fbpx
ಸಮಾಚಾರ

ಕನ್ನಡಿಗರಿಗೆ ಮತ್ತು ಕರ್ನಾಟಕಕ್ಕೆ ಕಿಂಚಿತ್ತೂ ಕಿಮ್ಮತ್ತು ಕೊಡದ ಹೊಸ ಡಿಸಿಎಂ ಅಶ್ವಥ್ ನಾರಾಯಣ್!

ನೂತನ ಸರ್ಕಾರದ ಉಪಮುಖ್ಯಮಂತ್ರಿ ಅಶ್ವತ್ ನಾರಾಯಣ ಅವರು ಕನ್ನಡಿಗರಿಗೆ ಮತ್ತು ಕರ್ನಾಟಕಕ್ಕೆ ಕಿಂಚಿತ್ತೂ ಕಿಮ್ಮತ್ತು ಕೊಡುತ್ತಿಲ್ಲ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ. ಇದಕ್ಕೆ ಕಾರಣವಾಗಿರುವುದು ಎಲಿವೇಟ್ ಮೋಸದ ವಿಚಾರ.

 

 

ರಾಜ್ಯದ ಐಟಿ ಕ್ಷೇತ್ರದಲ್ಲಿ ಯುವ ಉದ್ಯೋಗಿಗಳಿಗೆ ಉತ್ತೇಜನ ನೀಡಲು ರೂಪಿಸಿರುವ ಎಲಿವೇಟ್‌-100 ಯೋಜನೆಯಲ್ಲಿ ಕರ್ನಾಟಕದ ಯುವ ಉದ್ಯಮಿಗಳಿಗೆ ಅರ್ಹತೆ ಇದ್ದರೂ ಅನರ್ಹಗೊಳಿಸಿ ಹೊರ ರಾಜ್ಯದವರಿಗೆ ಮಣೆ ಎಸಗಲಾಗುತ್ತಿರುವ ಘೋರ ಅನ್ಯಾಯದ ವಿರುದ್ಧ ಕನ್ನಡಿಗರು ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಈ ವಿಚಾರವಾಗಿ ಸರ್ಕಾರ ಮತ್ತು ಸಚಿವರ ಗಮನಕ್ಕೆ ತಂದರೂ ಅದಕ್ಕೆ ಕಿಂಚಿತ್ತೂ ಕಿಮ್ಮತ್ತು ನೀಡುತ್ತಿಲ್ಲ ಎಂದು ಆರೋಪಿಸಲಾಗಿದೆ.

 

 

ಈ ಬಗ್ಗೆ ರಾಜ್ಯಸಭಾ ಸದ್ಯಸ ಜಿಸಿ ಚಂದ್ರಶೇಖರ್ ಪತ್ರವನ್ನು ಬರೆದಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲವಂತೆ. ಮಾಹಿತಿ ತಂತ್ರಜ್ಞಾನ ಇಲಾಖೆಯ ಸಚಿವ ಅಶ್ವತ್ ನಾರಾಯಣ ಅವರು ಈ ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಾಗಾಗಿ ಮಾಹಿತಿ ತಂತ್ರಜ್ಞಾನ ಇಲಾಖೆಯ ಸಚಿವ ಅಶ್ವತ್ ನಾರಾಯಣ ಅವರ ವಿರುದ್ಧ ಚಂದ್ರಶೇಖರ್ ಕಿಡಿಕಾರಿದ್ದಾರೆ.

“ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯಲ್ಲಿ ಕನ್ನಡಿಗರಿಗೆ ಆಗಿರುವ ಅನ್ಯಾಯದ ಬಗ್ಗೆ ನಾನು ಬರೆದ ಪತ್ರಕ್ಕೆ ಉತ್ತರ ಸಿಕ್ಕಿಲ್ಲ ಇದೆ ತೋರಿಸುತ್ತೆ ನಿಮ್ಮ ಸರ್ಕಾರ ಕನ್ನಡ / ಕನ್ನಡಿಗರ ವಿಷಯಕ್ಕೆ ಎಷ್ಟು ಬೆಲೆ ಕೊಡುತ್ತದೆಂದು #ElevateMosa ಇಂದ ಕನ್ನಡಿಗರಿಗೆ ನ್ಯಾಯ ಸಿಗೋವರೆಗೂ ನಾವು ಬಿಡುವುದಿಲ್ಲ” ಎಂದು ಚಂದ್ರಶೇಖರ್ ಅವರು ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏನಿದು ವಿವಾದ:
ರಾಜ್ಯದ ಎಲ್ಲೆಡೆ ಇರುವ ನವೋದ್ಯಮಗಳಿಗೆ ಸಮಗ್ರ ಉದ್ಯಮಶೀಲತೆಯ ವೇದಿಕೆ ಒದಗಿಸುವುದು ಜೈವಿಕ ತಂತ್ರಜ್ಞಾನ , ಮಾಹಿತಿ ತಂತ್ರಜ್ಞಾನ ಇಲಾಖೆಯ ‘ಎಲಿವೇಟ್‌’ ಕಾರ್ಯಕ್ರಮದ ಮೂಲ ಉದ್ದೇಶ. ಹೀಗಿದ್ದರೂ ಇದು ಕರ್ನಾಟಕದ ಉದ್ಯೋಗಿಗಳಿಗೆ ಈ ಅವಕಾಶವನ್ನು ಕಿತ್ತುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈವರೆಗೆ ‘ಎಲಿವೇಟ್‌’ ಕಾರ್ಯಕ್ರಮದ ಮೂಲಕ ₹62 ಕೋಟಿ ನಿಧಿ ನೆರವನ್ನು 264 ನವೋದ್ಯಮಗಳು ಪಡೆದಿವೆ ಅವುಗಳಲ್ಲಿ ಬಹುತೇಕವು ಹೊರರಾಜ್ಯದ ಕಂಪನಿಗಳೇ ಆಗಿವೆ.

ಕರ್ನಾಟಕದ ದುಡ್ಡು ಹೊರರಾಜ್ಯಗಳ ಜಾತ್ರೆ ಎನ್ನುವ ಹಾಗೆ ಎಲಿವೇಟ್ ಕಾರ್ಯಕ್ರಮ ರೂಪುಗೊಂಡಿದೆ , ದೇಶದ ಯಾವುದೇ ರಾಜ್ಯದಲ್ಲಿ ನವೋದ್ಯಮಗಳಿಗೆ ಫಂಡಿಂಗ್ ನೀಡುವ ಪ್ರಕ್ರಿಯೆ ಜಾರಿಯಿಲ್ಲ ಆದ್ರೆ ಹೊರರಾಜ್ಯದ ಯಾವುದೇ ಕಂಪನಿಗಳು ಬಂದು ಇಲ್ಲಿ ನೊಂದಣಿ ಮಾಡಿಸಿ ‘ಎಲಿವೇಟ್‌’ ಕಾರ್ಯಕ್ರಮದ ಮೂಲಕ ತಮ್ಮ ಕಂಪನಿಗಳಿಗೆ ಹಣ ಪಡೆಯಬಹುದಾಗಿದೆ. ಈ ಅನ್ಯಾಯ ತಕ್ಷಣ ಸರಿಪಡಿಸಬೇಕೆಂದು ‘ಸಾಮಾನ್ಯ ಕನ್ನಡಿಗ’ ತಂಡದ ನೇತೃತ್ವದಲ್ಲಿ ಟ್ವಿಟ್ಟರ್ ಅಭಿಯಾನ ಆರಂಭವಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top