fbpx
ಸಮಾಚಾರ

“ಕರ್ನಾಟಕದಲ್ಲಿ ಹಿಂದಿಗೂ ಆದ್ಯತೆ ನೀಡಿ” ಶಿಕ್ಷಣ ಸಚಿವ ಸುರೇಶ್ ಕುಮಾರ್.

ರಾಜ್ಯದಲ್ಲಿ ಮಾತೃಭಾಷೆ ಕನ್ನಡದಂತೆಯೇ ರಾಷ್ಟ್ರೀಯ ಭಾಷೆ ಹಿಂದಿ ಕಲಿಕೆಗೂ ಅವಕಾಶ ನೀಡಬೇಕು, ಈ ನಿಟ್ಟಿನಲ್ಲಿ ಶಿಕ್ಷಕರು ಕಾರ್ಯಪ್ರವೃತ್ತರಾಗಬೇಕು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಹಿಂದಿ ಭಾಷಾ ಶಿಕ್ಷಕರ ಶೈಕ್ಷಣಿಕ ಸಮ್ಮೇಳನ ಹಾಗೂ ಹಿಂದಿ ದಿವಸ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ನಾನು ವಾಜಪೇಯಿ ಅವರ ಹಿಂದಿ ಭಾಷಣ ಕೇಳಿ ಹಿಂದಿ ಕಲಿತೆ, ಹಿಂದಿ ಭಾಷೆಯನ್ನ ಯಾರೂ ಕೂಡ ವಿರೋಧ ಮಾಡಬಾರದು. ನಾವು ಎಲ್ಲ ಭಾಷೆಗಳಿಗೂ ಗೌರವ ಕೊಡುತ್ತೇವೆ. ಹಿಂದಿ ಭಾಷೆಯನ್ನೂ ಕಲಿಯೋಣ. ಆದರೆ, ಅದು ಹೇರಿಕೆ ರೀತಿ ಆಗುವುದಿಲ್ಲ.”

“ವಿಶ್ವಸಂಸ್ಥೆಯಲ್ಲಿ ಹಿಂದಿ ಭಾಷೆಯಲ್ಲಿ ಮಾತನಾಡಿದ ಭಾರತದ ಮೊದಲ ಪ್ರಧಾನಿ ಅವರು. ಹೀಗಾಗಿ ರಾಜ್ಯದಲ್ಲಿ ನಮ್ಮ ಮಾತೃಭಾಷೆ ಕನ್ನಡಕ್ಕೆ ನೀಡಿರುವ ಪ್ರಾಮುಖ್ಯತೆಯಂತೆಯೇ ಹಿಂದಿ ಭಾಷೆ ಕಲಿಕೆಗೂ ಹೆಚ್ಚು ಪ್ರಾಮುಖ್ಯತೆ ನೀಡಬೇಕು” ಎಂದರು.

‘ಹಿಂದಿ ದಿವಸ್‌’ ಆಚರಣೆಗೆ ಕರ್ನಾಟಕ ಸೇರಿ ದಕ್ಷಿಣ ಭಾರತದ ಎಲ್ಲ ರಾಜ್ಯಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಹಿಂದಿ ಹೇರುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿ ಕೇಂದ್ರ ಸರ್ಕಾರದ ವಿರುದ್ಧ ಟ್ವಿಟರ್‌ನಲ್ಲಿ ಅಭಿಯಾನವೇ ಆರಂಭವಾಗಿದೆ. ಈ ವೇಳೆಯಲ್ಲಿ ಹಿಂದಿ ಪರವಾಗಿ ಮಾತನಾಡಿರುವ ಸುರೇಶ್ ಕುಮಾರ್ ವಿರುದ್ಧ ಕನ್ನಡಿಗರು ಕಿಡಿಕಾರಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top