fbpx
ಸಮಾಚಾರ

ಮೂರೇ ದಿನಕ್ಕೆ 50 ಕೋಟಿ ಕ್ಲಬ್ ಸೇರಿದ ಪೈಲ್ವಾನ್?

ಪ್ರೇಕ್ಷಕ ವಲಯದಲ್ಲಿ ಭಾರಿ ಕುತೂಹಲ ಹುಟ್ಟುಹಾಕಿದ್ದ ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್’ ಸಿನಿಮಾ ಗುರುವಾರ ಭರ್ಜರಿಯಾಗಿ ದೇಶ ವಿದೇಶಗಳಲ್ಲಿ ರಿಲೀಸ್ ಆಗಿದ್ದು, ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಎಲ್ಲಾ ವರ್ಗದ ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಕರ್ನಾಟಕ, ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳ ಮತ್ತು ಉತ್ತರ ಭಾರತದಲ್ಲಿ ಎಲ್ಲಾ ಕಡೆ ಅಬ್ಬರಿಸಿದೆ.

ಒಟ್ಟು ಐದು ಭಾಷೆಗಳಲ್ಲಿ ಮೊದಲ ದಿನ 18 ಕೋಟಿ, ಎರಡನೇ ದಿನ 14 ಕೋಟಿ ಮಾಡಿದ್ದ ಸಿನಿಮಾ, ಮೂರನೇ ದಿನ 15 ಕೋಟಿ ಗಳಿಸಿದೆ ಎಂದು ಖಾಸಗಿ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ.. ಕೇವಲ ಕರ್ನಾಟಕದಲ್ಲಿಯೇ ಸುಮಾರು 35 ಕೋಟಿಗೂ ಹೆಚ್ಚು ಸಂಪಾದಿಸಿದೆ ಎಂದು ಹೇಳಲಾಗಿದೆ. ಕನ್ನಡ ವರ್ಷನ್ ಚಿತ್ರದ ಶನಿವಾರದ ಗಳಿಕೆಯಲ್ಲಿ ಏರಿಕೆ ಕಂಡಿದ್ದು, ಭಾನುವಾರ ಕೂಡ ಹೆಚ್ಚಾಗುತ್ತದೆ ಎನ್ನುವ ನಿರೀಕ್ಷೆ ಇದೆ.

ಅಂದಹಾಗೆ ಕರ್ನಾಟಕದಲ್ಲಿ ಪೈಲ್ವಾನ್ ಸಿನಿಮಾ 400 ಚಿತ್ರಮಂದಿರಗಳಲ್ಲಿ, ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ 450ಕ್ಕೂ ಹೆಚ್ಚು ಚಿತ್ರಮಂದಿರ, ತಮಿಳುನಾಡಿನಲ್ಲಿ 150ಕ್ಕೂ ಹೆಚ್ಚು ಚಿತ್ರಮಂದಿರ ಹಾಗೂ ವಿಶ್ವಾದ್ಯಂತ 3000 ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆ ಆಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top