fbpx
ಸಮಾಚಾರ

ಮತ್ತೆ ಶುರುವಾಯ್ತು ‘ಬಾಸ್’ ವಿವಾದ: ಫ್ಯಾನ್ಸ್ ವಾರ್ ಗೆ ಕಾರಣವಾಯ್ತಾ ಯಶ್ ಮಾಡಿದ ಆ ಟ್ವೀಟ್?

ಚಿತ್ರರಂಗದಲ್ಲಿ ಸ್ಟಾರ್‌ಗಳು ತಮ್ಮ ಪಾಡಿಗೆ ತಾವು ಅನ್ಯೋನ್ಯವಾಗಿದ್ದರೂ ಅಭಿಮಾನಿಗಳ ನಡುವೆ ಆಗಾಗ ತಿಕ್ಕಾಟ ಹೊತ್ತಿಕೊಳ್ಳುತ್ತಿರುತ್ತೆ. ಸದ್ಯ ಇಂಥಾದ್ದೇ ಒಂದು ಕೋಲ್ಡ್ ವಾರ್ ಮತ್ತೆ ಶುರುವಾಗಿದೆ. ಸ್ಟಾರ್ ನಟರ ಅಭಿಮಾನಿಗಳ ನಡುವೆ ಇಂಥಾದ್ದೊಂದು ವಾರ್ ನಡೆಯಲು ಕಾರಣವಾಗಿರೋದು ‘ಬಾಸ್’ ಎಂಬ ಬಿರುದು. ಕೆಲ ದಿನಗಳಿಂದ ತಣ್ಣಗಿದ್ದ ‘ಬಾಸ್’ ಎಂಬ ಬಿರುದಿಗಾಗಿ ಸ್ಟಾರ್‌ಗಳ ಅಭಿಮಾನಿಗಳ ನಡುವೆ ಶೀತಲ ಸಮರ ಈಗ ಮತ್ತೆ ಹುಟ್ಟಿಕೊಂಡಿದೆ.

 

 

ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಯಶ್ ಪ್ರಚಾರ ಮಾಡುತ್ತಿರುವ ‘Beardo Thunder’ ಎಂಬ ಗಡ್ಡದ ಎಣ್ಣೆಯ ವೀಡಿಯೋ ಅಪ್‌ಲೋಡ್ ಮಾಡಿದ್ದರು. ಇದಕ್ಕೆ #BeardoBoss ಎಂದು ಟ್ಯಾಗ್ ಬಳಸಿದ್ದರು. ಈ ಪೋಸ್ಟಿಗೆ ಯಶ್ ಅಭಿಮಾನಿಗಳು #BeardoBoss ಎಂದು ಕೊಂಡಾಡಿದರು. ಅಲ್ಲಿಂದಲೇ ಆರಂಭವಾಗಿದೆ ಯಶ್ ಹಾಗೂ ದರ್ಶನ್ ಅಭಿಮಾನಿಗಳ ವಾರ್. ಸ್ಯಾಂಡಲ್‌ವುಡ್‌ಗೆ ದರ್ಶನ್ ‘ಬಾಸ್’ ಎಂದು ಬಲವಾಗಿ ನಂಬಿರುವ ಅಭಿಮಾನಿಗಳು ಈ ಬಗ್ಗೆ ಒಬ್ಬರ ಕಾಲನ್ನು ಮತ್ತೊಬ್ಬರು ಎಳೆದುಕೊಳ್ಳಲು ಆರಂಭಿಸಿದ್ದಾರೆ.

ಈ ವಿಚಾರಕ್ಕೆ ಇಬ್ಬರ ಅಭಿಮಾನಿಗಳ ನಡುವೆ ತಿಕ್ಕಾಟ ಇದ್ದೇ ಇದೆ. ಈಗ ಯಶ್​ ಮಾಡಿದ ಟ್ವೀಟ್​ ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್​ವಾರ್​ಗೆ ಕರಣವಾಯಿತಾ? ಎಂಬ ಪ್ರಶ್ನೆ ಮೂಡಿದೆ. ಒಟ್ಟಿನಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಯಾರು ಬಾಸ್ ಎಂಬ ವಿವಾದ ಯಾರೇನೇ ಹೇಳಿದರೂ ತಣ್ಣಗಾಗುವಂತೆ ಕಾಣುತ್ತಿಲ್ಲ. ಬಾಸುಗಳೆಲ್ಲ ಅವರವರ ಸಿನಿಮಾ, ಶೂಟಿಂಗು ಅಂತ ತಮ್ಮದೇ ಲೋಕದಲ್ಲಿ ಹಾಯಾಗಿದ್ದರೂ ಅವರ ಅಭಿಮಾನಿಗಳು ಎನಿಸಿಕೊಂಡವರು ಮಾತ್ರ ಇದನ್ನೊಂದು ಪ್ರತಿಷ್ಠೆಯನ್ನಾಗಿ ಸ್ವೀಕರಿಸಿ ನಾನಾ ರೀತಿಯ ಆಚರಣೆಗೆ ಇಳಿದಿದ್ದಾರೆ.

ಏನಿದು ವಿವಾದ?
ಕಳೆದ ವರ್ಷ ಟಗರು ಚಿತ್ರದ ಶತದಿನದ ಪೂರೈಸಿದ ಅಂಗವಾಗಿ ನಿರ್ದೇಶಕ ಸೂರಿ ಶಿವಣ್ಣನಿಗೆ ‘ಬಾಸ್ ಆಫ್ ಸ್ಯಾಂಡಲ್ ವುಡ್’ ಎಂಬ ಬಿರುದು ನೀಡಿತ್ತು. ಇದೇ ಅಭಿಮಾನಿಗಳ ನಡುವೆ ‘ಬಾಸ್’ ವಿವಾದ ಹೊತ್ತಿಕೊಳ್ಳಲು ಕಾರಣವಾಗಿತ್ತು. ಶಿವರಾಜ್ ಕುಮಾರ್, ದರ್ಶನ್ ಮತ್ತು ಯಶ್ ಅಭಿಮಾನಿಗಳು ತಮ್ಮ ಪ್ರೀತಿಯ ನಟನನ್ನೇ ‘ಬಾಸ್’ ಅನ್ನಬೇಕು ಎಂಬ ತರೇಹವಾರಿ ವಾದ ಮಂಡಿಸಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಿತ್ತಾಟದ ಜೊತೆಗೆ ದೊಡ್ಡ ಚರ್ಚೆಗಳು ನಡೆದಿದ್ದವು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top