fbpx
ಸಮಾಚಾರ

ಕನ್ನಡಿಗರಿಗೆ ಕೊಟ್ಟ ಮಾತನ್ನು ಮರೆತ ನಿರ್ಮಲ ಸೀತಾರಾಮನ್ ವಿರುದ್ಧ ಜಿಸಿ ಚಂದ್ರಶೇಖರ್ ಕಿಡಿ.

#IBPSmosa ಹೊಸ Notification ಪ್ರಕಾರ ಪರೀಕ್ಷೆ ಹಿಂದಿ ಮತ್ತು ಇಂಗ್ಲೀಶ್ ನಲ್ಲಿ ಮಾತ್ರ ಬ್ಯಾಂಕಿಂಗ್ ಪರೀಕ್ಷೆ, ಕನ್ನಡದಲ್ಲಿ ಇರುತ್ತೆ ಅಂತ ನಿರ್ಮಲ ಸೀತಾರಾಮನ್ ರವರು ಸದನದಲ್ಲಿ ಕೊಟ್ಟ ಮಾತು ತಪ್ಪಿದ್ದಾರೆ.ಕರ್ನಾಟಕದಲ್ಲಿ 950+ ಖಾಲಿ ಹುದ್ದೆಗಳಿವೆ, ಈ ರೀತಿಯಲ್ಲಿ ಪರೀಕ್ಷೆ ನಡೆಸೋದ್ರಿಂದ ಕರ್ನಾಟಕದವರಿಗೆ 20-30 ಕೆಲಸ ಸಿಕ್ಕಿದ್ರೆ ಹೆಚ್ಚು. ನಮ್ಮ ನಾಡಿನ ಸಮಸ್ಯೆಗಳಿಗೆ ನಾವೆಲ್ಲಾ ಕನ್ನಡಿಗರು ಧ್ವನಿಯೆತ್ತೋಣ ಇದು ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ, ಶ್ರೀಮತಿ ನಿರ್ಮಲ ಸೀತಾರಾಮನ್ ರವರು 13 ಭಾಷೆಗಳಲ್ಲಿ #IBPS ಪರೀಕ್ಷೆಯನ್ನು ಸದನದಲ್ಲಿ ಘೋಷಿಸಿದ್ದರು ಜಾರಿಯಾಗದ ಆದೇಶದಿಂದ ಮಾತು ತಪ್ಪಿದ್ದಾರೆ ” ಎಂದು ಸಂಸದ ಜಿಸಿ ಚಂದ್ರಶೇಖರ್ ಕೇಂದ್ರ ಸಚಿವೆ ನಿರ್ಮಲ ಸೀತಾರಾಮನ್ ವಿರುದ್ಧ ಕಿಡಿಕಾರಿದ್ದಾರೆ.

 

 

ಪರೀಕ್ಷೆ ಬರೆಯಲು ಈ ಮೊದಲು ಇದ್ದ ಸ್ಥಳೀಯ ( Domicile ) ನಿಯಮವನ್ನು ವಾಪಸ್ ತರಲಾಗಿಲ್ಲ. ಇದೀಗ ಮಾತೃ ಭಾಷೆಯಲ್ಲಿ ಪರೀಕ್ಷೆಯನ್ನು ಬರೆಯಲು ಅನುಮತಿ ಕೊಡದೆ ಇರುವುದು ಕೇಂದ್ರ ಸರ್ಕಾರದ ಮಲತಾಯಿ ಧೋರಣಿಗೆ ಸಾಕ್ಷಿ. ಕೇಂದ್ರದ ಈ ನೀತಿಯನ್ನು ವಿರೋಧಿಸುವುದಾಗಿ ಜಿಸಿ ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ.

 

 

ಬ್ಯಾಂಕುಗಳ ಹುದ್ದೆಗಳ ನೇಮಕಾತಿಗಾಗಿ ನಡೆಯುವ ಪರೀಕ್ಷೆಯು ಇನ್ನು ಮುಂದೆ ಕನ್ನಡದಲ್ಲಿ ನಡೆಯಲಿದೆ ಎಂದು ಖುಷಿಯಲ್ಲಿದ್ದ ಉದ್ಯೋಗಾಕಾಂಕ್ಷಿಗಳಿಗೆ ಬ್ಯಾಂಕ್‌ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್‌) ಬ್ಯಾಡ್ ನ್ಯೂಸ್ ಕೊಟ್ಟಿದೆ. ರಾಷ್ಟ್ರೀಕೃತ ಬ್ಯಾಂಕ್ ಗಳ ಗುಮಾಸ್ತ ಹುದ್ದೆಗಳ ನೇಮಕಾತಿಗೆ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ ( ಐಬಿಪಿಎಸ್ ) ಗುರುವಾರ ಅರ್ಜಿ ಆಹ್ವಾನಿಸಿದ್ದು, ಅಭ್ಯರ್ಥಿಗಳು ಇಂಗ್ಲೀಷ್ ಅಥವಾ ಹಿಂದಿ ಭಾಷೆಗಳಲ್ಲಿ ಮಾತ್ರ ಈ ಪರೀಕ್ಷೆಗಳನ್ನು ಬರೆಯಬಹುದೆಂದು ಸೂಚಿಸಿದೆ.

 

 

ಕರ್ನಾಟಕದಲ್ಲಿ 953 ಹುದ್ದೆಗಳು ಖಾಲಿಯಿದ್ದು, ಆನ್‌ಲೈನ್‌ನಲ್ಲಿ ಪೂರ್ವಭಾವಿ ಮತ್ತು ಮುಖ್ಯಪರೀಕ್ಷೆಗಳನ್ನು ನಡೆಸಲಾಗುತ್ತದೆ. ಇದರಲ್ಲಿ ಅಭ್ಯರ್ಥಿಗಳು ಸ್ಥಳೀಯ ಭಾಷೆ ತಿಳಿದಿರಬೇಕು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆಯಷ್ಟೇ. ಭಾಷೆ ತಿಳಿದಿರುವುದು ಕಡ್ಡಾಯ ಎಂದು ದೃಢಪಡಿಸುವುದಕ್ಕೆ ಯಾವುದೇ ಮಾನದಂಡಗಳನ್ನು ನಿಗದಿಪಡಿಸಿಲ್ಲ. ಮುಖ್ಯವಾಗಿ ಈ ಭಾಷೆಯನ್ನು ಬರೆಯಲು ಕನ್ನಡದಲ್ಲಿ ಅವಕಾಶವನ್ನೇ ನೀಡಿಲ್ಲ. ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ಮಾತ್ರ ಬರೆಯಬಹುದಾಗಿದೆ.

 

 

ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸದ ಕಾರಣ ರಾಜ್ಯದ ಯುವಕರು ಅವಕಾಶ ಕಳೆದುಕೊಳ್ಳಲಿದ್ದಾರೆ. ರಾಜ್ಯದಲ್ಲಿರುವ ಸಾರ್ವಜನಿಕ ವಲಯದ ಬ್ಯಾಂಕ್​ಗಳಲ್ಲಿ ಅನ್ಯ ರಾಜ್ಯದವರೇ ತುಂಬಿಕೊಂಡಿದ್ದಾರೆ. ಅನ್ಯ ರಾಜ್ಯದ ಸಿಬ್ಬಂದಿಗೆ ಕನ್ನಡ ಬಾರದ ಹಿನ್ನೆಲೆಯಲ್ಲಿ ಗ್ರಾಹಕರು ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ಕೇಂದ್ರ ಸರ್ಕಾರ ಕನ್ನಡದಲ್ಲೂ ಪರೀಕ್ಷೆ ಎದುರಿಸಲು ಅವಕಾಶ ಕಲ್ಪಿಸಬೇಕು ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

 

 

ಕಳೆದ ತಿಂಗಳು ಐಬಿಪಿಎಸ್‌ ಪರೀಕ್ಷೆಗಳನ್ನು ಆಯಾ ಪ್ರಾದೇಶಿಕ ಭಾಷೆಗಳಲ್ಲಿ ನಡೆಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಸದನದಲ್ಲಿ ಘೋಷಿಸಿದ್ದರು. ಈ ವರ್ಷದಿಂದ ಆರ್‌ಆರ್‌ಬಿಗಳಲ್ಲಿನ ಹುದ್ದೆಗಳಿಗೆ ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ನಡೆಸಲಿದೆ ಎಂದು ಜುಲೈ 4ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಗುರುವಾರ ಪ್ರಕಟಿಸಿದ್ದರು. ಆದರೆ ಈಗ ತಮ್ಮ ವರಸೆ ಬದಲಿಸಿದ್ದು ಕನ್ನಡಿಗರ ಕೋಪಕ್ಕೆ ಕಾರಣರಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top