fbpx
ಸಮಾಚಾರ

ಮಗಳ ತೊದಲು ಮಾತಿನ ವಿಡಿಯೋ ಹಂಚಿಕೊಂಡ ಯಶ್! ವಿಡಿಯೋ ವೈರಲ್

ರಾಕಿಂಗ್ ಸ್ಟಾರ್ ಯಶ್ ಮತ್ತು ಸ್ಯಾಂಡಲ್‍ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಜೋಡಿ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುತ್ತಾರೆ. ಅದರಲ್ಲೂ ಮಗಳು ಐರಾಳ ಮುದ್ದಾದ ಫೋಟೋ ಮತ್ತು ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಇದೀಗ ಯಶ್ ತಮ್ಮ ಮಗಳ ತೊದಲ ಮಾತಿನ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ.

 

 

View this post on Instagram

 

Ayra says Hi 🙂

A post shared by Yash (@thenameisyash) on

 

ಈ ವಿಡಿಯೋದಲ್ಲಿ ಯಶ್​ ಐರಾಳನ್ನ ಮಾತಾಡಿಸುತ್ತ, ಆಟವಾಡಿಸ್ತಾಯಿರ್ತಾರೆ. ಹಿಂದೆ ರಾಧಿಕಾ ಪಂಡಿತ್​ ಐರಾಳನ್ನ ರೆಡಿ ಮಾಡೋದಕ್ಕೆ ಕೈಯಲ್ಲಿ ಪೌಡರ್​ ಡಬ್ಬವನ್ನ ಹಿಡಿದು ಕೂತಿದ್ದಾರೆ. ಇತ್ತ ಯಶ್ ಐರಾ ಬೇಬಿ ಅಂತ ಕರೆದು ಎಲ್ಲರಿಗೂ ಹಾಯ್​ ಮಾಡು ಅಂದ್ರೆ, ಐರಾ ತನ್ನ ಪುಟ್ಟ ಕೈನಲ್ಲಿ ಎಲ್ಲಿರಿಗೂ ಹಾಯ್​ ಮಾಡಿದ್ದಾಳೆ.

ಇದನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ರಾಕಿ ಭಾಯ್ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದ್ದು, ಯಶ್ ಅಭಿಮಾನಿಗಳಂತು ರಾಕಿಂಗ್ ಮಗಳ ಚೆಂದದ ಚೆಲ್ಲಾಟಕ್ಕೆ ಫಿದಾ ಆಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top