fbpx
ಸಮಾಚಾರ

ಟಿಕ್ ಟಾಕ್ ಮೋಹಕ್ಕೆ ಬಾಲಕಿ ಬಲಿ: ತಾಯಿ ಮೊಬೈಲ್ ಕೊಡಲಿಲ್ಲ ಎಂದು ಆತ್ಮಹತ್ಯೆ!

ಟಿಕ್ ಟಾಕ್ ವಿಡಿಯೋಗಳು ಈಗಾಗಲೇ ಅನೇಕ ಜೀವಗಳನ್ನು ಬಲಿ ಪಡೆದುಕೊಂಡಿರುವ ನಿದರ್ಶನಗಳು ನಮ್ಮ ಮುಂದೆ ಇದ್ದು, ಇದೀಗ ಟಿಕ್ ಟಾಕ್ ಮೋಹಕ್ಕೆ ಹತ್ತನೇ ತರಗತಿ ಬಾಲಕಿಯೊಬ್ಬಳು ಬಲಿಯಾಗಿದ್ದಾಳೆ. ಮೊಬೈಲ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಲಿಕಾನ್ ಸಿಟಿಯ ಹನುಮಂತನಗರದಲ್ಲಿ ನಡೆದಿದೆ.

ಪ್ರಿಯಾಂಕಾ (16) ಎಂಬಾಕೆಯೇ ಮೊಬೈಲ್ ಹುಚ್ಚಿಗೆ ಬಿದ್ದು, ಜೀವಕ್ಕೆ ಕುತ್ತು ತಂದುಕೊಂಡ ಬಾಲಕಿ. ಪ್ರಿಯಾಂಕಾ ಸಂಜೆ ಮೊಬೈಲ್​ ತೆಗೆದುಕೊಂಡು ಸ್ನೇಹಿತೆ ಮನೆಗೆ ಹೋಗಲು ಅಣಿಯಾಗಿದ್ದಳು. ಈ ವೇಳೆ ಮೊಬೈಲ್ ತೆಗೆದುಕೊಂಡು ಹೋಗದಂತೆ ತಾಯಿ ಬುದ್ದಿ ಹೇಳಿ, ಮೊಬೈಲ್​ ಕಿತ್ತಿಟ್ಟುಕೊಂಡಿದ್ದಾರೆ. ಇದೇ ವಿಚಾರಕ್ಕೆ ತಾಯಿಯೊಂದಿಗೆ ಮಗಳು ಸಣ್ಣ ಜಗಳ ಮಾಡಿಕೊಂಡಿದ್ದಾರೆ.

ಇದರಿಂದ ಕೋಪಗೊಂಡ ಪ್ರಿಯಾಂಕಾ ಸ್ನೇಹಿತೆ ಮನೆಗೆ ಹೋಗದೆ ತನ್ನ ಕೋಣೆಗೆ ಹೋಗಿದ್ದಾಳೆ. ಆಗ ತಾಯಿ ತಾನು ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿ ಹೋಗಿ ಬರುವಷ್ಟರಲ್ಲಿ ಪ್ರಿಯಾಂಕಾ ನೇಣಿಗೆ ಶರಣಾಗಿದ್ದಾಳೆ. ಈ ಸಂಬಂಧ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top