fbpx
ಸಮಾಚಾರ

ಇಡಿ ವಶದಲ್ಲಿದ್ದರೂ ಟ್ವೀಟ್ ಮಾಡಿದ ಡಿಕೆ ಶಿವಕುಮಾರ್: ಹೇಳಿದ್ದು ಒಂದೇ ಮಾತು.

ದೆಹಲಿ ನಿವಾಸದಲ್ಲಿ ಅಕ್ರಮ ಹಣ ದೊರೆತ ಪ್ರಕರಣ ಸಂಬಂಧ ವಿಚಾರಣೆ ನಡೆಸಲು ಸೆ. 13ರ ವರೆಗೆ ಡಿಕೆ ಶಿವಕುಮಾರ್​ ಅವರನ್ನು ಕೋರ್ಟ್​ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿದೆ. ದೆಹಲಿ ನಿವಾಸದಲ್ಲಿ 8.5 ಕೋಟಿ ರೂಪಾಯಿ ದೊರೆತ ಪ್ರಕರಣ ಸಂಬಂಧ ಡಿಕೆಶಿ ಅವರನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

 

 

ಇಡಿ ವಶದಲ್ಲಿರುವ ಡಿ.ಕೆ.ಶಿವಕುಮಾರ್ ಅವರು ಆಶ್ಚರ್ಯಕರ ರೀತಿಯಲ್ಲಿ ನೆನ್ನೆ ಟ್ವೀಟ್ ಮಾಡಿದ್ದಾರೆ. ‘ನನ್ನ ಬೆಂಬಲಕ್ಕೆ ಬೆಂಗಳೂರಿನಲ್ಲಿ ನಾಳೆ ಭಾರಿ ದೊಡ್ಡ ಪ್ರತಿಭಟನೆ ಹಮ್ಮಿಕೊಂಡಿರುವ ನಾಯಕರು, ಮಿತ್ರರು, ಬೆಂಬಲಿಗರು ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು’ ಎಂದು ಡಿ.ಕೆ.ಶಿವಕುಮಾರ್ ಅವರ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

 


ದೇವರು ಹಾಗೂ ನ್ಯಾಯಾಂಗದ ಮೇಲೆ ನನಗೆ ಅಪಾರ ನಂಬಿಕೆಯಿದೆ. ಕಾನೂನು ಹಾಗೂ ರಾಜಕೀಯವಾಗಿ ವಿಜಯಶಾಲಿಯಾಗುತ್ತೇನೆ ಎಂಬ ವಿಶ್ವಾಸವನ್ನು ಡಿಕೆಶಿ ಹೊರ ಹಾಕಿದ್ದಾರೆ. ಶಾಂತಿಯುತ ಪ್ರತಿಭಟನೆ ನಡೆಸಿ.. ‘ಜನರಿಗೆ ತೊಂದರೆ ಕೊಡುವುದು ಬೇಡ, ಸಾರ್ವಜನಿಕ ಆಸ್ತಿಗೆ ಧಕ್ಕೆ ಬೇಡ ಎಂದು ಶಿವಕುಮಾರ್ ಮನವಿ ಮಾಡಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top