fbpx
ಸಮಾಚಾರ

ಇ-ಕಾಮರ್ಸ್ ಸರಳವೋ!! ಕಡ್ಡಾಯವೋ??

ಆಗಿನ ಕಾಲದಲ್ಲಿ ಎಲ್ಲರ ಮನೆಯಲ್ಲೂ ಒಂದು ಟೀವಿ ಇರುವ ಹಾಗೆ ಈಗಿನ ಕಾಲದಲ್ಲಿ ಎಲ್ಲರ ಕೈಯಲ್ಲೂ ಒಂದು ಮೊಬೈಲ ಇರಲೇಬೇಕು ಅನ್ನುವ ಹಾಗಿದೆ, ಮೊದಲು ಸಾಧಾರಣ ಫೊನಗಳು ಬಂದವು, ನಂತರ ಕ್ಯಾಮೆರಾ ಇರುವಂತ ಮೊಬೈಲಗಳು ನಂತರ ಹಾಡು ಕೇಳಬಹುದಾದಂತ ಮೊಬೈಲಗಳು ಆಮೇಲೆ ಲಗ್ಗೆ ಇಟ್ಟಿದ್ದು ಇಂದಿನ ಸ್ಮಾರ್ಟ ಫೊನಗಳು. ಸ್ಮಾರ್ಟ ಫೊನಗಳು ಬಂದಮೇಲಂತು ನಾವು ಜೀವಿಸುವ ಪದ್ದತಿಗಳೇ ಬದಲಿಸಿದಂತಿದೆ. ಮನೆಯಲ್ಲಿ ಕುಳಿತು ಬೇಕಾದ ಎಲ್ಲಾ ಕೆಲಸ ಮುಗಿಸಬಹುದು, ಊm ಬೇಕಾದರೆ, ಸಾವiಗ್ರಿ ಬೇಕಾದರೆ, ಯಾವುದಾದರೂ ಸಹಾಯ ಬೇಕಾದರೆ, ಸೇವೆ ಬೇಕಾದರೆ ಎಲ್ಲವನ್ನು ಮನೆಯಲ್ಲಿಯೇ ಕುಳಿತು ಮುಗಿಸಿಕೊಳ್ಳುವಷ್ಟು ಸೌರ‍್ಯಕಲ್ಪಿಸಿದೆ. ಈ ಸ್ಮಾರ್ಟ ಫೊನಗಳು ಬಂದಮೇಲೆ ಸ್ಟಾರ್ಟ ಆಗಿದ್ದು ಇ-ಕಾಮರ್ಸ ವ್ಯವಹಾರ. ಮೊದಲು ಹೊರದೇಶಗಳ ಕಂಪನಿಗಳು ಮಾತ್ರ ಈ ವ್ಯವಹಾರದಲ್ಲಿದ್ದವು ಆ ವ್ಯವಹಾರದ ಬೆಳವಣಿಗೆ ನೋಡಿ ಬೆರಗಾದ ಜನ ಅದರ ಮುಂದಿನ ಭವಿಷ್ಯ ತಿಳಿದ ಉದ್ಯಮಿಗಳು ಹಾಗು ಉದ್ಯಮ ಪ್ರಾರಂಭಿಸಲು ಹಾತೊರೆಯುತ್ತಿದ್ದ ಜನರಿಗೆ ಒಂದು ಧೊಡ್ಡ ಭಾಗ್ಯದ ಬಾಗಿಲು ತೆರೆದಂತಾಗಿತ್ತು.

ಭಾರತ ದೆ±ದಲ್ಲಿ ಅಂತರ್ಜಾಲದ ಪರಿಚಯವಾಗಿದ್ದೆ ೧೯೯೫ ರಲ್ಲಿ, ಅದಾದ ಕೆಲದಿನಗಳಲ್ಲಿ ಇ ಕಾಮರ್ಸ ಕೂಡ ಪ್ರಾರಂಭವಾಗಿತ್ತು. ಮೊದ ಮೊದಲು ಮಾತ್ರ ಬಿ೨ಬಿ ವ್ಯವಹಾರ ಇದ್ದು ಆಮೇಲೆ ೧೯೯೬ ರಲ್ಲಿ ಬಿ೨ಸಿ ಜಾಲತಾಣಗಳು ಪ್ರಾರಂಭವದವು. ಮೊದಲು ಮದುವೆಯ ಸಂ¨sಂಧ ಹುಡುಕುವ ಬ೨ಸಿ ಜಾಲತಾಣ ಪ್ರಾರಂಭವಾದರೆ ತದನಂತರ ೧೯೯೭ ರಲ್ಲಿ ಪ್ರಾರಂಭವಾಗಿದ್ದು ವ್ರತ್ತಿ ಸಂಭದಿಸಿದ ಜಾಲತಾಣಗಳು. ೨೦೦೫ರಲ್ಲಿ ವಿಮಾನ ಯಾನದ ಹಾಗು ನಮ್ಮ ರೈಲು ನಿಗಮದ ಟಿಕೆಟ್ ಬುಕಿಂಗನ ಪುಟಗಳು ಪ್ರಾರಂಬವಾದವು. ಟಿಕೆಟ್ ಬುಕಿಂಗ ಯಶಸ್ವಿ ಪ್ರಯೊಗನಂತರ ೨೦೦೭ ರಲ್ಲಿ ಸರಕು ಮಾರಾಟದ ಬಿ೨ಸಿ ಪುಟಗಳ ಕಾರುಬಾರು ಪ್ರಾರಂಭಿಸಿದ್ದವು. ಇಲ್ಲಿಯವರೆಗು ನಡೆದ ಇ-ಕಾಮರ್ಸ ವ್ಯವಹಾರ ಕೆಲ ತಿಳಿದವರ ಹಾಗು ಮನೆಯಲ್ಲಿ ಕಂಪ್ಯೂಟರ್ ಹಾಗು ಇಂಟರನೆಟ್ ಇದ್ದವರಿಗೆ ಮಾತ್ರ ಸೀಮಿತವಾಗಿತ್ತು. ೨೦೦೮ ರಲ್ಲಿ ಪ್ರಪಂಚಕ್ಕೆ ಪರಿಚಯವಾಗಿದ್ದು ಸ್ಮಾರ್ಟ ಫೊನಗಳದ್ದು. ಸ್ಮಾರ್ಟ ಫೊನಗಳ ಪರಿಚಯದಿಂದ ಇ-ಕಾಮರ್ಸಗೆ ಒಂದು ಧೊಡ್ಡ ಬಲಬಂದತ್ತಾಗಿತ್ತು. ಈಗ ಹೆಚ್ಚು ಗ್ರಾಹಕರನ್ನು ತಲಪುವ ಸಾಧ್ಯತೆಗಳು ಸಿಕ್ಕಿದ್ದು ಸಿಕ್ಕ ಹೆಚ್ಚು ಗ್ರಾಹಕರ ಅವಷ್ಯಕತೆಗಳೂ ಹೆಚ್ಚಿರುವದರಿಂದ ಅವಕಾಶಗಳು ಹೆಚ್ಚು ಕಂಡಿದ್ದವು. ಅಲ್ಲಿಂದ ಇ-ಕಾಮರ್ಸನ ಬೆಳವಣಿಗೆ ಅಪೆಕ್ಷೆಮೀರಿ ಪ್ರಾರಂಭವಾಯಿತು.

ಭಾರತದೇಶದಲ್ಲಿ ಈಗಿನ ಅಂಕೆಗಳ ಪ್ರಕಾರ ಅಂದಾಜು ೩೭ ಕೋಟಿ (ಜನಸಂಖ್ಯೆಯ ಶೆಕಡಾ ೨೭%) ಸ್ಮಾರ್ಟಫೊನ ಉ¥ಯೋಗಿಸುವವರಿದ್ದಾರೆ ಹಾಗು ಮುಂಬರುವ ಎರಡು ವರ್ಷದಲ್ಲಿ ಇ-ಕಾಮರ್ಸ ಬಳಸುವವg ಸಂಖ್ಯೆ ಸದ್ಯದ ೨೭ ಕೊಟಿ ಇಂದ ಬೆಳೆದು ೩೨ ಕೊಟಿ ವರೆಗು ಎರಬಹುದು ಎನ್ನುವ ಅಂದಾಜು ಇದೆ. ಈಗಿನ ಮಾರುಕಟ್ಟೆಯ ಲೆಕ್ಕದ ಪ್ರಕಾರ ಭಾರತದ ಇ-ಕಾಮರ್ಸ ವ್ಯವಹಾರ ೪೮೦೦ ಕೊಟಿ ರುಪಾಯಿಯಷ್ಟಿದೆ ಮುಂಬರುವ ದಿನಗ¼ಲ್ಲಿ ಅಂದರೆ ಇನ್ನು ೪ ರಿಂದ ೫ ವರ್ಷಗಳಲ್ಲಿ ವ್ಯವಹಾರ ೨೦೦೦೦ ಕೊಟಿಗೆ ತಲುಪಬಹುದು ಎನ್ನುವ ಅಂದಾಸಿದೆ. ಇ-ಕಾಮರ್ಸ ವ್ಯವಹಾರ ನಮ್ಮ ದೇಶದ ಒಟ್ಟು ದೇಶಿಯ ಉತ್ಪಾದನೆ (ಉಆP)ಗೇ ಶೆಕಡಾ ೧% ರಷ್ಟು ಪಾಲುದಾರವಾಗಿದೆ. ಸರ್ಕಾರ ಇ-ಕಾಮರ್ಸಗೆ ಬೆಂಬಲಿಸಲು ವಿದೆಶಿ ನೇರ ಬಂಡವಾಳ ಹುಡಿಕೆಗೆ ಅವಕಾಶಕೊಟ್ಟಿದೆ. ಮುಂಬರುವ ವರ್ಷಗಳಲ್ಲಿ ಇ ಉದ್ಯಮ ಬಹುಧೊಡ್ಡದು ಹಾಗು ಭಾರತ ದೆಶದ ಬಹು ಮುಖ್ಯ ಆರ್ಥಿಕ ಬಲವಾಗಿ ಬೆಳೆಯಲಿದೆ.

ಪರ..
ಮೇಲೆ ಹೇಳಿದಹಾಗೆ ನಮ್ಮ ದೇಶದ ಆರ್ಥಿಕ ಪರಿಸ್ತಿತಿಗೆ ಸಹಾಯಕವಾಗುವುದರ ಜೊತೆಗೆ ಇನ್ನು ಹಲವು ರೀತಿಯಲ್ಲಿ ಈ ಉದ್ಯಮ ನಮಗೆ ಸಹಾಯಕಾರಿಯಾಗಿದೆ. ಪಟ್ಟಿಮಾಡುತ್ತ ಹೊರಟರೆ ತುಂಬಾ ಸಿಗಬಹುದು ಆದರೆ ಸರಳವಾಗಿ ನಮಗೆ ತಿಳಿಯುವ ಕೆಲ ಲಾಭ ಹಾಗು ಲುಕ್ಸಾನುಗಳನ್ನು ನೊಡಬಹುದು.
ವ್ಯಾಪಾರದ ಸರಳತೆ:- ನನಗೆ ಎನು ಬೇಕು, ಎಂತದು ಬೇಕು, ಯಾವಾಗ ಬೇಕು, ಎಷ್ಟಕ್ಕೆ ಬೇಕು ಹಾಗು ನನ್ನ ಧಾರಣ ಶಕ್ತಿಯ ಪ್ರಕಾರ ಸಲಹೆ ಕೊಟ್ಟು ನನಗೆ ಇರುವ ಎಲ್ಲಾ ಪ್ರಶ್ನೆಗೆ ಉತ್ತರಿಸಿ ಸೂಕ್ತವೆನಿಸುವಹಾಗೆ ಹಣ ಪಾವತಿ ಮಾಡಿ ಮನೆಯಲ್ಲಿಯೇ ಕುಳಿತು ಖರಿದಿಸಬಹುದು ಎನ್ನುವ ಸರಳತೆ.
ಗೌಪ್ಯತೆ:- ನಾನು ಎನು ಖರಿದಿಸುತ್ತಿದ್ದೆನೆ, ಯಾರ ಹತ್ತಿರ ಖರಿದುಸಿತ್ತಿದ್ದೆನೆ, ಯಾಕೆ ಖರಿದಿಸುತ್ತಿದ್ದೆನೆ ಈ ವಿಷಯಗಳ ಬಗ್ಗೆ ಯಾರಿಗೂ ಪ್ರಕಟ ಪಡಿಸುವ ಅವಶ್ಯಕತೆ ಇಲ್ಲಾ, ನನಗೆನು ಬೇಕೊ ಖರಿದಿಸಿ ಅಕಸ್ಮಾತಾಗಿ ರಹಸ್ಯಇಡಬೆಕೆನಿಸಿದರೆÉ ಗೌಪ್ಯ ಪ್ಯಾಕಿಂಗನ ಸೌಲಭ್ಯ ಕೊಡುವ ಸಾಧ್ಯತೆ ಮಾತ್ರ ಇದರಲ್ಲಿ ಸಾಧ್ಯ.
ವಿವಿಧತೆ:- ಅಂಗಡಿಗೆ ಹೊದರೆ ಅವರಲ್ಲಿ ಇರುವ ಆಯ್ಕೆಯಲ್ಲಿಯೇ ಸಿಕ್ಕಿದ್ದನ್ನು ಖರೀದಿಸಬೇಕಾದ ಪರಿಸ್ತಿತಿ. ಇಲ್ಲಿ ನಿಮಗೆ ಬೇಕಾದ ಹಾಗು ಎಂದೂ ಕಂಡರಿಯದ ಹಾಗು ನೊಡದ ಆಯ್ಕೆಗಳೂ ಕಣ್ಣಮುಂದೆ ಕಾಣಿಸುತ್ತವೆ. ಕಾಣಿಸುವದಷ್ಟೆÃ ಅಲ್ಲದೆ ಇರುವ ಕೆಲ ಆಯ್ಕೆಗಳಲ್ಲಿ ತುಲನೆ ಮಾಡಿ ನಿಮಗೆ ಸುಕ್ತವಾದ ಸಲಹೆ ಕೊಡುತ್ತದೆ.
ಇ-ಕಾಮರ್ಸ ವ್ಯಾಪಾರದಲ್ಲಿ ಹೆಚ್ಚು ಅಂದರೆ ಎಲೆಕ್ಟಾçನಿಕ್ಸ ಉತ್ಪನ್ನಗಳು ಹೆಚ್ಚಿನಲ್ಲಿ ವ್ಯಾಪಾರವಾಗುತ್ತವೆ ಎರಡನೆ ಸ್ಥಾನದಲ್ಲಿ ಹೆಚ್ಚು ಬಿಕರಿಯಾಗುವದು ಯಾವುದೆಂದರೆ ಅದು ಬಟ್ಟೆ ಬರೆಗಳು. ಅದರಲ್ಲಿ ಲೆಕ್ಕ ಹಾಕಿದರೆ ಹೆಣ್ಣುಮಕ್ಕಳ ಬಟ್ಟೆಗಳ ಬಿಕರಿ ಗಂಡಸರ ಬಟ್ಟೆಗಳಿಗಿಂತ ತುಂಬಾ ಜಾಸ್ತಿ. ಹೆಣ್ಣು ಮಕ್ಕಳು ತಮ್ಮ ಒಳ ಉಡುಪು ಹಾಗು ಗುಪ್ತವಾಗಿ ತರಿಸಬೇಕೆನಿಸುವ ಉಡುಪುಗಳನ್ನು ಯಾವ ಸಂಕೊಚವಿಲ್ಲದೆ ಮನೆಯಲ್ಲಿಯೇ ಕುಳಿತು ಖರಿದಿಸುವ ಅನುಭವ ಅವರಿಗೆÀ ಈ ವ್ಯಾಪಾರ ವ್ಯವಸ್ತೆಗೆ ಹತ್ತಿರ ಕರೆತಂದಿರಬಹುದು. ಇನ್ನು ಎಲೆಕ್ಟಾçನಿಕ್ಸ ಸಾಮಾನುಗಳ ಖರಿದಿ ಹೆಚ್ಚಾಗಲು ಕಾರಣ ಇ-ಕಾಮರ್ಸನಲ್ಲಿ ಸಿಗುವ ಹೆಚ್ಚು ರಿಯಾಯ್ತಿಗಳು ಹಾಗು ಸಿಗುವ ಹೆಚ್ಚು ಹೆಚ್ಚು ಕ್ಯಾಶಬ್ಯಾಕನ ಆಕರ್ಶಣೆಗೂ ಇರಬಹುದು.

ವಿರುಧ್ದ..

ಸಮಾಧಾನ:- ಸಾಧಾರಣ ಅಂಗಡಿಗೆ ಹೊದರೆ ಅಲ್ಲಿ ನಿಮಗೆ ಬೆಕಾದನ್ನು ಮುಟ್ಟಿ ಬೇಕೆಂದರೆ ಟ್ರೆöÊ ಮಾಡಿ ಅನುಭವಿಸಿ ಖರಿದಿಸುವ ಸೌಲಭ್ಯವಿರುತ್ತದೆ. ಪರಿಚಯದವರಾದರೆ ನಿಮಗೆ ಬೇಕೆನಿಸುವ ಎಲ್ಲಾ ಬಟ್ಟೆಗಳನ್ನು ಮನೆಗೆ ತೊಗೊಂಡು ಹೊಗಿ ಮನಸ್ಸಿಗೆ ಬೆಕಾಗಿದ್ದನ್ನು ಮಾತ್ರ ಇಟ್ಟುಕೊಂಟು ಬೆಡಾಗಿದ್ದನ್ನು ಮತ್ತೆ ತಿರುಗಿ ಕೊಡಬಹುದು. ಆದರೆ ಇಲ್ಲಿ ಕಂಡ ಚಿತ್ರವನ್ನು ಮಾತ್ರನೋಡಿ ಅದನ್ನು ನಿಮ್ಮ ಕಲ್ಪನೆಯಲ್ಲಿ ಉಟ್ಟು ತರಿಸಬೇಕಾಗುತ್ತದೆ ತರಿಸಿದಮೇಲೆ ಹೊಂದದಿದ್ದರೆ ಮತ್ತೆ ಕಳಿಸಿ ಮರು ಪಡೆಯುವುದರಲ್ಲಿ ಹೊಸತೆನ್ನುವ ಹುಮ್ಮಸ್ಸೆ ಮರೆತುಹೊಗಿಬಿಡುತ್ತದೆ.
ಕಾಯುವ ಸಮಯ:- ನೊಡುವ ಸುಖ, ಆಯ್ಕೆಯ ಖುಷಿ, ರಿಯಾಯ್ತಿಯ ಸಂತೊಷ ಎಲ್ಲ ಒಂದುಕಡೆ ಆದರೆ ಇನ್ನೊಂದುಕಡೆ ಖರಿದಿಸಿ ದುಡ್ಡುಕೊಟ್ಟರೂ ಕೈಯಲ್ಲಿ ಖರಿದಿಸಿದ ವಸ್ತು ಬರಲು ಕಾಯುತ್ತ ಕುಡಬೇಕು. ಈ ಕಾಯುವ ಸಮಾಧಾನ ಇರುವ ಜನರಿಗೆ ಇದೊಂದು ಸರಳ ಕೆಲಸ ಆದರೆ ಗಡಿಬಿಡಿ ಸ್ವಭಾವದವರಿಗೆ ಇದು ಕಷ್ಟಸಾಧ್ಯವೇ..
ಗೌಪ್ಯತೆ:- ಪ್ರತಿ ಬಾರಿಯೂ ಲಾಗಿನ್ ಆದಾಗ ನಮ್ಮ ವ್ಯಯಕ್ತಿಕ ವಿವರಗಳು ಕಂಪನಿಗಳಿಗೆ ತಲುಪುತ್ತವೆ. ನಮ್ಮ ರುಚಿ ಯಾವದು, ನಮ್ಮ ಯೊಚನೆ ಎಂಥದು, ನಮ್ಮ ತಾಣ ಯಾವುದು ನಮ್ಮ ಸದ್ಯದ ಅವಶ್ಯಕತೆ ಎನಿದೆ ಎಂದು ಎಲ್ಲವೂ ಅವರ ಮಾಹಿತಿಗಳಲ್ಲಿ ಸಂಗ್ರಹವಾಗಿರುತ್ತವೆ. ಸಂಗ್ರಹವಾದ ಎಲ್ಲ ವಿಷಯಧಾರಿತವಾಗಿ ಅವರು ನಮ್ಮ ಮನಸ್ಸಿನಮೇಲೆ ಪರಿಣಾಮ ಬೀಳುವಹಾಗೆ ಅವರು ನಿಯಂತ್ರಣಮಾಡಬಹುದು. ಅದನ್ನು ಮೀರಿ ನಮ್ಮ ಬ್ಯಾಂಕಿನ ವಿವರಗಳು ಅವರಲ್ಲಿ ನೊಂದಣಿಗೊಂಡಿರುತ್ತವೆ, ಆ ವಿವರಗಳನ್ನು ಹೇಗೆ ಬೇಕಾದರೂ ಬಳಿಸಿಕೊಳ್ಳಬಹುದು. ಇ-ಕಾಮರ್ಸ ಲೋಕದಲ್ಲಿ ಹೊರಕಂಡ ಗೌಪ್ಯತೆ ಒಳಹೊಕ್ಕಂತೆ ಎಲ್ಲವೂ ಸಡಿಲು ಎನಿಸುತ್ತವÉ.
ಭರವಸೆ:- ನೊಡಿದಾಗ ಎಲ್ಲವೂ ಚೆಂದವೆನಿಸಬಹುದು, ಚೆಂದವೆನಿಸಿದ ಎಲ್ಲವೂ ನಿಜವಾಗಿಯೂ ಚೆಂದ ಇರಬೇಕು ಎನ್ನುವ ಭರವಸೆ ಎಲ್ಲಿಂದ ಸಿಗಬೇಕು. ಬರೀ ಚಿತ್ರ ನೋಡಿ ಖರಿದಿಸುವಾಗ ಈ ವಿಚಾರ ಕಾಡದಿರಲು ಸಾಧ್ಯವಿಲ್ಲಾ. ಕೆಲ ಜಾಲತಾಣಗಳು ಹೆಚ್ಚು ರಿಯಾಯತಿಯ ಆಸೆಯನ್ನು ಒಡ್ಡಿ ಮೊಸದ ವ್ಯಾಪಾರ ಮಾಡುವ ಉದಾರಣೆಗಳು ಕಂಡುಬಂದಿವೆ. ಭರವಸೆಗೆ ಮೊಸ ಇಲ್ಲಿ ಸರಳ ಸಹಜ.

ಎನೇ ಆಗಲಿ, ಎನೇ ಇರಲಿ, ಹೇಗೆ ಆಗಲಿ ನಮ್ಮ ಈ ಜೀವನದಲ್ಲಿ ಇ-ಕಾಮರ್ಸ ಒಂದಾಗಿ ಹೊಗಿದೆ. ಕಲಿತವರು ಸ್ವಲ್ಪ ತಿಳಿದವರು ಇಲ್ಲಿ ಖರಿದಿಸದೇ ಇರದ ಉಧಾರಣೆಗಳು ಸಿಗುವುದು ವಿರಳವೇ. ನಮಗೆ ಇದು ಖುಷಿ, ಇದು ಸರಳ, ಅದರಲ್ಲಿ ಇರುವ ಲೋಪ ನಮಗೆ ಬೇಕಿರದ ವಿಷಯ. ಇದರಿಂದ ತಪ್ಪಿಸಿಕೊಳ್ಳುವುದು ಈ ಕಾಲದಲ್ಲಿ ತುಂಬಾ ವಿರಳ.

ವಿಕಾಸ ಕುಲ್ಕರ್ಣಿ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top