fbpx
ಸಮಾಚಾರ

ಪ್ರಪಂಚದಾದ್ಯಂತ ಟ್ರೆಂಡ್ ಆಯ್ತು #StopHindiImposition

ಸೆಪ್ಟೆಂಬರ್ 14 ಈ ದಿನ ಹಿಂದಿ ಭಾಷೆಯನ್ನು ಭಾರತದ ಆಡಳಿತವೆಂಬ ಸಿಂಹಾಸನದ ಮೇಲೆ ಕೂರಿಸಿ ಉಳಿದೆಲ್ಲಾ ಭಾಷೆಗಳು ಹಿಂದಿ ಭಾಷೆಗಿಂತ ಕಡಿಮೆ ಸ್ಥಾನಕ್ಕೆ ಸೀಮಿತಗೊಳಿಸಿದ ದಿನ, ಹಿಂದಿ ಎಂದರೆ ಭಾರತದ ರಾಷ್ಟ್ರಭಾಷೆ ಎನ್ನುವ ಸುಳ್ಳಿನ ಕಟ್ಟಡವನ್ನು ಕಟ್ಟಲು ಅಡಿಪಾಯ ಹಾಕಿದ ದಿನ. ಇದಕ್ಕೆ ಪ್ರತಿವರ್ಷದಂತೆ ಈ ವರ್ಷವೂ ವಿರೋಧ ಕೇಳಿಬಂದಿದೆ.

 

 

ಕೇಂದ್ರ ಸರ್ಕಾರವು ಹಿಂದಿ ಭಾಷೆಯ ಪ್ರಚಾರಕ್ಕಾಗಿ ಪ್ರತಿವರ್ಷ ಸೆಪ್ಟಂಬರ್ 14ರಂದು ಆಚರಿಸುವ ಹಿಂದಿ ಭಾಷಾ ದಿನಕ್ಕೆ ಕನ್ನಡಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ಭಾರತವು ಒಕ್ಕೂಟ ರಾಷ್ಟ್ರವಾಗಿದ್ದು ಇಲ್ಲಿ ಸಂವಿಧಾನ ಮಾನ್ಯತೆ ದೊರಕಿರುವ 22 ಭಾಷೆಗಳು ಸಹ ಭಾರತೀಯ ಭಾಷೆಗಳೆ. ಹಾಗಾಗಿ 22 ಭಾಷೆಗಳನ್ನು ಸೇರಿಸಿ ಭಾರತ ಭಾಷಾ ದಿವಸವನ್ನಾಗಿ ಆಚರಿಸಬೇಕೆಂದು ಕನ್ನಡಿಗರು ಆಗ್ರಹಿಸಿದ್ದಾರೆ.

ಟ್ವಿಟರ್‌ನಲ್ಲಿ #StopHindiImposition ಮತ್ತು #HindiImposition ಎಂಬ ಹ್ಯಾಶ್‌ಟ್ಯಾಗ್ ಪ್ರಪಂಚದಾದ್ಯಂತ ದೊಡ್ಡ ಮಟ್ಟದಲ್ಲಿ ಟ್ರೆಂಡ್ ಆಗಿದೆ. ನಮ್ಮ ಭಾಷೆ ನಮ್ಮ ಅಸ್ತಿತ್ವ. ಸಮಾನತೆಗಾಗಿ ಕೈ ಎತ್ತೋಣ ಎಂಬ ದನಿಯೊಂದಿಗೆ ನಡೆಸಿದ ಅಭಿಯಾನ ಕೂಡ ಯಶ್ವಿಯಾಗಿ ನಡೆದಿದೆ. “ಒಕ್ಕೂಟ ರಾಷ್ಟ್ರದ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಇಲ್ಲಿ ಹಿಂದಿ ಹೇರಿಕೆ ಸಹಿಸುವುದಿಲ್ಲ. ಹಾಗಾಗಿ ಟ್ವಿಟ್ಟರ್ ಮೂಲಕ ದೊಡ್ಡ ಮಟ್ಟದಲ್ಲಿ ವಿರೋಧ ದಾಖಲಿಸೋಣ” ಎಂದು ಹಲವು ಕನ್ನಡಪರ ಸಂಘಟನೆಗಳು ಮನವಿ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top