fbpx
ಸಮಾಚಾರ

ಕನ್ನಡ ರಾಜ್ಯೋತ್ಸವಕ್ಕೆ ಒಡೆಯನ ದರ್ಶನ ಫಿಕ್ಸ್!

‘ಒಡೆ​ಯ’ನಿಗೆ ಸದ್ದಿ​ಲ್ಲದೆ ಚಿತ್ರೀ​ಕ​ರಣ ಮುಕ್ತಾ​ಯ​ಗೊಂಡಿದೆ. ಕೇವಲ ಎರಡು ಹಾಡು ಮಾತ್ರ ಬಾಕಿ ಇದೆ. ಅದು ಕೂಡ ಇಷ್ಟೊ​ತ್ತಿಗೆ ಮುಗಿ​ಯು​ತ್ತಿತ್ತು. ಆದರೆ, ಈ ಎರಡು ಹಾಡು​ಗ​ಳನ್ನು ವಿದೇ​ಶ​ದಲ್ಲಿ ಚಿತ್ರೀ​ಕ​ರಣ ಮಾಡುವ ಪ್ಲಾನ್‌ ಚಿತ್ರ​ತಂಡದ್ದು. ಹೀಗಾಗಿ ಹೊರ ದೇಶಕ್ಕೆ ಹೊರ​ಡು​ವು​ದಕ್ಕೆ ಹಾಡು ಬಾಕಿ ಉಳಿ​ಸಿ​ಕೊಂಡಿ​ದ್ದಾರೆ.

ಇದೀಗ ಇದರ ಅಂತಿಮ ಕೆಲಸ ಕಾರ್ಯಗಳು ನಡೆಯುತ್ತಿವೆ. ಈ ತಿಂಗಳ ಕಡೇಯ ಹೊತ್ತಿಗೆಲ್ಲ ಇದರ ಎಲ್ಲ ಕೆಲಸವೂ ಸಮಾಪ್ತಿಯಾಗುತ್ತದೆ. ಆದ್ದರಿಂದಲೇ ಕನ್ನಡ ರಾಜ್ಯೋತ್ಸವದ ವೇಳೆಗೆ ಒಡೆಯನ ದರ್ಶನ ಮಾಡಿಸಲು ಚಿತ್ರತಂಡ ತಯಾರಾಗಿರುವಂತಿದೆ. ಎಲ್ಲವೂ ಅಂದುಕೊಂಡಂತೆಯೇ ಆದರೆ ಒಡೆಯ ಚಿತ್ರ ನವೆಂಬರ್ ಮೊದಲ ವಾರದಲ್ಲಿ ತೆರೆಗಾಣೋ ಸಾಧ್ಯತೆಗಳಿವೆ.

‘ಒಡೆಯ’ ಚಿತ್ರವು ಸಹೋದರರ ಕಥಾವಸ್ತುವನ್ನು ಒಳಗೊಂಡಿದ್ದು ನಾಯಕ ದರ್ಶನ್’ಗೆ ಚಿತ್ರದಲ್ಲಿ ನಾಲ್ವರು ತಮ್ಮಂದಿರುವ ಇರಲಿದ್ದಾರೆ.ಈಗ ಆ ಪಾತ್ರಗಳಿಗೆ ಕಲಾವಿದರ ಆಯ್ಕೆ ಅಂತಿಮವಾಗಿದ್ದು ಯಶಸ್, ಪಂಕಜ್ ನಾರಾಯಣ್, ನಿರಂಜನ್ ಹಾಗೂ ಸಮರ್ಥ್ ದರ್ಶನ್ ತಮ್ಮಂದಿರಾಗಿ ಕಾಣಿಸಿಕೊಳ್ಳಲಿದ್ದಾರೆ.

ಉಳಿದಂತೆ ದೇವರಾಜ್, ರವಿಶಂಕರ್, ಸಾಧುಕೋಕಿಲ, ಚಿಕ್ಕಣ್ಣ, ಚಿತ್ರಾಶೆಣೈ, ಶರತ್ ಲೋಹಿತಾಶ್ವ, ಅವಿನಾಶ್, ಸೇರಿದಂತೆ ಹಲವಾರು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಲಿದ್ದಾರೆ. ಇನ್ನು ‘ಒಡೆಯ’ ಚಿತ್ರವನ್ನು ಎಂ.ಡಿ.ಶ್ರೀಧರ್ ನಿರ್ದೇಶನ ಮಾಡುತ್ತಿದ್ದು ಇನ್ನು ‘ಒಡೆಯ’ ಚಿತ್ರವನ್ನು ಎಂ.ಡಿ.ಶ್ರೀಧರ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಲಿದ್ದಾರೆ.

ಈ ಸಿನಿಮಾ ತಮಿಳು ಸೂಪರ್ ಹಿಟ್ ಆಗಿದ್ದ ‘ವೀರಂ’ ಚಿತ್ರದ ಅಫೀಶಿಯಲ್ ರಿಮೇಕ್. ತಮಿಳಿನಲ್ಲಿ ಅಜಿತ್ ನಟಿಸಿದ್ದ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಳ್ಳಲಿದ್ದು ತಮ್ಮನ್ನಾಳ ಪಾತ್ರವನ್ನು ಕೊಡಗಿನ ಹುಡುಗಿ ರಾಘವಿ ಮಾಡುತ್ತಿದ್ದಾರೆ.. ಅಂದಹಾಗೆ ಇದಕ್ಕೂ ಮುಂಚೆ ವೀರಂ ಚಿತ್ರವನ್ನು ತೆಲುಗಿನ ಪವನ್ ಕಲ್ಯಾಣ್ ‘ಕಾಟಮರಾಯುಡು’ ಎಂಬ ಹೆಸರಿನಲ್ಲಿ ರಿಮೇಕ್ ಮಾಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top