fbpx
ಸಮಾಚಾರ

ಜಗನ್ ರೀತಿ ಡಿಕೆಶಿ ಕೂಡ ಸ್ವಂತ ಪಕ್ಷವನ್ನು ಸ್ಥಾಪಿಸುತ್ತಾರಾ?

ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರ ಕಾನೂನು ತೊಂದರೆಗಳು ಸರಾಗವಾದ ನಂತರ ತಮ್ಮದೇ ಸ್ವಂತ ಪಕ್ಷವನ್ನು ರಚಿಸಬಹುದು ಎಂದು ಕರ್ನಾಟಕದ ರಾಜಕೀಯ ವಲಯಗಳ ಕೇಳಿಬರುತ್ತಿದೆ. ಅವರ ಬಂಧನದ ಬಗ್ಗೆ ಓಕ್ಕಲಿಗರಲ್ಲಿನ ಆಕ್ರೋಶ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಅವರಿಗೆ ಅರ್ಹವಾದ ಬಡ್ತಿ ನೀಡಿಲ್ಲ ಎಂಬ ವಿಚಾರ ಇಂಥಾ ಊಹಾಪೋಹಗಳಿಗೆ ಕಾರಣವಾಗಿದೆ.

ಶಿವಕುಮಾರ್ ಅವರು ಕಾಂಗ್ರೆಸ್‌ನಿಂದ ದೂರವಾಗುವ ಸಾಧ್ಯತೆಯ ಬಗ್ಗೆ ಚರ್ಚಿಸುತ್ತಿರುವುದು ಇದೇ ಮೊದಲಲ್ಲ. ಈ ಸಂದರ್ಭದಲ್ಲಿ ಇರುವ ಏಕೈಕ ವ್ಯತ್ಯಾಸವೆಂದರೆ ಅವರು ಒಕ್ಕಲಿಗ ಸಮುದಾಯದ ವರ್ಗಗಳಿಂದ ಗಳಿಸಿದ ಸಹಾನುಭೂತಿ. ED ಕ್ರಮವನ್ನು ವಿರೋಧಿಸಿ ಬುಧವಾರ ಸಾವಿರಾರು ಜನರು ಬೆಂಗಳೂರಿನಲ್ಲಿ ಮೆರವಣಿಗೆ ನಡೆಸಿದ್ದು ಇದಕ್ಕೆ ಕಣ್ಣ ಮುಂದಿರುವ ಸಾಕ್ಷಿ.

ಒಂದು ವೇಳೆ ಕಾಂಗ್ರೆಸ್ ಪಕ್ಷವು ಡಿಕಿಷಿ ಅವರಿಗೆ ಉನ್ನತ ಹುದ್ದೆ(ಕೆಪಿಸಿಸಿ ಅಧ್ಯಕ್ಷ) ನೀಡಲು ಒಪ್ಪದಿದ್ದರೆ, ಅವರು ಪಕ್ಷವನ್ನು ತೊರೆದು ಸ್ವಂತ ಪಕ್ಷ ಕಟ್ಟಲಿದ್ದಾರೆ ಎಂದು ಹೇಳಲಾಗಿದೆ. 2010 ರಲ್ಲಿ ಪಕ್ಷವನ್ನು ತೊರೆದು ವೈಎಸ್ಆರ್ ಕಾಂಗ್ರೆಸ್ ಅನ್ನು ಪ್ರಾರಂಭಿಸಿ ಈಗ ಆಂಧ್ರದ ಮುಖ್ಯಮಂತ್ರಿಯಾಗಿರುವ ವೈಎಸ್ ಜಗನ್ಮೋಹನ್ ರೆಡ್ಡಿ ಅವರ ಮಾರ್ಗವನ್ನು ಡಿಕೆಶಿ ಅನುಸರಿಸಬಹುದು.

“ಇತ್ತೀಚಿನ ಒಕ್ಕಲಿಗ ರ್ಯಾಲಿಯು ಭಾರಿ ರಾಜಕೀಯ ಮಹತ್ವವನ್ನು ಹೊಂದಿದೆ. ಇದು ರಾಜ್ಯದಲ್ಲಿ ಹೊಸ ರಾಜಕೀಯ ಬದಲಾವಣೆಯನ್ನು ತಿಳಿಸುತ್ತದೆ. ಶಿವಕುಮಾರ್ ಈ ಬದಲಾವಣೆಗಳ ಕೇಂದ್ರ ಸ್ಥಾನದಲ್ಲಿದ್ದಾರೆ” ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ ಬಿ ಸನೀರಪ್ಪ ಹೇಳಿದ್ದಾರೆ.

ಶಿವಕುಮಾರ್‌ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಹೇಗೆ ಪರಿಗಣಿಸುತ್ತದೆ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿರುತ್ತದೆ ಎಂದು ಡಿಕೆಶಿ ಆಪ್ತವಲಯದವರು ಹೇಳುತ್ತಾರೆ. “ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಬೇಕೆಂಬ ಆಕಾಂಕ್ಷೆ ಹೊಂದಿದ್ದಾರೆ. ಪಕ್ಷಕ್ಕೆ ಅವರ ನಿಷ್ಠೆಯ ಹೊರತಾಗಿಯೂ, ಅವರನ್ನು ದೀರ್ಘಕಾಲದಿಂದ ಅರ್ಹತೆಗೆ ತಕ್ಕ ಹುದ್ದೆ ನೀಡಲಾಗಿಲ್ಲ” ಎಂದು ಅವರ ಆಂತರಿಕ ವಲಯದ ಸದಸ್ಯರೊಬ್ಬರು ಹೇಳಿದರು.

ಸಮುದಾಯದ ಬೆಂಬಲ
ಶಿವಕುಮಾರ್ ಮತ್ತು ಜಗನ್ಮೋಹನ್ ಇಬ್ಬರೂ ಆಯಾ ಸಮುದಾಯಗಳಿಂದ ಬಲವಾದ ಬೆಂಬಲವನ್ನು ಹೊಂದಿದ್ದಾರೆ.

ಹಾಗೇನಾದರೂ ಶಿವಕುಮಾರ್ ಕಾಂಗ್ರೆಸ್ ತೊರೆದು ತಮ್ಮದೇ ಪಕ್ಷವನ್ನು ರಚಿಸಿ ಸಿಎಂ ಆಗುತ್ತೇನೆ ಎಂದು ಭಾವಿಸಿದರೆ ಅದು ಸುಲಭವಲ್ಲ. ಏಕೆಂದರೆ ಜಗನ್ ಗೆ ತನ್ನ ತಂದೆಯ ಜನಪ್ರಿಯತೆ ಹೆಚ್ಚು ಶಕ್ತಿ ತುಂಬಿತ್ತು. ಆದರೆ ಶಿವಕುಮಾರ್ ತನ್ನ ಸ್ವಂತ ಶಕ್ತಿಯ ಮೇಲೆ ಒಂದು ನೆಲೆಯನ್ನು ನಿರ್ಮಿಸಬೇಕಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top