fbpx
ಸಮಾಚಾರ

ಮದುವೆಯಾಗೋದು ಯಾವಾಗ ಅಂತ ಹೇಳಿದ ಗರ್ಭಿಣಿ ಆಮಿ ಜಾಕ್ಸನ್.

ಬ್ರಿಟಿಷ್ ಬ್ಯೂಟಿ ಆ್ಯಮಿ ಜಾಕ್ಸನ್ ಅವರು ತಮ್ಮ ಪ್ರೆಗ್ನಿಂಸಿಯನ್ನು ತುಂಬಾ ಎಂಜಾಯ್ ಮಾಡುತ್ತಿದ್ದಾರೆ. ಈ ನಡುವೆ ತುಂಬು ಗರ್ಭಿಣಿಯಾಗಿರುವ ದಿ ವಿಲನ್‌ ಸಿನಿಮಾದ ನಟಿ ಆ್ಯಮಿ ಜಾಕ್ಸನ್‌ ತಾವು ಮುಂದಿನ ವರ್ಷ ಮದುವೆಯಾಗಲಿದ್ದೇನೆ ಎಂದಿದ್ದಾರೆ.

ಇತ್ತೀಚೆಗೆ ಆ್ಯಮಿ ಜಾಕ್ಸನ್ ಕಪ್ಪು ಬಣ್ಣದ ಹೈ ಸ್ಲಿಟ್ ಗೌನ್ ಧರಿಸಿ ಅದಕ್ಕೆ ಹೈ ಹೀಲ್ಸ್ ಹಾಕಿ ಮೆಟರ್ನಿಟಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಅಲ್ಲದೆ ಈ ಫೋಟೋ ಹಾಗೂ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಾಕಿ ಅದಕ್ಕೆ “ದಿ ಲಿಟಲ್ ಮ್ಯಾನ್ ಅಟ್ 33 ವೀಕ್ಸ್” ಎಂದು ಬರೆದುಕೊಂಡಿದ್ದಾರೆ. ಈ ವೇಳೆ ತಾವು ಸದ್ಯಕ್ಕೆ ಮದುವೆಯಾಗುವುದಿಲ್ಲ, ಮುಂದಿನ ವರ್ಷವೇ ದಾಂಪತ್ಯ ಜೀವನಕ್ಕೆ ಕಾಲಿಡುವುದಾಗಿ ಹೇಳಿದ್ದಾರೆ.

ಬ್ರಿಟನ್ ಮದರ್ಸ್ ಡೇಯಂದು ಆ್ಯಮಿ ಜಾಕ್ಸನ್ ಗೆಳೆಯನೊಂದಿಗೆ ಕುಳಿತ ಬೇಬಿ ಬಂಪ್ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಾಕಿಕೊಳ್ಳುವ ಮೂಲಕ ತಾಯಿ ಆಗುತ್ತಿರುವ ವಿಷಯವನ್ನು ತಿಳಿಸಿದ್ದರು. ಇದೀಗಾ ತನ್ನ ಮದುವೆಯ ಸುದ್ದಿಯನ್ನು ಕೂಡಾ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ. ಅಲ್ಲದೇ ಸ್ಕ್ಯಾನಿಂಗ್​ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಆ್ಯಮಿ ಹಂಚಿಕೊಂಡಿದ್ದರು.

ಮೇ ೫ರಂದು ಲಂಡನ್‌ನಲ್ಲಿರುವ ಅವರ ಮನೆಯಲ್ಲೇ ತಮ್ಮ ಪ್ರಿಯಕರ ಜಾರ್ಜ್ ಪನಯೌಟು ಜೊತೆ ಅಧಿಕೃತವಾಗಿ ನಿಶ್ಚಿತಾರ್ಥ ಮಾಡಿಕೊಂಡಿರುವ ಆಮಿ ಜಾಕ್ಸನ್, ೨೦೨೦ ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಅದಕ್ಕೂ ಮುಂಚೆ ಮಗುವನ್ನು ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top