fbpx
ಸಮಾಚಾರ

“ಯಶ್, ಸುದೀಪ್, ದರ್ಶನ್, ಮಾತ್ರ ಹೀರೋಗಳಲ್ಲ” ಶಿವರಾಜ್ ಕುಮಾರ್ ಖಡಕ್ ಮಾತು.

ಸೌತ್ ಇಂಡಿಯಾದಲ್ಲೇ ಮೊದಲ ಬಾರಿಗೆ ಸಿನಿಮಾ ಪತ್ರಕರ್ತರಿಂದಲೇ ಸಿನಿಮಾ ವಿಮರ್ಶೆ ಕುರಿತು ಪ್ರಶಸ್ತಿ ನೀಡಲು ‘ಚಂದನವನ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್ ಅಕಾಡೆಮಿಯೊಂದು ಶುರುವಾಗಿದೆ. ಅಕಾಡೆಮಿಯ ಲೋಗೊವನ್ನು ಇಂದು ಸೆಂಚುರಿಸ್ಟಾರ್ ಶಿವರಾಜ್​ಕುಮಾರ್, ರಾಕ್​ಲೈನ್ ವೆಂಕಟೇಶ್ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, “ಮೂವತ್ಮೂರು ವರ್ಷಗಳಿಂದ ಚಿತ್ರರಂಗವನ್ನು ನೋಡುತ್ತಿದ್ದೇನೆ ಪತ್ರಿಕೋದ್ಯಮ ಹಾಗೂ ಚಿತ್ರೋದ್ಯಮದ ನಡುವೆ ನಂಟಿದೆ ಸ್ಯಾಂಡಲ್ ವುಡ್ ನಲ್ಲಿ ಸುದೀಪ್, ಯಶ್, ಅಪ್ಪು, ದರ್ಶನ್, ಶಿವರಾಜ್ ಕುಮಾರ್ ಮತ್ತಿತರರು ಮಾತ್ರ ಹೀರೋಗಳಲ್ಲ ಸಾಕಷ್ಟು ಜನ ಹೀರೋಗಳಿದ್ದಾರೆ ಭೇದ, ಭಾವ ತೋರದೆ ಎಲ್ಲರೊಡನೆ ಮುನ್ನಡೆಯಬೇಕು ಒಂದು ವೇಳೆ ನಾನೊಬ್ಬನೇ ಎಂದು ಯಾರಾದರೂ ಅಂದುಕೊಂಡಲ್ಲಿ ಅಂತಹವರು ನೆಲ ಕಚ್ಚುವುದು ಖಚಿತ” ಎಂದರು

“ನನ್ನನ್ನು ಇಂಡಸ್ಟ್ರಿಯ ಪಿಲ್ಲರ್ ಎಂದು ಕರೆಯಬೇಡಿ. ಹಿರಿಯ ನಟರಿದ್ದಾರೆ. ಅನಂತ್ ನಾಗ್, ರವಿಚಂದ್ರನ್ ಸೇರಿದಂತೆ ಅನೇಕ ಹಿರಿಯ ನಟರೆಲ್ಲ ಇದ್ದಾರೆ ಇಂದಿಗೂ ಸಕ್ರೀಯರಾಗಿದ್ದಾರೆ. ಅವರೆಲ್ಲ ಪಿಲ್ಲರ್ಸ್ ನಾನು ಇಟ್ಟಿಗೆ ಆಗಿ ಇರಲು ಇಷ್ಟಪಡುತ್ತೇನೆ” ಎಂದು ‘ಚಂದನವನದ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ’ ಲೋಗೊ ಉದ್ಘಾಟನೆ ಮಾಡಿ ಮಾತನಾಡಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top