fbpx
ಸಮಾಚಾರ

“ಮುಸ್ಲಿಮರ ಬಲಿ ಮತ ಕೇಳುವವರು ಹಿಜಡಾಗಳು” ನಾಲಿಗೆ ಹರಿಬಿಟ್ಟ ಸಚಿವ ಈಶ್ವರಪ್ಪ

ಮುಸ್ಲಿಮರ ಬಲಿ ವೋಟ್ ಕೇಳಿ ಅವರ ಮತಗಳನ್ನು ಪಡೆದು ಗೆಲುವು ಸಾಧಿಸುವ ಶಾಸಕರು ಹಿಜಡಾಗಳು ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಖಾತೆ ಸಚಿವ ಕೆ.ಎಸ್. ಈಶ್ವರಪ್ಪ ವಿವಾದಿತ ಹೇಳಿಕೆ ನೀಡಿದ್ದಾರೆ.

ಶ್ರೀರಾಮಸೇನೆಯ ಆಯೋಜನೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಈಶ್ವರಪ್ಪ ” ಕಾಂಗ್ರೆಸ್, ಜೆಡಿಎಸ್ ಶಾಸಕರು ಬಿಜೆಪಿಗೆ ಬರಲು ಸಿದ್ಧರಿದ್ದಾರೆ. ನಮಗೂ ಬಿಜೆಪಿಗೆ ಬರಬೇಕೆಂದು ಆಸೆ ಇದೆ. ಆದ್ರೆ ನಮ್ಮ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ 50 ಸಾವಿರ ವೋಟ್ ಗಳಿವೆ. ಒಂದು ವೇಳೆ ಬಿಜೆಪಿಗೆ ಬಂದ್ರೆ ಆ ಎಲ್ಲ ಮತಗಳನ್ನು ಕಳೆದುಕೊಳ್ಳುತ್ತೇವೆ ಎನ್ನುತ್ತಾರೆ. ಇದೊಂದು ಹಿಜಡಾತನ, ಅಲ್ಲದೆ, ಅವರೆಲ್ಲರೂ ಹಿಜಡಾಗಳು, ಹೀಗಾಗಿಯೇ ಬಿಜೆಪಿ ಸೇರಿಲ್ಲ. ”

“ನನ್ನ ಕ್ಷೇತ್ರದಲ್ಲಿ 55 ರಿಂದ 60 ಸಾವಿರ ಮುಸ್ಲಿಂರ ವೋಟ್ ಗಳಿವೆ. ಇದೂವರೆಗೂ ಒಬ್ಬ ಮುಸ್ಲಿಮನಿಗೂ ನಮಸ್ಕಾರ ಹೊಡೆದು ವೋಟ್ ಕೇಳಿಲ್ಲ. ಆದ್ರೂ 47 ಸಾವಿರ ಮತಗಳ ಅಂತರದಿಂದ ಗೆದ್ದಿದ್ದೇನೆ. ದೇಶಭಕ್ತರು ನನಗೆ ವೋಟ್ ಮಾಡಿ ಗೆಲ್ಲಿಸಿದ್ದಾರೆ. ಪಾಕಿಸ್ತಾನದ ಪರ ಇರುವವರು ನಮಗೆ ವೋಟ್ ಹಾಕುವುದಿಲ್ಲ” ಎಂದು ಹೇಳಿದರು..

ಸಚಿವ ಈಶ್ವರಪ್ಪ ಅವರ ಈ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top