fbpx
ಸಮಾಚಾರ

ಹೆಲ್ಮೆಟ್ ಹಾಳಾಗೋಗ್ಲಿ,, ಚಪ್ಪಲಿ, ಲುಂಗಿ, ಬನಿಯನ್ ಧರಿಸಿ ಗಾಡಿ ಓಡಿಸಿದರೂ ಬೀಳುತ್ತೆ ದಂಡ!

ದೇಶದಲ್ಲಿ ನೂತನ ಮೋಟಾರು ವಾಹನ ಕಾಯಿದೆ ಜಾರಿಗೆ ಬಂದ ಬಳಿಕ ಸಂಚಾರ ನಿಯಮ ಉಲ್ಲಂಘಿಸುವವರಿಗೆ ವಿಧಿಸುವ ದಂಡದ ಪ್ರಮಾಣ ಭಾರಿ ಏರಿಕೆಯಾಗಿದ್ದು, ಇದಕ್ಕೆ ಭಾರಿ ವಿರೋಧ ಕೂಡ ವ್ಯಕ್ತವಾಗುತ್ತಿದೆ. ಈ ಮದ್ಯೆ ಹೊಸ ಸುದ್ದಿಯೊಂದು ಹರಿದಾಡುತ್ತಿದ್ದು, ದೇಶಾದ್ಯಂತ ಸೆಪ್ಟೆಂಬರ್ 1ರಿಂದ ಜಾರಿಗೆ ಬಂದಿರುವ ಮೋಟಾರು ವಾಹನ ತಿದ್ದುಪಡಿ ಕಾಯಿದೆ ಪ್ರಕಾರ ದ್ವಿಚಕ್ರ ವಾಹನ ಸವಾರರು ಚಪ್ಪಲಿ ಅಥವಾ ಸ್ಯಾಂಡಲ್ಸ್ ಹಾಕಿ ಗಾಡಿ ಓಡಿಸಿದರೂ 1,000ರೂ ದಂಡ ವಿಧಿಸಲು ಅವಕಾಶವಿದೆ ಎನ್ನಲಾಗುತ್ತಿದೆ.

ಹೌದು, ಸವಾರರು ಸ್ಲಿಪ್ಪರ್, ಹವಾಯಿ ಚಪ್ಪಲ್ ಹಾಕಿಕೊಂಡು ಗೇರ್ ಹೊಂದಿರುವ ದ್ವಿಚಕ್ರ ವಾಹನ ಓಡಿಸುವಂತಿಲ್ಲ. ಒಂದು ವೇಳೆ ಈ ನಿಯಮವನ್ನು ಉಲ್ಲಂಘಿಸಿದರೆ 1,000 ರೂ ದಂಡ ತೆರಬೇಕಾಗಿರುತ್ತದೆ. ಈ ತಪ್ಪು ಮರುಕಳಿಸಿದರೆ ದಂಡದ ಜೊತೆಗೆ 15 ದಿನಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

ಸ್ಲಿಪ್ಪರ್, ಹವಾಯಿ ಚಪ್ಪಲಿ ಹಾಕಿದರೆ ದ್ವಿಚಕ್ರ ವಾಹನದ ಗೇರ್ ಬದಲಾಯಿಸಲು, , ಪಾರ್ಕಿಂಗ್‍ನಿಂದ ವಾಹನ ತೆಗೆಯಲು ಸಮಸ್ಯೆ ಆಗಲಿದೆ. ಜೊತೆಗೆ ಅಪಘಾತದವಾದಾಗ ಕಾಲಿಗೆ ಗಾಯವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಸವಾರರು ಶೂ ಧರಿಸಿದರೆ ಒಳ್ಳೆಯದು ಎಂಬುದು ನಿಯಮದ ಉದ್ದೇಶವಾಗಿದೆ.

ಲುಂಗಿ ಉಟ್ಟಿದ್ದಕ್ಕೆ 2 ಸಾವಿರ ರೂ. ದಂಡ:
ಮೋಟಾರು ಕಾಯ್ದೆ ಪ್ರಕಾರ ಲಘು ವಾಹನಗಳ ಚಾಲಕರು ಲುಂಗಿ, ಬರ್ಮುಡ, ಟವೆಲ್​ಗಳನ್ನು ಧರಿಸುವಂತಿಲ್ಲ. ಉದ್ದನೆಯ ಪ್ಯಾಂಟ್, ಮೈಮುಚ್ಚುವ ಶರ್ಟ್​, ಶೂಗಳನ್ನು ಧರಿಸಿಯೇ ಡ್ರೈವರ್ ಸೀಟ್​ನಲ್ಲಿ ಕೂರಬೇಕು.

ಇಂಥದ್ದೊಂದು ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಟ್ರಕ್ ಓಡಿಸುತ್ತಿದ್ದ ಚಾಲಕನ ಬಳಿ ತನ್ನ ವಾಹನಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳೂ ಇದ್ದರೂ ಆತನಿಗೆ ಟ್ರಾಫಿಕ್ ಪೊಲೀಸರು 2 ಸಾವಿರ ರೂ. ದಂಡ ವಿಧಿಸಿದ್ದಾರೆ. ಇದಕ್ಕೆ ಕಾರಣ ಆತ ಧರಿಸಿದ್ದ ಲುಂಗಿ! ಚಾಲಕ ಡ್ರೆಸ್​ಕೋಡ್​ ಅನುಕರಿಸದೆ ಲುಂಗಿ- ಧರಿಸಿ ಟ್ರಕ್ ಓಡಿಸುತ್ತಿದ್ದ ಎಂಬ ಕಾರಣಕ್ಕೆ ಉತ್ತರ ಪ್ರದೇಶದ ಪೊಲೀಸರು 2 ಸಾವಿರ ರೂ. ದಂಡ ವಿಧಿಸಿದ್ದಾರೆ.

ಮೋಟಾರ್ ವಾಹನ ಕಾಯ್ದೆಯಡಿ ಲಾರಿ, ಟ್ರಕ್, ಟೆಂಪೋದಂತಹ ಎಲ್ಲ ಕಮರ್ಷಿಯಲ್ ಚಾಲಕರು ಹಾಗೂ ಸಹಾಯಕರು ಡ್ರೆಸ್​ಕೋಡ್​ ಅನುಕರಿಸಬೇಕು. ಚಾಲಕರು ಉದ್ದನೆಯ ಪ್ಯಾಂಟ್ ಮತ್ತು ಮೈ ಮುಚ್ಚುವ ಶರ್ಟ್​ ಧರಿಸಿರಬೇಕು. ಹಾಗೇ ಶೂಗಳನ್ನು ಧರಿಸಿರಬೇಕು. ಶಾಲಾ ವಾಹನಗಳ ಚಾಲಕರು ಯೂನಿಫಾರಂ ಧರಿಸಬೇಕು. ಆಟೋ ಡ್ರೈವರ್​ಗಳು ಕೂಡ ಖಾಕಿ ಬಣ್ಣದ ಕೋಟ್ ಧರಿಸಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top