​ 5ರಂದು ಅವರ ಖಾತೆಯಲ್ಲಿ ಮಹಿಳೆಯೊಬ್ಬಳ ಫೋಟೋ ಅಪ್​ಲೋಡ್​ ಆಗಿತ್ತು. ಇದನ್ನು ನೋಡಿದ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದರು. ಇದಾದ ಬೆನ್ನಲ್ಲೇ ಅನೇಕ ಮಾಡೆಲ್​ಗಳ ಸಾಲು ಸಾಲು ಅಶ್ಲೀಲ ಫೋಟೋಗಳು ಅಪ್​ಲೋಡ್​ ಆಗಿದ್ದವು. ಅಷ್ಟೇ ಅಲ್ಲದೆ ಅಶ್ಲೀಲ ವಿಡಿಯೋಗಳ ಲಿಂಕ್ ಅನ್ನು ಶೇರ್ ಆಗಿತ್ತು. ನಟ ತಿಲಕ್​ ಈ ರೀತಿಯ ಫೋಟೋಗಳನ್ನು ಹಾಕುತ್ತಿರುವುದೇಕೆ ಎಂದು ಅವರ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದರು. ಆದರೆ, ಅಸಲಿ ವಿಚಾರ ಏನೆಂದರೆ ಅವರ ಫೇಸ್​ಬುಕ್​ ಖಾತೆ ಹ್ಯಾಕ್​ ಆಗಿದೆ. ಹೀಗಾಗಿ ಅಶ್ಲೀಲ ಫೋಟೋಗಳು, ವಿಡಿಯೋಗಳು ಅವರ ಖಾತೆಯಲ್ಲಿ ರಾರಾಜಿಸುತ್ತಿವೆ.

ತಮ್ಮ ಫೇಸ್ಬುಕ್ ಖಾತೆ ಹ್ಯಾಕ್ ಆಗಿರುವ ಬಗ್ಗೆ ನಟ ತಿಲಿಕ್ ಈಗಾಗಲೇ​ ದೂರು ನೀಡಿದ್ದಾರಂತೆ. ಈ ಬಗ್ಗೆ ಸ್ಪಷ್ಟನೆ ನೀಡಿರುವತಿಲಕ್​, “ಒಂದು ವಾರದ ಹಿಂದೇಯೇ ನನ್ನ ಫೇಸ್ಬುಕ್ ಖಾತೆ ಹ್ಯಾಕ್​ ಆಗಿದೆ. ಈ ಬಗ್ಗೆ ನಾನು ಸೈಬರ್​ ಅಧಿಕಾರಿಗಳಿಗೆ ದೂರು ನೀಡಿದ್ದೇನೆ. ಖಾತೆ ಸರಿಯಾದ ನಂತರದಲ್ಲಿ ಆ ಬಗ್ಗೆ ಫೇಸ್​ಬುಕ್​ನಲ್ಲಿ ಸ್ಪಷ್ಟನೆ ನೀಡುತ್ತೇನೆ,” ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top