fbpx
ಸಮಾಚಾರ

ಒಕ್ಕಲಿಗರಿಗೆ ಟಾಂಗ್ ಕೊಟ್ಟ ಸಿಟಿ ರವಿ: ಹೇಳಿದ್ದೇನು ಗೊತ್ತಾ?

ಜಾರಿ ನಿರ್ದೇಶನಾಲಯ ಡಿಕೆ ಶಿವಕುಮಾರ್ ಅವರ ಬಂಧನ ಖಂಡಿಸಿ ಒಕ್ಕಲಿಗ ಒಕ್ಕೂಟ ಭಾರೀ ಪ್ರತಿಭಟನೆಗೆ ಮುಂದಾಗಿರುವುದಕ್ಕೆ ಸಚಿವ ಸಿಟಿ ರವಿ ಟಾಂಗ್ ನೀಡಿದ್ದಾರೆ. ”ಭ್ರಷ್ಟಾಚಾರ ನಡೆದಿದ್ದರೆ ಭಯಪಡಬೇಕು. ಪ್ರಾಮಾಣಿಕವಾಗಿ ಇರುವವರಿಗೆ ಭಯವೇಕೆ?,” ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ದ್ವೇಷ ರಾಜಕಾರಣ ಮಾಡುತ್ತಿದೆ ಎಂಬ ಪ್ರಶ್ನೆಗೆ ”ಸಮ್ಮಿಶ್ರ ಸರಕಾರ ಇದ್ದಾಗ ಒಬ್ಬರ ಮೇಲೆ ಒಬ್ಬರು ಆರೋಪ ಮಾಡುತ್ತಿದ್ದರು. ಹಾಗಾಗಿ ಇದು ರಾಜಕೀಯ ಪ್ರೇರಿತ ಆರೋಪ. ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡೋದು ತಪ್ಪಾ?? ತನಿಖೆಯೇ ಬೇಡವೆಂದರೆ ಏನೋ ನಡೆದಿರಬೇಕು ಎಂಬ ಅನುಮಾನ ಸಾರ್ವಜನಿಕರಲ್ಲಿಬರುವುದಿಲ್ಲವೇ ?,” ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರಿಗೆ ಪರೋಕ್ಷವಾಗಿ ಟಾಂಗ್‌ ನೀಡಿದರು.

ನಾನು ಸತ್ಯ ಹೇಳಿದರೆ ಕೆಲವರಿಗೆ ಅಪಥ್ಯವಾಗುತ್ತದೆ. ಇ.ಡಿ.ಗೆ ಯಾವ ಜಾತಿ ಇದೆ, ಯಾವ ಪಕ್ಷ ಇದೆ. ಇಡಿ ಹುಟ್ಟುಹಾಕದವರು ಯಾರು..?ಇಡಿ ಹುಟ್ಟುಹಾಕಿದ್ದು ಭಾರತೀಯ ಜನತಾ ಪಾರ್ಟಿ ಅಲ್ಲ. ಕೋಟ್ಯಂತರ ರೂಪಾಯಿ ಅಕ್ರಮ ಆಸ್ತಿ ಸಂಬಂಧ ಇಡಿ ತನಿಖೆ ಮಾಡುತ್ತಿದೆ. ತನಿಖೆ ಮಾಡೋದೇ ತಪ್ಪು ಎಂದರೆ ಹೇಗೆ..? ಎಂದು ಪ್ರಶ್ನಿಸಿದರು.

ನಾನು ಒಕ್ಕಲಿಗ ಸಮುದಾಯದವನು. ಭ್ರಷ್ಟಾಚಾರ ಯಾರು ಮಾಡಿದ್ದಾರೋ ಅವರಿಗೆ ಭಯವಾಗುತ್ತದೆ. ವೈಟ್‌ ಟ್ಯಾಪ್‌, ಶುದ್ಧ ಗಂಗಾ ಯೋಜನೆಯಲ್ಲೂ ಭ್ರಷ್ಟಾಚಾರ ಆಗಿದೆ ಎನ್ನುತ್ತಾರೆ. ತನಿಖೆಯಾಗದೆ ಇದ್ದರೆ ತಿಳಿಯುವುದು ಹೇಗೆ? ನನ್ನ ಸಮುದಾಯಕ್ಕೆ ಹೇಳುವುದಿಷ್ಟೇ. ಕಾನೂನಿಗಿಂತ ದೊಡ್ಡವರು ಯಾರು ಇಲ್ಲ ಎಂದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top