fbpx
ಸಮಾಚಾರ

“ರಸ್ತೆ ಚೆನ್ನಾಗಿದ್ದರೆ ಅಪಘಾತ ಜಾಸ್ತಿ, ಹಾಳಾದ ರಸ್ತೆಯಿಂದ ಅಪಘಾತ ಕಡಿಮೆ” ಡಿಸಿಎಂ ಕಾರಜೋಳ ವಿಚಿತ್ರ ವಿಶ್ಲೇಷಣೆ!

ಇತ್ತೀಚೆಗಷ್ಟೇ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಿಜೆಪಿ ಹಿರಿಯ ನಾಯಕ ಗೋವಿಂದ ಕಾರಜೋಳ ಅವರು, ರಸ್ತೆಗಳು ಉತ್ತಮವಾಗಿರುವುದರಿಂದಲೇ ಹೆಚ್ಚು ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ ಎಂದು ಹೇಳುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದಾರೆ.

‘ಪ್ರತಿ ವರ್ಷ ರಾಜ್ಯದಲ್ಲಿ 10,000 ಅಪಘಾತಗಳು ಆಗುತ್ತವೆ, ಮಾಧ್ಯಮಗಳು ರಸ್ತೆ ಸರಿ ಇಲ್ಲ ಎಂದು ಸರ್ಕಾರವನ್ನು ದೂಷಿಸುತ್ತವೆ. ಆದರೆ, ಒಳ್ಳೆಯ ರಸ್ತೆಗಳಿಂದಲೇ ಅಪಘಾತ ಸಂಭವಿಸುತ್ತೆ ಅನ್ನೋದು ನನ್ನ ನಂಬಿಕೆ.. ರಸ್ತೆಗಳನ್ನು ಸರಿಪಡಿಸಿದ ಮೇಲೆ ದಂಡ ವಿಧಿಸಿ ಎಂಬ ಮಾತನ್ನು ಒಪ್ಪಲು ಸಾಧ್ಯವಿಲ್ಲ. ರಸ್ತೆಗಳು ಅಭಿವೃದ್ಧಿಯಾಗಿಯೇ ಅಪಘಾತಗಳು ಹೆಚ್ಚಿವೆ. ಹೆಚ್ಚು ವೇಗವಾಗಿ ವಾಹನ ಚಲಾಯಿಸುತ್ತಿರುವುದೇ ಅಪಘಾತಕ್ಕೆ ಕಾರಣವಾಗುತ್ತಿದೆ” ಎಂದು ತಿಳಿಸಿದ್ದಾರೆ.

ಅಂತೆಯೇ ಸಂಚಾರ ನಿಯಮ ಉಲ್ಲಂಘನೆಯ ದಂಡದ ಪ್ರಮಾಣವನ್ನು ಏರಿಕೆ ಮಾಡಿದ್ದಕ್ಕೆ ವೈಯಕ್ತಿಕವಾಗಿ ನನ್ನ ಬೆಂಬಲವಿಲ್ಲ ಎಂದು ಹೇಳಿದ ಗೋವಿಂದ ಕಾರಜೋಳ ಅವರು “ಗುಜರಾತ್ ನಲ್ಲಿ ದಂಡದ ಮೊತ್ತ ವಿನಾಯಿತಿಯಂತೆ ಇಲ್ಲೂ ಅನ್ವಯಿಸಲು ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ದುಬಾರಿ ದಂಡಕ್ಕೆ ನನ್ನ ಸಹಮತವೂ ಇಲ್ಲ, ನಾನೂ ವಿರೋಧಿಸುತ್ತೇನೆ” ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top