fbpx
ಭವಿಷ್ಯ

ಸೆಪ್ಟೆಂಬರ್ 11: ನಾಳೆಯ ಪಂಚಾಂಗ ಮತ್ತು ದಿನ ಭವಿಷ್ಯ.

ಸ್ಥಳ- ಬೆಂಗಳೂರು.
ಬುಧವಾರ, ಸೆಪ್ಟೆಂಬರ್ 11 2019
ಸೂರ್ಯೋದಯ : 6:08 am
ಸೂರ್ಯಾಸ್ತ: 6:23 pm
ಶಕ ಸಂವತ : 1941 ವಿಲಂಬಿ

ಅಮಂತ ತಿಂಗಳು :ಭಾದ್ರಪದ
ಪಕ್ಷ : ಶುಕ್ಲಪಕ್ಷ
ತಿಥಿ :ತ್ರಯೋದಶೀ 29:06
ನಕ್ಷತ್ರ: ಶ್ರವಣ 14:00
ಯೋಗ :ಅತಿಗಂಡ 18:38
ಕರಣ:ಕುಲವ 15:53 ತೈತುಲ 29:06

ಅಭಿಜಿತ್ ಮುಹುರ್ತ: Nil
ಅಮೃತಕಾಲ : 5:17 am – 7:05 am

ರಾಹುಕಾಲ-12:16 pm – 1:47 pm
ಯಮಗಂಡ ಕಾಲ- 7:43 am – 9:14 am
ಗುಳಿಕ ಕಾಲ- 10:45 am – 12:16 pm

 

 

ಸಂಗಾತಿಯ ಸಲಹೆಯನ್ನು ಆಲಿಸಿರಿ. ವೈಭವದ ಜೀವನ ನಿಮ್ಮದಾಗುವುದು. ಬಹುದಿನದ ಬಯಕೆಯನ್ನು ನಿಮ್ಮ ಸಂಗಾತಿಯ ಮುಂದೆ ನಿವೇದಿಸಿಕೊಳ್ಳಿ. ಆ ಕಡೆಯಿಂದ ಸಕಾರಾತ್ಮಕ ಉತ್ತರ ದೊರೆಯುವುದು. ಧೈರ್ಯದಿಂದ ಮುನ್ನುಗ್ಗಿರಿ.

ಇಂದು ನೀವು ಸಂತಸದ ಕ್ಷ ಣಗಳನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ. ಹಳೆಯ ಸ್ನೇಹಿತರು ಭೇಟಿ ಆಗುವ ಸಂಭವ. ಹಣಕಾಸಿನ ಸ್ಥಿತಿ ಉತ್ತಮ.

ಅಧಿಕ ತಿರುಗಾಟದಿಂದ ಜೇಬಿನಲ್ಲಿಯ ಹಣವು ಅಧಿಕವಾಗಿ ಖರ್ಚಾಗುವುದು. ಸರಿಯಾದ ಸಮಯಕ್ಕೆ ಆಹಾರ ಸೇವಿಸುವುದು ಒಳ್ಳೆಯದು. ಅನಪೇಕ್ಷಿತ ವಿಚಾರಗಳನ್ನು ಉಪೇಕ್ಷಿಸುವುದು ಒಳ್ಳೆಯದು.

ನೂತನ ಯೋಜನೆಗಳಿಂದ ಬದುಕಿಗೆ ಹೊಸ ಉತ್ತೇಜನ, ಮಾನಸಿಕ ನಿರಾಳತೆ, ಮಿತ್ರರ ಸಹಕಾರ. ಹಮ್ಮಿಕೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಗುರು-ಹಿರಿಯರ ಅಶೀರ್ವಾದ ದೊರೆಯುವುದು. ಹಣಕಾಸಿನ ಸ್ಥಿತಿ ಉತ್ತಮ.

 

ಮನಸ್ಸಿಗೆ ಒತ್ತಡ ನೀಡುವ ಕೆಲಸದತ್ತ ಗಮನ ಹರಿಸದಿರಿ. ಹಣಕಾಸಿನ ವಿಷಯದಲ್ಲಿ ಚಿಂತೆ ಇಲ್ಲ. ನಾನಾ ಮೂಲಗಳಿಂದ ಹಣವು ಹರಿದು ಬರುವುದು. ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಹರಿಸಿರಿ. ಪ್ರಯಾಣದಲ್ಲಿ ಎಚ್ಚರ.

 

ಕೆಲಸದ ಒತ್ತಡ ಮತ್ತು ಹೊಸ ಜವಾಬ್ದಾರಿಗಳು ನಿಮಗೆ ಮಾನಸಿಕ ಒತ್ತಡವನ್ನು ತಂದುಕೊಡುವುದು. ಮನಃಶಾಂತಿಗಾಗಿ ದೂರ ಪ್ರವಾಸ ಕೈ ಗೊಳ್ಳುವಿರಿ. ಬಂಧುಮಿತ್ರರ ದರ್ಶನದಿಂದ ಮನಸು ಪ್ರಫುಲ್ಲವಾಗುವುದು. ಆರೋಗ್ಯ ಉತ್ತಮ.

 

ಕಾರ್ಯ ಸ್ಥಳದಲ್ಲಿ ತಾಳ್ಮೆಯಿಂದ ಇರಿ. ನಿಮ್ಮ ಕೈ ಕೆಳಗಿನ ಅಧಿಕಾರಿಗಳು ಮಾಡುವ ತಪ್ಪು ನಿಮ್ಮ ಸಹನೆಯನ್ನು ಪರೀಕ್ಷಿಸುವುದು. ಆದಾಗ್ಯೂ ನೀವು ಅವರ ಮೇಲೆ ಪ್ರೀತಿ ವಿಶ್ವಾಸವನ್ನು ತೋರುವಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

 

ಗಟ್ಟಿ ಮನೋಭಾವ ಬೆಳೆಸಿಕೊಳ್ಳಿ. ಸಣ್ಣ ಪುಟ್ಟ ವಿಷಯಗಳಿಗೆ ದಿನಗಟ್ಟಲೆ ಚಿಂತಿಸುವುದು ಸೂಕ್ತವಲ್ಲ. ಫೋನ್‌, ಮೊಬೈಲ್‌ ಎಲೆಕ್ಟ್ರಿಕಲ್‌ ವ್ಯಾಪಾರಸ್ಥರಿಗೆ ಉತ್ತಮ ಲಾಭಾಂಶ ಕಂಡುಬರುವುದು. ಕೌಟುಂಬಿಕವಾಗಿ ನೆಮ್ಮದಿಯ ದಿನ.

 

ಆಯೋಜಿಸಿದ ಕಾರ್ಯಗಳಲ್ಲಿ ಹಿಮ್ಮುಖವಾಗುವ ಸಾಧ್ಯತೆ. ಆರ್ಥಿಕ ಸಂಕಷ್ಟ, ನಂಬಿದ ಸ್ನೇಹಿತರಿಂದ ನೆರವು ದೊರೆಯುವುದಿಲ್ಲ. ಸಂಗಾತಿಯ ಮುನಿಸಿನಿಂದ ಮನಸ್ಸಿಗೆ ಬೇಸರ ಉಂಟಾಗುವುದು. ಸಂಜೆಯ ವೇಳೆಗೆ ತುಸು ನೆಮ್ಮದಿ.

ನಿಮ್ಮ ಮೇಲೆ ಜಿದ್ದು ಮಾಡುತ್ತಿದ್ದ ದೂರದ ಬಂಧುಗಳು ತಾವಾಗಿ ಮಿತ್ರತ್ವದಿಂದ ನಿಮ್ಮ ಬಳಿಗೆ ಬರುವರು. ಹಣಕಾಸಿನ ಮುಗ್ಗಟ್ಟು ತೀವ್ರವಾಗುವುದು. ಗುರು ಹಿರಿಯರ ಆಶೀರ್ವಾದ ಪಡೆಯಿರಿ. ಆರೋಗ್ಯ ಉತ್ತಮವಾಗಿರುವುದು.

 

 

ಶತ್ರುಗಳು ಈದಿನ ಮಿತ್ರರಾಗುವರು. ಬಾಕಿ ಬರಬೇಕಾಗಿದ್ದ ಹಣ ಕೈ ಸೇರುವುದು. ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸು ದೊರೆಯುವುದು. ಕೌಟುಂಬಿಕ ಜೀವನ ಉತ್ತಮವಾಗಿದ್ದು ನೆಮ್ಮದಿಯ ದಿನ ಕಾಣುವಿರಿ.

 

ಆರ್ಥಿಕ ಅಭಿವೃದ್ಧಿ ನಿಧಾನವಾದರೂ ಸಂತೃಪ್ತಿ ಬದುಕು ನಿಮ್ಮದಾಗುವುದು. ಸಂಗಾತಿಯ ಕನಸನ್ನು ನನಸು ಮಾಡುವ ಭರವಸೆ ನೀಡುವಿರಿ. ಹೊಸ ಆಲೋಚನೆಗಳು ನಿಮ್ಮನ್ನು ಜೀವನ್ಮುಖಿಯನ್ನಾಗಿಸುವುದು. ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top